ಬಾಲಿವುಡ್​ ಸ್ಟಾರ್ ನಟಿ ಐಶ್ವರ್ಯ ರೈ ಕಾರಿಗೆ ಬಸ್ ಡಿಕ್ಕಿ! ಆಘಾತಕ್ಕೆ ಒಳಗಾಗಿದ್ದ ಫ್ಯಾನ್ಸ್..!

ಕಾರಿ ನಂಬರ್‌ ನೋಡಿ ನಟಿ ಐಶ್ವರ್ಯ ರೈ ವಾಹನ ಎಂದು ಪತ್ತೆ ಹಚ್ಚಿದ ಅಭೀಮಾನಿಗಳು

Film (74)

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಮುಂಬೈನಲ್ಲಿ ನಡೆದಿದೆ.ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವೇಳೆ ಅವರು ಐಶ್ವರ್ಯಾ ರೈ ಕಾರಿನಲ್ಲಿ ಇದ್ದರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು.ನಟಿಯ ಕಾರ್‌ಗೆಬಸ್‌ ಢಿಕ್ಕಿ ಹೊಡೆದಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.ಈ ವೇಳೆ ಐಶ್ವರ್ಯಾ ರೈ ಅವರ ಬಾಡಿಗಾರ್ಡ್ಸ್ ಸಹ ಕಾರ್‌ನಿಂದ ಹೊರಬಂದಿದ್ದರು ಎಂದು ವರದಿಯಾಗಿದೆ.ಅಪಘಾತದ ಸಮಯದಲ್ಲಿ ನಟಿ ಕಾರಿನಲ್ಲಿ ಇದ್ದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ನಟಿ ಕಾರ್‌ನಿಂದ ಇಳಿಯದೇ ಇದ್ದರೂ ಮುಂಬೈ ಜನರಿಗೆ ಇದು ಐಶ್ವರ್ಯಾ ರೈ ಅವರ 1.5 ಕೋಟಿಯ ಟೊಯೋಟಾ ವೆಲ್‌ಫೈರ್‌ ಕಾರು ಎಂದು ಖಚಿತವಾಗಿ ಹೇಳೋದಕ್ಕೆ ಕಾರಣವಿದೆ. ಐಶ್ವರ್ಯಾ ರೈ ಅವರ ಎಲ್ಲಾ ಕಾರ್‌ನ ನಂಬರ್ ಪ್ಲೇಟ್‌ 5050 ಎನ್ನುವ ನಂಬರ್‌ ಹೊಂದಿದೆ. ಅದೇ ಕಾರಣಕ್ಕಾಗಿ ಇದು ಐಶ್ವರ್ಯಾ ರೈ ಕಾರು ಎಂದು ಗೊತ್ತಾಗಿದೆ.


ಇದೊಂದು ಫ್ಯಾನ್ಸಿ ನಂಬರ್​ ಪ್ಲೇಟ್. ಐಶ್ವರ್ಯ ರೈ ಕಾರಿನ ನಂಬರ್​ ಪ್ಲೇಟ್​ ಬಗ್ಗೆ ಪಾಪರಾಜಿಗಳಿಗೆ ಗೊತ್ತಿತ್ತು. ಕಾರು ಫಾಲೋ ಮಾಡ್ತಿದ್ದಾಗ ಅಪಘಾತ ಆಗಿರೋದನ್ನು ನೋಡಿ, ಐಶ್ವರ್ಯ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ತಪಾಸಣೆ ವೇಳೆ ಕಾರಿನಲ್ಲಿ ಐಶ್ವರ್ಯ ರೈ ಇರಲಿಲ್ಲ ಅನ್ನೋದು ದೃಢವಾಗಿದೆ.

ಐಶ್ವರ್ಯಾ ರೈ ಅವರ ಕಾರಿನ ಸಂಖ್ಯೆ 5050. ಇದು ಅವರ ಅಭಿಮಾನಿಗಳಿಗೆ ತಿಳಿದಿದೆ. ಅಪಘಾತ ಆಗುತ್ತಿದ್ದಂತೆ ಅನೇಕ ಜನರು ಸೇರಿದ್ದಾರೆ. ಇದು ಐಶ್ವರ್ಯಾ ಕಾರು ಎಂದು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಕಾರಿನಲ್ಲಿ ಇದ್ದ ಬಾಡಿಗಾರ್ಡ್​ಗಳು ಬಸ್​ನ ಸೈಡ್​ಗೆ ಹಾಕುವಂತೆ ಕೇಳಿ ಕೊಳ್ಳುತ್ತಿರುವುದು ವಿಡಿಯೋದಲ್ಲಿ ಇದೆ. ಇನ್ನು ಕಾರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸಿದೆ.

ಅಭಿಮಾನಿಗಳ ಪ್ರತಿಕ್ರಿಯೆ:
“ನಮ್ಮ ನಟಿ ಸುರಕ್ಷಿತರೇ?” ಎಂಬುದು ಅಭಿಮಾನಿಗಳ ಪ್ರಮುಖ ಪ್ರಶ್ನೆಯಾಗಿದೆ. ಅಭಿಮಾನಿಗಳು ನಟಿಯ ಸುರಕ್ಷತೆಯ ಬಗ್ಗೆ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಸುದ್ದಿಯನ್ನು ನೋಡಿದ ಅನೇಕರು ಟ್ವಿಟರ್‌ನಲ್ಲಿ “ಐಶ್ವರ್ಯಾ ರೈ ಸೇಫ್ಟಿ” ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು “ಐಶ್ವರ್ಯಾ ಸುರಕ್ಷಿತವಾಗಿದ್ದಾರೆಂದು ಭಾವಿಸುತ್ತೇನೆ” ಎಂದು ಕಾಮೆಂಟ್ ಪೋಸ್ಟ್‌ ಮಾಡಿದ್ದಾರೆ .ಕುಟುಂಬದಿಂದ ಸ್ಪಷ್ಟೀಕರಣ ಬಂದರೆ ಅಭಿಮಾನಿಗಳ ಆತಂಕ ನಿವಾರಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Exit mobile version