ಪುಷ್ಪ-2 ಬಳಿಕ ಹಾಲಿವುಡ್ ಶೈಲಿಯ ಸೈನ್ಸ್ ಫಿಕ್ಷನ್ ಫಿಲ್ಮ್‌ಗೆ ಗ್ರೀನ್ ಸಿಗ್ನಲ್ ನೀಡಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ AA22xA6 ಸಿನಿಮಾಗೆ ಮತ್ತೊಬ್ಬ ನಾಯಕನಟಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗ್ಲೇ ರಶ್ಮಿಕಾ, ದೀಪಿಕಾ ಹಾಗೂ ಜಾಹ್ನವಿ ಕಪೂರ್ ಈ ಟೀಂನಲ್ಲಿದ್ದು, ಮೃಣಾಳ್ ಎಂಟ್ರಿ ಹತ್ತು ಹಲವು ಗುಮಾನಿಗಳಿಗೆ ಸಾಕ್ಷಿ ಆಗಿದೆ. ಅರೇ.. ಹಾಗಾದ್ರೆ ಎಷ್ಟು ಮಂದಿ ಹೀರೋಯಿನ್ಸ್ ಗುರು ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.
- ರಶ್ಮಿಕಾ, ದೀಪಿಕಾಗೆ ಶಾಕ್.. ಅಲ್ಲು ಅರ್ಜುನ್ ಅಡ್ಡಾಗೆ ಮೃಣಾಲ್
- ಒಂದಲ್ಲ ಎರಡಲ್ಲ ನಾಲ್ಕು ಪಾತ್ರ ಪೋಷಿಸ್ತಿದ್ದಾರೆ ಐಕಾನ್ ಸ್ಟಾರ್..!
- ಶ್ರೀವಲ್ಲಿ ರಶ್ಮಿಕಾ ಇಲ್ಲಿ ವಿಲನ್.. ನ್ಯಾಷನಲ್ ಕ್ರಶ್ ಹೊಸ ವರಸೆ..!
- ಈ ಸೈನ್ಸ್ ಫಿಕ್ಷನ್ ಬಜೆಟ್ 800 ಕೋಟಿ.. ಅಟ್ಲೀ-ಅಲ್ಲು ಕಮಾಲ್
ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ಹೇಳಿದಂತೆ ನ್ಯಾಷನಲ್ ಮಾತ್ರವಲ್ಲ. ಈಗ ಇಂಟರ್‌ನ್ಯಾಷನಲ್. ಹೌದು.. ಅವ್ರ ಸ್ಟಾರ್ಡಮ್‌ಗೆ ತಕ್ಕನಾದ ಪ್ರಾಜೆಕ್ಟ್‌ಗೆ ಕೈ ಹಾಕಿದ್ದು, ಹಾಲಿವುಡ್ ಶೈಲಿಯ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಅದೇ AA22xA6. ಇದು ಜಸ್ಟ್ ಸಾಂದರ್ಭಿಕ ಟೈಟಲ್ ಆಗಿದ್ದು, ಅಲ್ಲು ಅರ್ಜುನ್‌ರ 22ನೇ ಹಾಗೂ ಅಟ್ಲೀ 6ನೇ ಸಿನಿಮಾ ಆಗಿದೆ.
ಸೈನ್ಸ್ ಫಿಕ್ಷನ್ ಎಂಟರ್‌ಟೈನ್ ಸಿನಿಮಾ ಇದಾಗಿದ್ದು, ಹೆವಿ ಗ್ರಾಫಿಕ್ಸ್ ಹಾಗೂ ವಿಎಫ್‌ಎಕ್ಸ್‌ನಿಂದ ಕೂಡಿರಲಿದೆ ಎನ್ನಲಾಗ್ತಿದೆ. ಅಂದಹಾಗೆ ಇದನ್ನ ಸನ್ ಪಿಕ್ಚರ್ಸ್ ಬ್ಯಾನರ್ ಅದ್ದೂರಿಯಾಗಿ ನಿರ್ಮಾಣ ಮಾಡ್ತಿದ್ದು, ಈಗಾಗ್ಲೇ ಅಲ್ಲು ಅರ್ಜುನ್ ಲುಕ್‌ಟೆಸ್ಟ್ ವಿಡಿಯೋ ಹಾಗೂ ದೀಪಿಕಾ ಪಡುಕೋಣೆ ವಿಡಿಯೋಗಳು ಟಾಕ್ ಆಫ್ ದಿ ಟೌನ್ ಆಗಿವೆ.
ಅಂದಹಾಗೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ದೀಪಿಕಾ ಪಡುಕೋಣೆ, ಜಾಹ್ನವಿ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಾಯಕಿಯರಾಗಿ ನಟಿಸ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಅಡ್ಡಾಗೆ ಮತ್ತೊಬ್ಬ ಸೆನ್ಸೇಷನಲ್ ನಟೀಮಣಿ ಜಾಯಿನ್ ಆಗಿದ್ದಾರೆ. ಹೌದು.. ಮೃಣಾಲ್ ಠಾಕೂರ್ ಕೂಡ ಅಲ್ಲು ಅರ್ಜುನ್ ಜೊತೆ ನಟಿಸ್ತಿದ್ದು, ಇದ್ರಿಂದ ದೀಪಿಕಾ ಹಾಗೂ ರಶ್ಮಿಕಾ ಇಬ್ಬರಿಗೂ ಶಾಕ್ ಆಗಿದೆ ಎನ್ನಲಾಗ್ತಿದೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ.
ಇಷ್ಟು ಮಂದಿ ಹೀರೋಯಿನ್ಸ್ ಏನಕ್ಕೆ ಗುರು ಅಂತ ಹುಬ್ಬೇರಿಸುವವರು ಈ ಮ್ಯಾಟರ್ ಕೇಳಲೇಬೇಕು. ಅಲ್ಲು ಅರ್ಜುನ್ ಇಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಪಾತ್ರಗಳಲ್ಲಿ ಕಾಣಸಿಗಲಿದ್ದಾರಂತೆ. ತಾತಾ, ಮಗ ಹಾಗೂ ಒಬ್ಬರು ಮೊಮ್ಮಕ್ಕಳ ಪಾತ್ರಗಳನ್ನ ಅಲ್ಲು ಅರ್ಜುನ್ ನಿಭಾಯಿಸ್ತಿದ್ದು, ಮೂವರು ನಾಯಕಿಯರ ಅವಶ್ಯಕತೆ ಯಿದೆ.
ಅಷ್ಟೇ ಅಲ್ಲ ಖಡಕ್ ಖಳನಾಯಕಿಯಾಗಿ ಪುಷ್ಪ ಪತ್ನಿ ಶ್ರೀವಲ್ಲಿಯೇ ಬಣ್ಣ ಹಚ್ಚುತ್ತಿದ್ದಾರಂತೆ. ಹೌದು.. ರಶ್ಮಿಕಾ ಈ ಚಿತ್ರದ ಖಳನಾಯಕಿ. ಅವರ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ನೆಗೆಟೀವ್ ಶೇಡ್ ಪಾತ್ರ ಮಾಡ್ತಿದ್ದು, ಅತೀವ ನಿರೀಕ್ಷೆ ಮೂಡಿಸಿದೆ ಈ ಸಿನಿಮಾ. ಸೋ.. ಇಲ್ಲಿ ಗ್ಲಾಮರ್ ಜೊತೆ ಸಾಕಷ್ಟು ಸಸ್ಪೆನ್ಸ್ ಥ್ರಿಲ್ ಕಟ್ಟಿಟ್ಟ ಬುತ್ತಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್