ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಹಾಗೂ ವಿಕಟಕವಿ ಯೋಗರಾಜ್ ಭಟ್ ಕಾಂಬಿನೇಷನ್ ಅಂದ್ರೆ ಸಾಕಷ್ಟು ಹಿಟ್ ಸಾಂಗ್ಸ್ ನೆನಪಾಗುತ್ತವೆ. ಆದ್ರೀಗ ನ್ಯೂ ಇಯರ್ ವಿಶೇಷ, ಅಮಲು ಸಾಂಗ್ನ ಘಮಲಿನೊಂದಿಗೆ ಮತ್ತೊಮ್ಮೆ ಸೌಂಡ್ ಮಾಡ್ತಿದೆ ಈ ಕಾಂಬೋ.
ಹಾಲು ಕುಡಿದ ಮಕ್ಕಳೇ ಬದುಕಲ್ಲ ಎಂಬ ಹಿಟ್ ಸಾಂಗ್ ಗೆ ಕಾಂಬಿನೇಶನ್ ಆಗಿದ್ದ ವಿಕಟಕವಿ ಯೋಗರಾಜ್ ಭಟ್ ಹಾಗೂ ನಟ ಶರಣ್ ಇದೀಗ ಎಣ್ಣೆ ಪ್ರಿಯರಿಗೆ ಅಮಲು ಏರಿಸೋ ಹಾಡು ಕೊಟ್ಟಿದ್ದಾರೆ. ಹೊಸವರ್ಷಕ್ಕೆ ಯೋಗರಾಜ್ ಭಟ್ ಅವರ ಕಲ್ಪನೆ ಮತ್ತು ಸಾಹಿತ್ಯಕ್ಕೆ ಶರಣ್ ಅವರ ಧ್ವನಿಯಿಂದ ಮೂಡಿಬಂದಿರೋ ಅಮಲು ಹಾಡು ಬಿಡುಗಡೆಯಾಗಿದೆ.
ಅಮಲಿನೊಂದಿಗೆ ಹೊಸವರ್ಷ ಸ್ವಾಗತಿಸಿದ ಯೋಗರಾಜ್
ಭಟ್ಟರ ಸಾಹಿತ್ಯಕ್ಕೆ ಶರಣ್ ಧ್ವನಿ ಅಮಲು ಏರಿಸಿದ ಜೋಡಿ
ಯೋಗರಾಜ್ ಭಟ್ ಬರೆದ ನಾವ್ ಮನೆಗ್ ಹೊಗೋದಿಲ್ಲ, ಖಾಲಿ ಕ್ವಾಟರ್ ಹೀಗೆ ಎಣ್ಣೆ ಹಾಡುಗಳಿಗೆ ರಾಯಭಾರಿಯಾಗಿರೋ ಭಟ್ರು ಅಮಲು ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಮಲು ಆಲ್ಬಮ್ನ ಮೊದಲ ಸಾಂಗ್ ಇದಾಗಿದ್ದು ಈ ಹಾಡಿಗೆ ಯೋಗರಾಜ್ ಭಟ್ ಲಿರಿಕ್ಸ್ ಬರೆದು, ಶರಣ್ ಹಾಡಿದ್ದಾರೆ. ಚೇತನ್ ದ್ಯಾವಿ ಲಿರಿಕ್ಸ್ ಬರೆದಿದ್ದಾರೆ. ಮಹದೇವ್ ಕನಕಪುರ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಅಮಲು ಹಾಡು ಬರೆಯಲು ಕುಡುಕ ಸ್ಪೂರ್ತಿ ಎಂದ ಭಟ್ರು
ಹಿಟ್ ಕಾಂಬಿನೇಶನ್ ನ ಮತ್ತೊಂದು ಹಿಟ್ ಸಾಂಗ್
ಇನ್ನು ಇದೆ ವೇಳೆ ನಿರ್ಮಾಪಕ ಮಹದೇವಪ್ಪ ಆರ್ ಕನಕಪುರ, ಸಂಗೀತ ನಿರ್ದೇಶಕ ಚೇತನ್, ಹುಲಿ ಕಾರ್ತಿಕ್, ನಿರ್ವಹಣೆ ಮಾಡಿರುವ ಗಡ್ಡ ವಿಜಿ, ಸುಖದ ರುವಾರಿ ಹರೀಶ್ ಹಾಗೂ ಭರತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನಟರಾದ ಸುಮುಖ ಹಾಗೂ ಪೃಥ್ವಿ ಶಾಮನೂರು ಅಮಲು ಯಶಸ್ವಿಯಾಗಲೆಂದು ಹಾರೈಸಿದರು.
