ಡಿವೋರ್ಸ್ ವದಂತಿ ಬೆನ್ನಲ್ಲೇ ಇಸ್ಕಾನ್ ಟೆಂಪಲ್‌ಗೆ ಭೇಟಿ ನೀಡಿದ ಐಶ್ವರ್ಯಾ-ಅಭಿಷೇಕ್

ಡಿವೋರ್ಸ್ ವದಂತಿ ಬೆನ್ನಲ್ಲೇ ಇಸ್ಕಾನ್ ಟೆಂಪಲ್‌ಗೆ ಭೇಟಿ ನೀಡಿದ ಐಶ್ವರ್ಯಾ-ಅಭಿಷೇಕ್

Untitled Design 2025 03 05t114554.144

ಇತ್ತೀಚೆಗೆ ವಿಚ್ಛೇದನದ ವದಂತಿಗಳಿಂದ ಸುದ್ದಿಯಲ್ಲಿದ್ದ ಬಾಲಿವುಡ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಈಗ ಒಟ್ಟಿಗೆ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇಸ್ಕಾನ್‌ನ ಹರಿನಾಮ ದಾಸ್ ಅವರ ಈ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇಸ್ಕಾನ್ ದೇವಸ್ಥಾನದಲ್ಲಿ ದಂಪತಿಯ ಭೇಟಿಯ ಹಿನ್ನಲೆ

ಹರಿನಾಮ ದಾಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ, “ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ವೃಂದಾವನ ಧಾಮದ ಆಶೀರ್ವಾದ ಪಡೆಯಲು ಸಂತೋಷವಾಗುತ್ತಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಅಶುತೋಷ್ ಗೋವಾರಿಕರ್ ಅವರ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಈ ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ.

ವಿಚ್ಛೇದನದ ವದಂತಿಗಳು ಮತ್ತು ಅಭಿಮಾನಿಗಳ ಪ್ರತಿಕ್ರಿಯೆ

ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದವು. ಅನಂತ್ ಅಂಬಾನಿಯ ಮದುವೆಯಲ್ಲಿ ಈ ಜೋಡಿ ಪ್ರತ್ಯೇಕವಾಗಿ ಕಾಣಿಸಿಕೊಂಡ ಬಳಿಕ ಈ ಮಾತುಗಳು ಇನ್ನಷ್ಟು ಬಲವಾಗಿ ಹಬ್ಬಿದವು. ಆದರೆ ಇತ್ತೀಚಿನ ದೇವಾಲಯ ಭೇಟಿಯ ಚಿತ್ರಗಳು ಈ ವದಂತಿಗೆ ಫುಲ್‌ಸ್ಟಾಪ್‌ ಇಟ್ಟಂತಿದೆ.

ಅಭಿಷೇಕ್-ಐಶ್ವರ್ಯಾ ವೈವಾಹಿಕ ಜೀವನ

ಈ ಜೋಡಿ 20 ಏಪ್ರಿಲ್ 2007ರಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಂಡ ಕಾರಣದಿಂದ ಡಿವೋರ್ಸ್ ಕುರಿತ ಚರ್ಚೆಗಳು ಹೆಚ್ಚಾಗಿದ್ದವು. ಈಗ ಇವರ ಒಟ್ಟಿಗಿನ ದೇವಾಲಯದ ಭೇಟಿ ಅಭಿಮಾನಿಗಳಿಗೆ ಆಶ್ವಾಸನೆ ನೀಡಿದಂತಾಗಿದೆ.

Exit mobile version