ಹೊಸ ಐಷಾರಾಮಿ ಕಾರು ಖರೀದಿಸಿದ ಬಿಗ್‌ಬಾಸ್ ಐಶ್ವರ್ಯಾ ಸಿಂಧೋಗಿ

111

ಕನ್ನಡ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ತಮ್ಮ ಹೊಸ ಐಷಾರಾಮಿ ಕಾರು MG ಹೆಕ್ಟರ್ ಸ್ನೋಸ್ಟಾರ್ಮ್ ಖರೀದಿಸಿ, ತಮ್ಮ ಅಭಿಮಾನಿಗಳೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಚಂದದ ಬಿಳಿ ಬಣ್ಣದ ಕಾರಿನ ಬಳಿ ಕ್ಯೂಟ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಐಶ್ವರ್ಯಾ ಅವರು ಕಾರು ಶೋರೂಮ್‌ನಲ್ಲಿ ಸಿಬ್ಬಂದಿಯಿಂದ ಕೀ ತೆಗೆದುಕೊಳ್ಳುವ ಕ್ಷಣವನ್ನು ಕೂಡಾ ಫೋಟೋದಲ್ಲಿ ಸೆರೆಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಅವರು ಕಪ್ಪು-ಬಿಳಿ ಬಾಡಿಕಾನ್ ಡ್ರೆಸ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಖುಷಿಯ ಕ್ಷಣದಲ್ಲಿ ಅವರ ಬಿಗ್‌ಬಾಸ್ ಸಹ ಸ್ಪರ್ಧಿಗಳು ಕೂಡಾ ಭಾಗಿಯಾಗಿದ್ದರು, ಇದು ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸಿತು.

ಐಶ್ವರ್ಯಾ ಖರೀದಿಸಿದ MG ಹೆಕ್ಟರ್ ಸ್ನೋಸ್ಟಾರ್ಮ್ ಕಾರು ಭಾರತದಲ್ಲಿ ರೂ. 21.53 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಈ ವಿಶೇಷ ಆವೃತ್ತಿಯು ಟಾಪ್-ಸ್ಪೆಕ್ ಶಾರ್ಪ್ ಪ್ರೊ ರೂಪಾಂತರವನ್ನು ಆಧರಿಸಿದೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಕಾರಿನ ಮುಂಭಾಗದ ಫೆಂಡರ್‌ನಲ್ಲಿ ಸ್ನೋಸ್ಟಾರ್ಮ್ ಲಾಂಛನ, ಟೈಲ್‌ಲೈಟ್‌ಗಳು ಮತ್ತು ಆಕರ್ಷಕ ವಿನ್ಯಾಸವು ಇದರ ವಿಶೇಷತೆಯಾಗಿದೆ.

ಕಾರಿನ ಒಳಗೆ, 14-ಇಂಚಿನ ಪೋರ್ಟ್ರೇಟ್-ಶೈಲಿಯ ಟಚ್‌ಸ್ಕ್ರೀನ್ ಸಿಸ್ಟಮ್, ಹಿಂಭಾಗದ AC ವೆಂಟ್‌ಗಳೊಂದಿಗೆ ಹವಾಮಾನ ನಿಯಂತ್ರಣ, ಪವರ್ ಡ್ರೈವರ್ ಸೀಟ್, ಲೆವೆಲ್ 2 ADAS, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಪೂರ್ಣ LED ಲೈಟ್ ಪ್ಯಾಕೇಜ್‌ನಂತಹ ಆಧುನಿಕ ವೈಶಿಷ್ಟ್ಯಗಳಿವೆ. 1.5-ಲೀಟರ್ ಪೆಟ್ರೋಲ್ ಅಥವಾ 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಈ ಕಾರು ಐಷಾರಾಮಿ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.

ಐಶ್ವರ್ಯಾ ಸಿಂಧೋಗಿ ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಬಿಗ್‌ಬಾಸ್ ಕನ್ನಡದಲ್ಲಿ ಭಾಗವಹಿಸಿದ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಈಗ ಹೊಸ ಕಾರು ಖರೀದಿಯೊಂದಿಗೆ, ಅವರು ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಕ್ಷಣವನ್ನು ಒಡ್ಡಿದ್ದಾರೆ.

Exit mobile version