ರಾಜ್ಯಾದ್ಯಂತ ‘ಅಮೃತಾಂಜನ್’ ರಿಲೀಸ್: ರಾಕಿಭಾಯ್ ಸರ್ಪ್ರೈಸ್ ವಿಶ್

Untitled design 2026 01 30T161001.851

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಶಾರ್ಟ್ ಮೂವಿಯಿಂದ ಸಿಲ್ವರ್ ಸ್ಕ್ರೀನ್‌ವರೆಗೆ ಜಿಗಿದ ಜಿದ್ದಿನ ಕನಸು ಅಮೃತ-ಅಂಜನ್ ಇಂದು ರಾಜ್ಯಾದ್ಯಂತ ಧಮಾಕಾ ಎಂಟ್ರಿ ಕೊಟ್ಟಿದೆ. ಈ ಸಂಭ್ರಮದ ನಡುವೆ ರಾಕಿಂಗ್ ಸ್ಟಾರ್ ಯಶ್ ಕಡೆಯಿಂದ ಬಂದ ಸರ್ಪ್ರೈಸ್ ವಿಶ್ ಚಿತ್ರತಂಡಕ್ಕೆ ಆನೆಬಲ ಸಿಕ್ಕಿದೆ.

ಇಂದಿನಿಂದ ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬಂದಿರುವ ‘ಅಮೃತ-ಅಂಜನ್’ ಸಿನಿಮಾ, ಶಾರ್ಟ್ ಮೂವಿಯಿಂದ ಬೆಳ್ಳಿತೆರೆಗೆ ಏರಿದ ಕನಸಿನ ಸಕ್ಸಸ್ ಸ್ಟೋರಿ ಆಗಿ ಮಿಂಚುತ್ತಿದೆ. ಒಮ್ಮೆ ನೋಡಿದರೆ ಸಾಕು ಮತ್ತೆ ಮತ್ತೆ ನೋಡಬೇಕು ಅನ್ನಿಸುವಷ್ಟು ನಗುವಿನ ಡೋಸ್ ಕೊಟ್ಟಿದ್ದ ಆ ಶಾರ್ಟ್ ಫಿಲ್ಮ್ ಈಗ ಫುಲ್ ಲೆಂಗ್ತ್ ಎಂಟರ್‌ಟೈನರ್ ಆಗಿ ಪ್ರೇಕ್ಷಕರ ಮುಂದೆ ಬಂದಿದೆ. ಚಿತ್ರಮಂದಿರಗಳಲ್ಲಿ ಮೊದಲ ದಿನವೇ ಹಬ್ಬದ ವಾತಾವರಣ ಕಂಡುಬಂದಿದ್ದು, ತಂಡವೇ ಸ್ವತಃ ಥಿಯೇಟರ್‌ಗೆ ಭೇಟಿ ನೀಡಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿ ಅವರ ಪ್ರತಿಕ್ರಿಯೆ ಕೇಳಿಕೊಂಡಿದೆ. ನಗುವಿನ ಗ್ಯಾರಂಟಿ ಜೊತೆಗೆ ಯೂತ್ ಎನರ್ಜಿ, ಫ್ರೆಶ್ ಕಥೆ  ‘ಅಮೃತ-ಅಂಜನ್’ ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ರಾಜ್ಯಾದ್ಯಂತ ‘ಅಮೃತಾಂಜನ್’ ರಿಲೀಸ್ ಜೋಷ್!

ರಾಕಿಭಾಯ್ ಸರ್ಪ್ರೈಸ್ ವಿಶ್.. ತಂಡಕ್ಕೆ ಆನೆಬಲ..!

ಅಮೃತಾಂಜನ್ ಅನ್ನೋ ಶಾರ್ಟ್ ಮೂವಿಯಿಂದ ಪ್ರೇಕ್ಷಕರ ಮನ ಗೆದ್ದ ಈ ತಂಡ, ಕಂಟೆಂಟ್ ಇದ್ದರೆ ವೇದಿಕೆ ದೊಡ್ಡದಾಗುತ್ತೆ ಅನ್ನೋದನ್ನು ಸಾಬೀತು ಮಾಡಿದೆ. ಸಣ್ಣ ಪರದೆ ಮೇಲೆ ಶುರುವಾದ ಪ್ರಯಾಣ, ಈಗ ಸಿಲ್ವರ್ ಸ್ಕ್ರೀನ್ ಮೇಲೆ ದೊಡ್ಡ ಹೆಜ್ಜೆ ಇಟ್ಟಿದೆ. ಜ್ಯೋತಿರಾವ್ ಮೋಹಿತ್ ಅವರ ನಿರ್ದೇಶನದಲ್ಲಿ ಗೌರವ್ ಶೆಟ್ಟಿ, ಶ್ರೀಭವ್ಯಾ, ಕಾರ್ತಿಕ್ ರುವಾರಿ ರೆಡ್ಡಿ, ಸುಧಾಕರ್, ಪಾಯಲ್ ಚೆಂಗಪ್ಪ ಅಭಿನಯ ಮಿಂಚಿದ್ದು, ರಾಘವೇಂದ್ರ ಸಂಗೀತದ ಮೂರು ಹಾಡುಗಳು ಸಿನಿಮಾಗೆ ಇನ್ನಷ್ಟು ಫೀಲ್ ಕೊಟ್ಟಿದೆ.ಸುಮಂತ್ ಆಚಾರ್ಯ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ರಿಚ್ ಲುಕ್ ನೀಡಿದೆ. ಇದು ಕೇವಲ ಸಿನಿಮಾ ಅಲ್ಲ, ತಂಡದವರಿಗೆ ಡ್ರೀಮ್ ಜರ್ನಿ.

ಈ ಸಂತಸದ ಮಧ್ಯೆ ತಂಡಕ್ಕೆ ಆನೆಬಲ ಕೊಟ್ಟಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ವಿಶ್.  ರಾಮಾಯಣ ಶೆಡ್ಯೂಲ್, ‘ಟಾಕ್ಸಿಕ್’ ಸಿನಿಮಾದ ತಯಾರಿಯಲ್ಲಿ ಮುಳುಗಿದ್ದರೂ, ಹೊಸ ತಂಡದ ಪ್ರಯತ್ನಕ್ಕೆ ಯಶ್ ಮೆಚ್ಚುಗೆ ಸೂಚಿಸಿ ತಮ್ಮ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇರುವ ಇನ್ಸ್ಟಾಗ್ರಾಮ್ ಸ್ಟೋರಿ ನಲ್ಲಿ ಚಿತ್ರತಂಡವನ್ನು ಟ್ಯಾಗ್ ಮಾಡಿ ಹಾರೈಸಿದ್ದಾರೆ. ನಿಮ್ಮ ಕೆಲಸವನ್ನು ನಾನು ಕೂಡ ಆನಂದಿಸಿದ್ದೇನೆ, ಶಾರ್ಟ್ ಮೂವಿಯಿಂದ ಸಿನಿಮಾದ ತನಕ ತಂದಿರುವ ನಿಮ್ಮ ಪ್ರಯಾಣವೇ ಸ್ಪೂರ್ತಿ ಎಂದು ಬರೆದು ಯಶ್ ನೀಡಿದ ಪ್ರೋತ್ಸಾಹ ಚಿತ್ರತಂಡಕ್ಕೆ ದೊಡ್ಡ ಶಕ್ತಿ ಆಗಿದೆ. ರಾಕಿ ಬಾಯ್ ಕಡೆಯಿಂದ ಬಂದ ಈ ಮೆಚ್ಚುಗೆ  ತಂಡಕ್ಕೆ ಮೋಟಿವೇಶನ್ ಬೂಸ್ಟರ್ ತಂದಿದೆ.

 

ನಗುವಿನ ಹೈಪರ್ ಡೋಸ್, ಕಂಟೆಂಟ್ ಕಿಂಗ್ ಚಿತ್ರ

ಫ್ರಸ್ಟ್ರೇಷನ್‌ಗೆ ಫನ್ ಮಿಕ್ಸ್..ಯೂತ್ ಎನರ್ಜಿ, ಫ್ರೆಶ್ ಕಥೆ

ಒಂದು ಕನಸು ಒಂದು ಕಂಟೆಂಟ್ ಒಂದು ತಂಡದ ಜಿದ್ದಾತನ  ಈಗ ‘ಅಮೃತ-ಅಂಜನ್’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ನಗುವಿನ ಅಲೆ ಎಬ್ಬಿಸಿದೆ. ಯೂಟ್ಯೂಬ್‌ನಿಂದ ಥಿಯೇಟರ್‌ವರೆಗೆ ಬಂದ ಈ ಜರ್ನಿ, ಇನ್ನಷ್ಟು ಯುವ ಪ್ರತಿಭೆಗಳಿಗೆ ಸ್ಪೂರ್ತಿ ಆಗಲಿದೆ ಅನ್ನೋದು ಖಚಿತ. ಯಶ್ ಅವರ ಆಶೀರ್ವಾದ, ಪ್ರೇಕ್ಷಕರ ಪ್ರೀತಿ, ತಂಡದ ಆತ್ಮವಿಶ್ವಾಸ  ಈ ಮೂರೂ ಸೇರಿ ‘ಅಮೃತ-ಅಂಜನ್’ಗೆ ಪವರ್‌ಫುಲ್ ಸ್ಟಾರ್ಟ್ ಕೊಟ್ಟಿವೆ. ಈಗ ಪ್ರಶ್ನೆ ಒಂದೇ ಈ ನಗುವಿನ ಡೋಸ್ ಬಾಕ್ಸ್ ಆಫೀಸ್‌ನಲ್ಲೂ ಸಖತ್ ಸೌಂಡ್ ಮಾಡುತ್ತದೆಯಾ? ಕಾದು ನೋಡೋಣ

 

 

Exit mobile version