ಹೊಸ ‘ಪಾರ್ಟ್ನರ್’ ಜೊತೆ ಅಜಯ್‌ ರಾವ್ ರೊಮ್ಯಾನ್ಸ್..!

Untitled design (79)

ರಿಯಲ್ ಪಾರ್ಟ್ನರ್ ಜೊತೆ ಕಿರಿಕ್ ಮಾಡಿಕೊಂಡು ಫ್ಯಾಮಿಲಿ ಕೋರ್ಟ್ ತನಕ ಸಾಗಿದ್ದ ಸ್ಯಾಂಡಲ್‌ವುಡ್ ಹೀರೋ ಅಜಯ್ ರಾವ್, ಸದ್ಯ ಹೊಸ ಪಾರ್ಟ್ನರ್‌‌ನ ಹುಡುಕಿಕೊಂಡಿದ್ದಾರೆ. ಆಕೆ ಜೊತೆ ಸಖತ್ ರೊಮ್ಯಾಂಟಿಕ್ ಮೂಡ್‌‌ನಲ್ಲಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಇಷ್ಟಕ್ಕೂ ಅಜಯ್ ರಾವ್ ನ್ಯೂ ಪಾರ್ಟ್ನರ್ ಯಾರು..? ಎಲ್ಲೆಲ್ಲಿ ಸುತ್ತಾಡ್ತಿದ್ದಾರೆ..? ನೀವೇ ಒಮ್ಮೆ ನೋಡಿ..

ಸ್ಯಾಂಡಲ್‌ವುಡ್‌ನ ಕಿಂಗ್ ಆಫ್ ರೊಮ್ಯಾನ್ಸ್ ಅಂತ ಹೊಸ ಬಿರುದು ಪಡೆದಿರೋ ನಟ ಅಜಯ್ ರಾವ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ರಿಯಲ್ ಲೈಫ್ ಪಾರ್ಟ್ನರ್ ಜೊತೆ ಕಿರಿಕ್ ಮಾಡಿಕೊಂಡು, ಫ್ಯಾಮಿಲಿ ಕೋರ್ಟು ಕಚೇರಿ ಅಂತೆಲ್ಲಾ ಸುತ್ತಾಡಿ ಸುದ್ದಿಯಾಗಿದ್ದ ಅಜಯ್ ರಾವ್, ಇದೀಗ ಹೊಸ ಪಾರ್ಟ್ನರ್‌‌ನ ಹುಡುಕಿಕೊಂಡಿದ್ದಾರೆ. ಅರೇ ನಿಜಾನಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಅಜಯ್ ರಾವ್ ಪಾರ್ಟ್ನರ್ ಅನ್ನೋ ಹೊಚ್ಚ ಹೊಸ ಸಿನಿಮಾ ಮಾಡ್ತಿದ್ದಾರೆ. ಇನ್‌ಫ್ಯಾಕ್ಟ್ ಅದ್ರ ಕಲರ್‌‌ಫುಲ್ ಆಗಿರೋ ಫಸ್ಟ್ ಸಾಂಗ್ ಕೂಡ ರಿಲೀಸ್ ಆಗಿದೆ.

ಮಳೆ, ಧೈರ್ಯಂ, ದಿಲ್ ಪಸಂದ್ ಅನ್ನೋ ಚಿತ್ರಗಳನ್ನ ನೀಡಿದ್ದ ನಿರ್ದೇಶಕ ಶಿವತೇಜಸ್ ಈ ಪಾರ್ಟ್ನರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಅಜಯ್‌ ‌ರಾವ್‌ಗೆ ಅಪ್ಪಟ ಕನ್ನಡತಿ, ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಹೊಸ ಪಾರ್ಟ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಅಮೇರಾ ಅನ್ನೋ ಈ ಹಾಡು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿದ್ದು, ಇಬ್ರ ನಡುವಿನ ಕೆಮಿಸ್ಟ್ರಿ ಸಖತ್ ಇಂಪ್ರೆಸ್ಸೀವ್ ಆಗಿದೆ. ಅಂದಹಾಗೆ ಅಮೋರಾ ಅಂದ್ರೆ ಸ್ಪ್ಯಾನಿಶ್ ಭಾಷೆಯಲ್ಲಿ ‘ಲವ್ ಯೂ’ ಎಂದರ್ಥ. ನಾಗಾರ್ಜುನ್ ಶರ್ಮಾ ಪೋಣಿಸಿರೋ ಪದಪುಂಜಕ್ಕೆ ಬಾಲಿವುಡ್‌ನ ಫೇಮಸ್ ಸಿಂಗರ್ ಕುನಾಲ್ ಗಂಜಾವಾಲಾ ಕಂಠ ಹಾಗೂ ನಕುಲ್ ಅಭ್ಯಂಕರ್ ಸಂಗೀತ ಕಿಕ್ ಕೊಡ್ತಿದೆ.

ಸಾಂಗ್ ಲಾಂಚ್ ಇವೆಂಟ್‌‌ನಲ್ಲಿ ಇನ್ಮುಂದೆ ಎಲ್ಲಾ ಸಿನಿಮಾಗಳನ್ನು ಪ್ರಚಾರ ಮಾಡಲ್ಲ ಅನ್ನೋ ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ರು ನಟ ಅಜಯ್ ರಾವ್. ನಟಿಯರಿಗೂ ನಟನಷ್ಟೇ ಈಕ್ವಲ್ ಇಂಪಾರ್ಟೆನ್ಸ್ ಸಿಗ್ಬೇಕು. ಅದಕ್ಕಾಗಿಯೇ ಬೃಂದಾ ಹೆಸರು ಪೋಸ್ಟರ್‌‌ನಲ್ಲಿ ಮೊದಲಿದೆ ಎಂದು ಹೇಳುತ್ತಾ.. ರಾಧಿಕಾ ಪಂಡಿತ್, ರಚಿತಾ ರಾಮ್‌ನ ನೆನೆದರು ಅಜಯ್. ಅಲ್ಲದೆ ನಟಸಾರ್ವಭೌಂ ಡಾ ರಾಜ್‌ಕುಮಾರ್, ಶಂಕರ್ ನಾಗ್, ವಿಷ್ಣುದಾದಾ ನಂಗೆ ಸ್ಫೂರ್ತಿ ಎಂದರು.

ಅನಿಕಾ ಅನ್ನೋ ಸಖತ್ ಗ್ಲಾಮರಸ್ ರೋಲ್‌ನಲ್ಲಿ ಕಾಣಿಸಿಕೊಂಡಿರೋ ಬೃಂದಾ, ನನ್ನ ಕರಿಯರ್‌ನಲ್ಲೇ ಅಮೋರಾ ದಿ ಬೆಸ್ಟ್ ಸಾಂಗ್ ಎಂದು ಹೇಳುತ್ತಾ ಅಜಯ್ ರಾವ್ ನಮ್ಮ ಸ್ಯಾಂಡಲ್‌‌‌ವುಡ್‌‌ ಪಾಲಿಗೆ ಕಿಂಗ್ ಆಫ್ ರೊಮ್ಯಾನ್ಸ್ ಅಂತ ಹೊಸ ಬಿರುದನ್ನ ಕೊಟ್ಟೇ ಬಿಟ್ಟರು.

ಸುಜ್ಞಾನ್ ಸಿನಿಮಾಟೋಗ್ರಫಿ, ಕೆ ಎಂ ಪ್ರಕಾಶ್ ಸಂಕಲನವಿರೋ ಪಾರ್ಟ್ನರ್ ಚಿತ್ರದ ಶೂಟಿಂಗ್ ಬೆಂಗಳೂರು ಸುತ್ತಮುತ್ತ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕವಿರಾಜ್, ಪ್ರಮೋದ್ ಮರವಂತೆ ಹಾಗೂ ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡುಗಳು ಒಂದರ ಹಿಂದೊಂದು ಹೊರಬರಲಿದ್ದು, ಪಾರ್ಟ್ನರ್ ಸಿನಿಮಾ ಯಾವ ರೀತಿ ಮೋಡಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಪ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version