ಪದ್ಮಭೂಷಣ ನಂದಮೂರಿ ಬಾಲಕೃಷ್ಣಗೆ ಡಬಲ್ ಧಮಾಕ. ಸಿನಿಮಾ, ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುವ ಬಾಲಯ್ಯ, ಮತ್ತೊಮ್ಮೆ ಅಖಂಡ ತಾಂಡವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತಷ್ಟು ಪವರ್‌ಫುಲ್ ಆಗಿ ಕಾಣಲಿರೋ ಬಾಲಯ್ಯನ ಖದರ್‌ಗೆ ನೋಡುಗರು ಬೆಚ್ಚಿಬೀಳೋದು ಗ್ಯಾರಂಟಿ.
- ದಸರಾಗೆ ಬಾಲಯ್ಯ ಮತ್ತೆ ‘ಅಖಂಡ’ ತಾಂಡವಂ ಶುರು
- ಅಖಂಡಗಿಂತ ಜೋರು ಅಖಂಡ 2.. ಟೀಸರ್ ಬೆಂಕಿ ಗುರು
- 65ನೇ ವಸಂತಕ್ಕೆ ಕಾಲಿಟ್ಟ ಬಾಲಕೃಷ್ಣಗೆ ಪದ್ಮಭೂಷಣ ಗರಿ..!
- ಬಾಲಯ್ಯ ಎನರ್ಜಿ ಹೌಸ್.. ಈ ಬಾರಿ ರಾಕ್ಷಸ ಸಂಹಾರ..!
ಇದು ಅಖಂಡ-2 ಚಿತ್ರದ ಟೀಸರ್ ಝಲಕ್. ಬರ್ತ್ ಡೇ ಸಂಭ್ರಮದಲ್ಲಿರೋ ನಂದಮೂರಿ ಬಾಲಕೃಷ್ಣಗೆ ಚಿತ್ರತಂಡ ನೀಡಿರೋ ಭರ್ಜರಿ ಗಿಫ್ಟ್ ಕೂಡ ಹೌದು. ಅಂದಹಾಗೆ ಇದು 2021ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಹಿಟ್ ಮೂವಿ ಅಖಂಡ ಸೀಕ್ವೆಲ್. ಆ ಸಿನಿಮಾ 150 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ನಿಂದ ಎಲ್ಲರ ಹುಬ್ಬೇರಿಸಿತ್ತು. ಇದೀಗ ಅಖಂಡ ರೆಕಾರ್ಡ್ಸ್ ಬ್ರೇಕ್ ಮಾಡೋ ರೇಂಜ್‌ಗೆ ಅಖಂಡ-2 ಟೀಸರ್ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.
ದೈವ ಹಾಗೂ ದುಷ್ಠ ಶಕ್ತಿಯ ಮಹಾಕಾಳಗದ ಜೊತೆ ಜೊತೆಗೆ ಹಿಮಾಲಯ ಪರ್ವತಗಳಲ್ಲಿ ಗನ್‌ಗಳ ಮೊರೆತ ಕೂಡ ಜೋರಿರಲಿದೆ. ನೋಡ್ತಿದ್ರೆ ಈ ಬಾರಿ ನ್ಯಾಷನಲ್ ಸೆಕ್ಯೂರಿಟಿ ವಿಚಾರವಾಗಿ ಕಥೆ ಹೆಣೆದಂತಿದೆ ಬೋಯಪಾಟಿ ಶ್ರೀನು. ಮೇಕಿಂಗ್ ಸಖತ್ ಮಜಬೂತಾಗಿದ್ದು, ತಮನ್ ಮ್ಯೂಸಿಕ್ ಕೂಡ ಇಂಪ್ರೆಸ್ಸೀವ್ ಆಗಿದೆ. ಅಂದಹಾಗೆ ಸಿನಿಮಾನ ದಸರಾ ಹಬ್ಬದ ವಿಶೇಷ ಇದೇ ಸೆಪ್ಟೆಂಬರ್ 25ಕ್ಕೆ ಪ್ರೇಕ್ಷಕರ ಮುಂದೆ ತರುವ ಧಾವಂತದಲ್ಲಿದ್ದಾರೆ ಬಾಲಯ್ಯ.