ಥಿಯೇಟರ್‌ಗೆ ಹೋಗಿ ಹಣ ವೇಸ್ಟ್ ಮಾಡಬೇಡಿ: ‘ಧುರಂಧರ್ 2’ ಚಿತ್ರತಂಡದ ವಿರುದ್ಧ ರಮ್ಯಾ ಗರಂ

Untitled design 2026 03 20T152107.117

ನಿನ್ನೆಯಷ್ಟೇ ಧುರಂಧರ್ 2 ಸಿನಿಮಾ ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಗ್ಗೆ ಸ್ಯಾಡಂಲ್‌ಡುಡ್‌ ಕ್ವೀನ್‌ ರಮ್ಯಾ ಟ್ವಿಟ್‌ ಮಾಡಿದ್ದು, ಸಿನಿ ರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ.

ನಟಿ ರಮ್ಯಾ ತಮ್ಮ ಪೋಸ್ಟ್‌ನಲ್ಲಿ, ಥಿಯೇಟರ್‌ಗೆ ಹೋಗಿ ಹಣ ವ್ಯರ್ಥ ಮಾಡಬೇಡಿ, ಇದು ಕೇವಲ ಒಟಿಟಿಯಲ್ಲಿ ನೋಡುವಂತಹ ಸ್ಮಾಲಿಂಗ್ ಕಂಟೆಂಟ್ ಎಂದು ನೇರವಾಗಿ ಕಿಡಿಕಾರಿದ್ದಾರೆ. ಚಿತ್ರವು ಕೇವಲ ನೀರಸ ನಿರೂಪಣೆಯಷ್ಟೇ ಅಲ್ಲದೆ, ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವ ಒಂದು ಪ್ರಯೋಗದಂತಿದೆ ಎಂದು ಬರೆದಿದ್ದಾರೆ.

ಕಾಲುಗಳು ತುಂಡಾಗಿದ್ದರೂ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದರೂ ನಟರು ಟೆಡ್-ಟಾಕ್ (TED Talk) ನೀಡುವಂತೆ ಸುದೀರ್ಘ ಡೈಲಾಗ್ ಹೊಡೆಯುತ್ತಾರೆ, ಇಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಬೆಲೆಯೇ ಇಲ್ಲ. ಇಂತಹ ದೃಶ್ಯಗಳಿಗಾಗಿ ಆಸ್ಕರ್ ಅಲ್ಲ, ನೋಬೆಲ್ ಪ್ರಶಸ್ತಿಯೇ ನೀಡಬೇಕು ಎಂದು ತಮಾಷೆ ಮಾಡಿದ್ದಾರೆ. ಚಿತ್ರದಲ್ಲಿ ಚಾಕು, ಕೊಡಲಿ ಮಾತ್ರವಲ್ಲದೆ ಇಂಜೆಕ್ಷನ್ ಸಿರಿಂಜ್‌ವರೆಗೆ ಪ್ರತಿಯೊಂದನ್ನೂ ಹಿಂಸೆಯ ಶಸ್ತ್ರವನ್ನಾಗಿ ಬಳಸಿರುವುದು ಪ್ರೇಕ್ಷಕರಿಗೆ ಅಸಹ್ಯ ಹುಟ್ಟಿಸುವಂತಿದೆ.

ಚಿತ್ರದ ಸಂಕಲನ, ಹಿನ್ನೆಲೆ ಸಂಗೀತ ಮತ್ತು ಚಿತ್ರಕಥೆ ಎಲ್ಲವೂ ತೀರಾ ಕಳಪೆಯಾಗಿವೆ. ಮಾರ್ಚ್ 19ರ ಡೆಡ್ ಲೈನ್‌ಗೆ ಹೇಗೋ ಮುಗಿಸಬೇಕು ಎಂದು ಅವಸರದಲ್ಲಿ ಸಿನಿಮಾ ಮಾಡಿದಂತಿದೆ ಎಂಬುದು ಪ್ರೇಕ್ಷಕರ ಮತ್ತು ವಿಮರ್ಶಕರ ಸಾಮಾನ್ಯ ಅಭಿಪ್ರಾಯ. ಒಟ್ಟಾರೆಯಾಗಿ ‘ಧುರಂಧರ್ 2’ ಸಿನಿಮಾ ಒಂದು ದೊಡ್ಡ ನಿರಾಸೆ ಮೂಡಿಸಿದ್ದು, ಚಿತ್ರಮಂದಿರಕ್ಕೆ ಹೋಗುವ ಮುನ್ನ ಪ್ರೇಕ್ಷಕರು ಎರಡು ಬಾರಿ ಯೋಚಿಸುವಂತಾಗಿದೆ.

Exit mobile version