ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
‘ಸೂಪರ್’ ಸಿನಿಮಾ ಮಾಡಿ ಸೂಪರ್ ಸ್ಟಾರ್ ಆದವ್ರಲ್ಲ ನಮ್ಮ ಉಪೇಂದ್ರ. ಪ್ಯಾನ್ ಇಂಡಿಯಾ ಜನ ಮೆಚ್ಚಿದ ಸೂಪರ್ ಹಿಟ್ ಸಿನಿಮಾಗಳಿಂದ ಸೂಪರ್ ಸ್ಟಾರ್ ಪಟ್ಟಕ್ಕೇರಿದವರು. ಸದ್ಯ ಟಾಲಿವುಡ್ ಸ್ಟಾರ್‌ಗಳೆಲ್ಲಾ ನಮ್ಮ ಉಪ್ಪಿ ಫ್ಯಾನ್ ಬಾಯ್ಸ್. ತೆಲುಗಿನ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಮ್ಮ ಉಪೇಂದ್ರ ಡೈಹಾರ್ಡ್ ಫ್ಯಾನ್ ಆದ ಕಥೆ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
ಟಾಲಿವುಡ್‌ನಲ್ಲಿ ಈ ತಿಂಗಳ ಅಂತ್ಯಕ್ಕೆ ತೆರೆ ಕಾಣಲಿರುವ ‘ಆಂಧ್ರ ಕಿಂಗ್ ತಾಲೂಕಾ’ ಸಿನಿಮಾ ಸುದ್ದಿಯಲ್ಲಿದೆ. ಬಹಳ ದಿನಗಳಿಂದ ಉಪೇಂದ್ರ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ಟೈಲರ್ ರಿಲೀಸ್ ಮೂಲಕ ಉತ್ತರ ಸಿಕ್ಕಿದೆ. ಟೈಲರ್ ನೋಡಿದ ಕ್ಷಣಕ್ಕೇ ಸಿನಿಮಾ ಒಂದು ಭಾವುಕ ಫ್ಯಾನ್-ಸ್ಟಾರ್ ಕಥೆಯನ್ನು ಹೇಳಲಿದೆ ಅನ್ನೋ ಫೀಲ್ ಬರುತ್ತದೆ. ಇಡೀ ಸಿನಿಮಾದಲ್ಲಿ ಉಪೇಂದ್ರ ಕಿಂಗ್ ಆಗಿ ಮಿಂಚುತ್ತಿದ್ದಾರೆ.
ಟಾಲಿವುಡ್ ಸ್ಟಾರ್‌ಗಳ ಪಾಲಿನ ಐಕಾನ್ ನಮ್ಮ ಉಪೇಂದ್ರ
ಸೂಪರ್ ಚಿತ್ರಕ್ಕೆ ಸೂಪರ್ ಸ್ಟಾರ್ ಆದವ್ರಲ್ಲ ಟ್ರೆಂಡ್ ಸೆಟ್ಟರ್
ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಈಗ ಆಂಧ್ರ ಕಿಂಗ್ ತಾಲೂಕಾ ಆಗಿದ್ದಾರೆ. ಉಪ್ಪಿ ಫ್ಯಾನ್ ಆಗಿ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೆನಿ ಅಭಿನಯಿಸಿದ್ದಾರೆ. ಬೇರೆ ಬೇರೆ ಇಂಡಸ್ಟ್ರಿಯ ಇಬ್ಬರು ಸೂಪರ್ ಸ್ಟಾರ್ಸ್ ಒಂದೇ ಫ್ರೇಮ್ ನಲ್ಲಿ ನೋಡೋದೇ ಮಿರಾಕಲ್ ಅಂತಿದ್ದಾರೆ ಫ್ಯಾನ್ಸ್. ಸದ್ಯ ಆಂಧ್ರ ಕಿಂಗ್ ತಾಲೂಕಾ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ರಾಮ್ ಪೋತಿನೆನಿ ಹಾಗು ಚಿತ್ರತಂಡ ಉಪ್ಪಿನ ಹಾಡಿ ಹೊಗಳಿದ್ದಾರೆ. ಎಸ್, ಉಪೇಂದ್ರ ಹಾಗು ರಾಮ್ ಸ್ಕ್ರೀನ್ ಶೇರ್ ಮಾಡಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಟ್ರೈಲರ್ ಬಿಡುಗಡೆ ಆಗಿದೆ.
ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಆಂಧ್ರ ಕಿಂಗ್ ತಾಲೂಕ ಕನ್ನಡ ವರ್ಷನ್ ಟ್ರೇಲರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದ್ರು. ರಿಲೀಸ್ ಆಗಿರೋ ಆಂಧ್ರ ಕಿಂಗ್ ಟ್ರೈಲರ್ ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ಸೂಪರ್ ಸ್ಟಾರ್ ಒಬ್ಬರ ಅಪ್ಪಟ ಅಭಿಮಾನಿಯ ಕಥೆ ಹೇಗೆ ಇರುತ್ತದೆ. ಏನೆಲ್ಲ ಆಗುತ್ತದೆ ಅನ್ನೋದು ಈ ಚಿತ್ರದಲ್ಲಿದೆ.
ಕಾಂತಾ ಕಾಂತಾ ಡೈಲಾಗ್ ಹೊಡೆದ ತೆಲುಗು ಸ್ಟಾರ್ ರಾಮ್
ಇದು ಸೂಪರ್ ಸ್ಟಾರ್ ಅಭಿಮಾನಿಯ ಬಯೋಪಿಕ್ ಕಥೆ..!
ಇನ್ನು ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ರಾಮ್ ಗೆ ಜೋಡಿಯಾಗಿದ್ದಾರೆ. ಈ ಚಿತ್ರವನ್ನು ಮಹೇಶ್ ಬಾಬು .ಪಿ ಡೈರೆಕ್ಷನ್ ಮಾಡಿದ್ದ ಇವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಕೂಡ ಇವರದ್ದೆ ಆಗಿದೆ. ಕಷ್ಟದಲ್ಲಿರೋ ಅಭಿಮಾನಿಯ ರಕ್ಷಣೆಗೆ ಆಂಧ್ರ ಕಿಂಗ್ ಉಪೇಂದ್ರ ಬರ್ತಾರಾ ಇಲ್ವಾ ಅನ್ನೋ ಕುತೂಹಲವನ್ನೂ ಟ್ರೈಲರ್ ನಲ್ಲಿ ಕ್ಲೂ ಕೊಟ್ಟಿದ್ದಾರೆ.
ಇನ್ನು ಇದೆ ವೇಳೆ ಉಪೇಂದ್ರ ಮಾತನಾಡಿ, ಎಲ್ಲಾ ಸಿನಿಮಾ ಮಾಡೋದಿಕ್ಕೆ ಒಂದೊಂದು ಕಾರಣ ಇರುತ್ತದೆ. ಸಬ್ಜೆಕ್ಟ್, ಮೆಸೇಜ್, ಸ್ಕ್ರೀನ್ ಪ್ಲೇ, ನಮಗೆ ಸಿಗುವ ಸ್ಕೋಪ್ ಇದೆಲ್ಲಾ ಕಾರಣ. ಆದರೆ ಈ ಸಿನಿಮಾ ಮಾಡಿರುವುದು ಅಭಿಮಾನಿಗಳಿಗೋಸ್ಕರ ಎಂದಿದ್ದಾರೆ. ಸಿನಿಮಾದಲ್ಲಿ ಉಪ್ಪಿ ಫ್ಯಾನ್ ಆಗಿರೋ ರಾಮ್ ಪೋತಿನೇನಿ I am God, God Is Great ಅನ್ನೋ ಉಪ್ಪಿ ಫ್ಯಾಮಿಲಿಯರ್ ಡೈಲಾಗ್ ಹೊಡೆದ್ರು. ಜೊತೆಗೆ ಚಿತ್ರದ ನಾಯಕಿ ಭಾಗ್ಯಶ್ರೀ ಬೋರ್ಸೆ ಕೂಡ ಮಾತನಾಡಿ ಇಬ್ಬರು ಸೂಪರ್ ಸ್ಟಾರ್ಸ್ ಜೊತೆ ಅಭಿನಯಿಸಿದ್ದು ನನ್ನ ಭಾಗ್ಯ ಎಂದಿದ್ದಾರೆ.
ಸದ್ಯ ಬಿಡುಗಡೆ ಆಗಿರೋ ಟ್ರೈಲರ್.. ಸಾಂಗ್ ಟ್ರೆಂಡಿಂಗ್ ನಲಿದೆ. ಇನ್ನುಳಿದಂತೆ ಚಿತ್ರದಲ್ಲಿ ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ತಾರಾಬಳಗದಲ್ಲಿದ್ದಾರೆ. ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್, ರವಿಶಂಕರ್ ನಿರ್ಮಿಸಿದ್ದಾರೆ. ಇದೇ ತಿಂಗಳ 27ಕ್ಕೆ ಆಂಧ್ರ ಕಿಂಗ್ ತಾಲೂಕ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
