ಗ್ಯಾರಂಟಿ ಸ್ಟುಡಿಯೋಗೆ ತೆಲುಗು ಸ್ಟಾರ್ ಅಡಿವಿ ಶೇಶ್..!

ಡಕಾಯಿತ್ ಬ್ಲಾಕ್‌ಬಸ್ಟರ್..ಎಕ್ಸ್‌‌ಕ್ಲೂಸಿವ್ ಸಂದರ್ಶನ

BeFunky collage (6)

ಕನ್ನಡ ಮಾಧ್ಯಮ ಲೋಕದಲ್ಲೇ ಟಾಲಿವುಡ್‌ನ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಅಡಿವಿ ಶೇಶ್ ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್ ಸ್ಟುಡಿಯೋಗೆ ಆಗಮಿಸಿದ್ರು. ಕರ್ನಾಟಕದ ದತ್ತು ಪುತ್ರನಾಗಿರೋ ಅಡಿವಿ ಶೇಶ್ ಈ ಹಿಂದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವ್ರ ಬಯೋಗ್ರಫಿ ಮೂವಿ ಮಾಡಿದ್ರು. ಇದೀಗ ಡಕಾಯಿತ್ ಮೂಲಕ ಸದ್ದು ಮಾಡ್ತಿದ್ದಾರೆ. ಗ್ಯಾರಂಟಿ ನ್ಯೂಸ್ ಸ್ಟುಡಿಯೋ ನೋಡಿ ಏನಂದ್ರು..? ಕನ್ನಡದ ಸ್ಟಾರ್ಸ್ ಬಗ್ಗೆ ಹೇಳಿದ್ದೇನು..?

ಇದೇ ಏಪ್ರಿಲ್ 10ರಂದು ತೆರೆಕಂಡ ತೆಲುಗಿನ ಡಕಾಯಿತ್ ಮೂವಿ ಪ್ರೇಕ್ಷಕರ ದಿಲ್ ದೋಚಿದೆ. ಅಡಿವಿ ಶೇಶ್ ಹಾಗೂ ಮೃಣಾಲ್ ಠಾಕೂರ್ ಜೋಡಿ ಅಕ್ಷರಶಃ ಮೋಡಿ ಮಾಡ್ತಿದೆ. ಬಾಕ್ಸ್ ಆಫೀಸ್‌‌ನಲ್ಲಿ ಆರೇ ದಿನದಲ್ಲಿ 50 ಕೋಟಿಯ ಗಡಿ ಟಚ್ ಮಾಡಿದೆ. ಅನುರಾಗ್ ಕಶ್ಯಪ್, ಪ್ರಕಾಶ್ ರೈ, ಸುನಿಲ್, ಅತುಲ್ ಕುಲಕರ್ಣಿ ಸೇರಿದಂತೆ ಸಾಕಷ್ಟು ಮಂದಿ ಬಹುಭಾಷಾ ನುರಿತ ಕಲಾವಿದರ ದಂಡಿದೆ.

ಅಡಿವಿ ಶೇಶ್ ಕರಿಯರ್‌‌ನಲ್ಲೇ ಅತಿಹೆಚ್ಚು ಓಪನಿಂಗ್ ಬಂದಂತಹ ಡಕಾಯಿತ್‌ಗೆ ನಮ್ಮ ಬೆಂಗಳೂರಿನಲ್ಲೂ ಬಿಗ್ ಓಪನಿಂಗ್ ಸಿಕ್ಕಿದೆ. ಹಾಗಾಗಿ ಸಿನಿಮಾದ ಪ್ರಮೋಷನ್ಸ್‌ಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದಾರೆ ಟಾಲಿವುಡ್ ಸ್ಟಾರ್ ಅಡಿವಿ ಶೇಶ್. ಬೆಂಗಳೂರಿಗೆ ಬರ್ತಿದ್ದಂತೆ ನೇರವಾಗಿ ನಮ್ಮ ಗ್ಯಾರಂಟಿ ನ್ಯೂಸ್ ಕಚೇರಿಗೆ ವಿಸಿಟ್ ಮಾಡಿದ ಸ್ಟಾರ್, ಆಫೀಸ್ ನೋಡಿ ತುಂಬಾ ಚೆನ್ನಾಗಿದೆ ಎಂದರು. ಅಷ್ಟೇ ಅಲ್ಲ, ಸ್ಟುಡಿಯೋದಲ್ಲಿ ಕೂತು ತಮ್ಮ ಡಕಾಯಿತ್ ಸಿನಿಮಾ ಹಾಗೂ ಕರಿಯರ್ ಬಗ್ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೂಡ ನೀಡಿದ್ರು.

ಗ್ಯಾರಂಟಿ ಸ್ಟುಡಿಯೋಗೆ ತೆಲುಗು ಸ್ಟಾರ್ ಅಡಿವಿ ಶೇಶ್..!

ಡಕಾಯಿತ್ ಬ್ಲಾಕ್‌ಬಸ್ಟರ್.. ಎಕ್ಸ್‌‌ಕ್ಲೂಸಿವ್ ಸಂದರ್ಶನ

ಕನ್ನಡ ಮಾಧ್ಯಮ ಲೋಕದಲ್ಲಿ ಅಡಿವಿ ಶೇಶ್ ನಮ್ಮ ಗ್ಯಾರಂಟಿ ನ್ಯೂಸ್ ಸ್ಟುಡಿಯೋಗೆ ಬರೋ ಮೂಲಕ ಮೊದಲ ಬಾರಿಗೆ ಕನ್ನಡ ಸ್ಯಾಟಲೈಟ್ ಚಾನೆಲ್‌‌‌ಗೆ ಕಾಲಿಟ್ಟಿದ್ದು ವಿಶೇಷ. ಅಂದಹಾಗೆ ಸಂದರ್ಶನದಲ್ಲಿ ರಕ್ಷಿತ್‌ ಶೆಟ್ರ ಸಪ್ತ ಸಾಗರದಾಚೆ ಎಲ್ಲೋ ಸೈಡ್-A, ಅವನೇ ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಸಿನಿಮಾಗಳು ಬಹಳ ಇಷ್ಟ ಎಂದರು.

ರಿಷಬ್ ಶೆಟ್ರ ಕಾಂತಾರ ಸಿನಿಮಾದ ಮೊದಲ ಭಾಗದ ಹಾಸ್ಯಮಯ ದೃಶ್ಯಗಳು, ಎರಡನೇ ಭಾಗದ ಡಿವೈನ್ ಫೀಲ್‌ನ ಎಂಜಾಯ್ ಮಾಡಿದ್ದನ್ನ ನೆನೆದರು.

ಗ್ಯಾರಂಟಿ ಆ್ಯನಿವರ್ಸರಿಗೆ ಮಲ್ಟಿ ಟ್ಯಾಲೆಂಟ್ ಶೇಶ್ ವಿಶ್

ಅಪ್ಪು ವ್ಯಕ್ತಿತ್ವ, ಕಿಚ್ಚ, ರಿಷಬ್ ಹಾಗೂ ರಕ್ಷಿತ್ ಬಗ್ಗೆ ಟಾಕ್..!

ಅಷ್ಟೇ ಅಲ್ಲ, ನಟ ಸುದೀಪ್ ಬಗ್ಗೆಯೂ ಮಾತನಾಡಿದ್ರು. ಇನ್ನೂ ಕರ್ನಾಟಕರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವದ ಬಗ್ಗೆ ಕೊಂಡಾಡಿದ್ರು ಅಡಿವಿ ಶೇಶ್.

ಚಿತ್ರರಂಗದಲ್ಲಿ ಯಶಸ್ವೀ 25 ವರ್ಷ ಪೂರೈಸಿರೋ ಅಡಿವಿ ಶೇಶ್, ರಾಜಮೌಳಿಯಿಂದ ಸಾಕಷ್ಟು ಕಲಿತಿದ್ದಾರಂತೆ. ಬಾಹುಬಲಿ ಚಿತ್ರದ ಭದ್ರುಡು ಪಾತ್ರದ ಬಗ್ಗೆಯೂ ಮಾತನಾಡಿದ ಇವರು, ನಟ, ನಿರ್ದೇಶಕ, ಬರಹಗಾರನಾಗಿ ತಮ್ಮ ಕರಿಯರ್‌‌ನ ಎಂಜಾಯ್ ಮಾಡ್ತಿರೋದಾಗಿ ಹೇಳಿದ್ರು.

40 ವರ್ಷಗಳಾದ್ರೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರೋ ಅಡಿವಿ ಶೇಶ್ ಮದ್ವೆ ಬಗ್ಗೆ ಕೂಡ ಮಾತನಾಡಿದ್ರು. ಗೂಢಾಚಾರಿ, ಎವರು, ಮೇಜರ್, ಹಿಟ್-2ನಂತಹ ಸೂಪರ್ ಹಿಟ್ ಚಿತ್ರಗಳ ಸ್ಟಾರ್ ಸದ್ಯದಲ್ಲೇ ಗೂಢಾಚಾರಿ-2 ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆ ಬೆಳಗುವ ಸೂಚನೆ ಕೂಡ ನೀಡಿದ್ದಾರೆ.

 

Exit mobile version