ಲಾಯ್ಡ್ ಸ್ಟೀವನ್ಸ್ ಗರಡಿಯಲ್ಲಿ ಅಲ್ಲು ಅರ್ಜುನ್ ಕಸರತ್ತು

ಇಂಟರ್ ನ್ಯಾಷನಲ್ ಟ್ರೈನರ್ ಜೊತೆ ಐಕಾನ್ ಸ್ಟಾರ್..!

Untitled design 2025 05 04t164629.564

ಪುಷ್ಪ ಅಂದ್ರೆ ನ್ಯಾಷನಲ್ ಅಂದ್ಕೊಂಡ್ರಾ..? ನೋ ವೇ.. ಆತ ಇಂಟರ್‌‌ನ್ಯಾಷನಲ್. ಹೌದು.. ಅದನ್ನ ಪುಷ್ಪ-2 ಮೂಲಕ ಪ್ರೂವ್ ಮಾಡಿ ತೋರಿಸಿದ್ರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಇದೀಗ ಆ ಸಿನಿಮಾ ಡೈಲಾಗ್ನ ರಿಯಲ್ ಲೈಫ್ನಲ್ಲೂ ನಿಜವಾಗಿಸೋಕೆ ಹೊರಟಿದ್ದಾರೆ. ಅಲ್ಲುಅಟ್ಲೀ ಸಿನಿಮಾ ಹಾಲಿವುಡ್ ರೇಂಜ್ಗೆ ಇರಲಿದ್ದು, ಅದಕ್ಕಾಗಿ ಇಂಟರ್ನ್ಯಾಷನಲ್ ಫಿಟ್ನೆಸ್ ಟ್ರೈನರ್ ಮೊರೆ ಹೋಗಿದ್ದಾರೆ ಸ್ಟೈಲಿಶ್ ಸ್ಟಾರ್.

ADVERTISEMENT
ADVERTISEMENT

ಕೆಜಿಎಫ್ ಬಳಿಕ ಯಶ್ ನಸೀಬು ಹೇಗೆ ಬದಲಾಯ್ತೋ, ಅದೇ ರೀತಿ ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ಅದೃಷ್ಠ ಕಂಪ್ಲೀಟ್ ಬದಲಾಗಿದೆ. ಅವ್ರ ಸ್ಟಾರ್ಡಮ್ ಜೊತೆ ರೆಮ್ಯೂನರೇಷನ್, ಸಿನಿಮಾ ಮಾಡುವ ಸ್ಕೇಲ್, ಆಲೋಚನಾ ಲಹರಿ ಎಲ್ಲವೂ ದೊಡ್ಡದಾಗ್ತಿವೆ. ಅದೇ ಕಾರಣದಿಂದ ಜನರ ನಿರೀಕ್ಷೆಗೆ ತಕ್ಕನಾದ ಸಿನಿಮಾ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್.

ಬಾಲಿವುಡ್ ಬಾದ್‌ಷಾ ಕಿಂಗ್ ಖಾನ್ ಶಾರೂಖ್‌ಗೆ ಜವಾನ್ ಅನ್ನೋ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಂತಹ ತಮಿಳು ಡೈರೆಕ್ಟರ್ ಅಟ್ಲೀ ಜೊತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೊಲ್ಯಾಬೊರೇಟ್ ಆಗಿದ್ದಾರೆ. ಇವರಿಬ್ಬರ ಕಾಂಬೋನಲ್ಲಿ ತಯಾರಾಗ್ತಿರೋ ಸೈನ್ಸ್ ಫಿಕ್ಷನ್ ಮೂವಿಯನ್ನ 800 ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಿಸಲಾಗ್ತಿದೆಯಂತೆ. ಅಂದಹಾಗೆ ಸಿನಿಮಾ ಈಗಾಗ್ಲೇ ಅನೌನ್ಸ್ ಆಗಿದ್ದು, ಅದಕ್ಕಾಗಿ ಹಾಲಿವುಡ್ ಸ್ಟುಡಿಯೋಗಳಲ್ಲಿ ಕ್ಯಾರೆಕ್ಟರ್ ಲುಕ್ ಟೆಸ್ಟ್ ಮಾಡಿರೋ ವಿಡಿಯೋ ಎಲ್ಲರ ಹುಬ್ಬೇರಿಸಿದೆ.

ಅಂದಹಾಗೆ ಸಿನಿಮಾಗೆ ಸದ್ಯ AA22xA6 ಅಂತ ಹೆಸರಿಡಲಾಗಿದೆ. ಇದರ ಅರ್ಥ ಅಲ್ಲು ಅರ್ಜುನ್‌ರ 22ನೇ ಸಿನಿಮಾ ಹಾಗೂ ಅಟ್ಲೀ ಅವ್ರ 6ನೇ ವೆಂಚರ್. ಸನ್ ಪಿಕ್ಚರ್ಸ್‌ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇದೇ ಆಗಸ್ಟ್ ಹಾಗೂ ಅಕ್ಟೋಬರ್‌‌ನಿಂದ ಶೂಟಿಂಗ್ ಕಿಕ್‌ಸ್ಟಾರ್ಟ್‌ ಆಗಲಿದೆ ಎನ್ನಲಾಗ್ತಿದೆ.

ಜಾಹ್ನವಿ ಕಪೂರ್‌‌ ಈ ಚಿತ್ರದ ನಾಯಕಿ ಆಗಲಿದ್ದು, ಅಲ್ಲು ಅರ್ಜುನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ದಿಶಾ ಪಟಾನಿ, ಶ್ರದ್ಧಾ ಕಪೂರ್, ಪ್ರಿಯಾಂಕಾ ಚೋಪ್ರಾ ಕೂಡ ತಾರಾಗಣದಲ್ಲಿ ಇರಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಇಂಡಿಯನ್ ಎಮೋಷನ್ಸ್ ನ ಇಂಟರ್ ನ್ಯಾಷನಲ್ ತಂತ್ರಜ್ಞಾನದ ಜೊತೆ ಬ್ಲೆಂಡ್ ಮಾಡಿ ಮಾಡಲಾಗ್ತಿದೆ. ವಿಎಫ್‌ಎಕ್ಸ್ ಗೆ ಜಾಸ್ತಿ ಒತ್ತು ಕೊಡಲಾಗ್ತಿದ್ದು, ಪ್ರೆಸೆಂಟೇಷನ್ ತುಂಬಾ ಫ್ರೆಶ್ ಫೀಲ್ ಕೊಡಲಿದೆಯಂತೆ.

ಅಂದಹಾಗೆ ಈ ಸಿನಿಮಾಗಾಗಿ ಅಲ್ಲು ಅರ್ಜುನ್ ಮಹಾ ತಪಸ್ಸು ಶುರು ಮಾಡಿದ್ದು, ಹಗಲಿರುಳು ಕೆಲಸ ಮಾಡ್ತಿದ್ದಾರಂತೆ. ಈಗಾಗ್ಲೇ ದುಬೈನಲ್ಲಿ ಟಫ್ ವರ್ಕೌಟ್ ಶುರುವಾಗಿದ್ದು, ಇಂಟರ್‌‌ನ್ಯಾಷನಲ್ ಫಿಟ್ನೆಸ್ ಟ್ರೈನರ್ ಲಾಯ್ಡ್ ಸ್ಟೀವನ್ಸ್ ಗರಡಿಯಲ್ಲಿ ಪಳಗುತ್ತಿದ್ದಾರಂತೆ ಅಲ್ಲು ಅರ್ಜುನ್. ಪ್ರತೀ ದಿನ ಐದಾರು ಗಂಟೆಗಳ ಕಾಲ ದೇಹವನ್ನು ದಂಡಿಸುತ್ತಿರೋ ಪುಷ್ಪ ಸ್ಟಾರ್, ದೇಶಮುದುರು ಸಿನಿಮಾದಲ್ಲಿನ ಸಿಕ್ಸ್ ಪ್ಯಾಕ್ ರೀತಿ ದೇಹವನ್ನು ಹುರಿಗೊಳಿಸುತ್ತಿದ್ದಾರಂತೆ.

ಈಗಾಗ್ಲೇ ವಿಶ್ವ ದರ್ಜೆಯ ಫಿಟ್ನೆಸ್ ಟ್ರೈನರ್ ಅನಿಸಿಕೊಂಡಿರೋ ಲಾಯ್ಡ್ ಸ್ವೀವನ್ಸ್ ತ್ರಿಬಲ್ ಆರ್ ಸಿನಿಮಾಗಾಗಿ ಜೂನಿಯರ್ ಎನ್‌ಟಿಆರ್‌‌ನ ಟ್ರೈನ್ ಮಾಡಿದ್ರು. ಇದೀಗ ರಾಜಮೌಳಿ ಡೈರೆಕ್ಟ್ ಮಾಡ್ತಿರೋ ಸಿನಿಮಾಗಾಗಿ ಪ್ರಿನ್ಸ್ ಮಹೇಶ್ ಬಾಬುರನ್ನ ಟ್ರೈನ್ ಮಾಡ್ತಿರೋದು ಕೂಡ ಇದೇ ಇಂಟರ್‌‌ನ್ಯಾಷನಲ್ ಫಿಟ್ನೆಸ್ ಟ್ರೈನರ್ ಅನ್ನೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version