ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ದಿನಕ್ಕೊಂದು ಸಂಕಟ ಎದುರಿಸುತ್ತಿದ್ದಾರೆ. ಈ ಹಿಂದೆ ಫ್ಯಾಮಿಲಿ ಜೊತೆಗೆ ಬರ್ತಡೇ, ಹಬ್ಬ ಹರಿದಿನಗಳನ್ನ ಆಚರಣೆ ಮಾಡ್ತಿದ್ದ ದಚ್ಚು ಸೆರೆವಾಸದಲ್ಲಿ ಏಕಾಂಗಿಯಾಗಿದ್ದಾರೆ. ಮಗನ ಬರ್ತಡೇ ಮಿಸ್ ಮಾಡ್ಕೊಂಡಿದ್ದ ದಚ್ಚು ಇಂದು ಮಡದಿಯ ಹುಟ್ಟುವನ್ನು ಜೊತೆಯಲ್ಲಿ ಆಚರಿಸಲಾಗದೆ ಜೈಲಿನ ನಾಲ್ಕು ಗೋಡೆಯ ಮಧ್ಯೆ ಮೌನಿಯಾಗಿದ್ದಾರೆ.
ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದಚ್ಚುಗೆ ಆರೋಗ್ಯ ಸಮಸ್ಯೆಯ ಜೊತೆಗೆ ಪತ್ನಿ, ಮಗನನ್ನ ಮಿಸ್ ಮಾಡಿಕೊಂಡು ಒಂಟಿತನ ಕಾಡುತ್ತಿದೆ. ಎರಡನೇ ಬಾರಿ ಜೈಲಿಗೆ ಹೋಗಿರುವ ದರ್ಶನ್‌ಗೆ ಹಾಸಿಗೆ, ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ಸಿಗದೆ ಕಂಗಾಲಾಗಿ ಹೋಗಿದ್ದಾರೆ. ಇದರ ಜೊತೆಗೆ ಕಳೆದ ಅಕ್ಟೋಬರ್ 31ನೇ ತಾರೀಖಿನಂದು ದರ್ಶನ್‌ರ ಮುದ್ದಿನ ಮಗ ವಿನೀಶ್ ಬರ್ತಡೇ ಸೆಲೆಬ್ರೇಷನ್‌ನಲ್ಲಿ ಜೊತೆಯಲ್ಲಿ ಇರಲಾಗದೆ ಸಂಕಟ ಅನುಭವಿಸಿದ್ರು. ಮಗನ ಜೊತೆ ಕಾಲ ಕಳೆದ ಕ್ಷಣಗಳನ್ನು ಸಹ ವಿಚಾರಣಾಧೀನ ಕೈದಿಗಳ ಜೊತೆ ಮೆಲುಕು ಹಾಕಿ ಜೈಲಿನ ಸೇಲ್‌ನಲ್ಲಿ ಮೌನಕ್ಕೆ ಶರಣಾಗಿದ್ರು.

ಇಂದು ಪತ್ನಿ ವಿಜಯಲಕ್ಷ್ಮೀ ಬರ್ತಡೇ ಇದ್ದು, ಜೈಲಿನ ನಾಲ್ಕು ಗೋಡೆಯ ಮಧ್ಯೆ ಸೆರೆವಾಸದಲ್ಲಿರುವ ಸ್ಥಿತಿ ದಾಸನಿಗೆ ಎದುರಾಗಿದೆ. ಪತ್ನಿ ಹುಟ್ಟುಹಬ್ಬ ಆಗಿರುವುದರಿಂದ ಬೆಳಿಗ್ಗೆ 6 ಗಂಟೆಗೆ ಎದ್ದು ಕುಳಿತಿದ್ದ ದಚ್ಚು ದೇವರ ಪೋಟೋಗೆ ನಮಸ್ಕರಿಸಿ ಬ್ಯಾರಕ್‌ನಲ್ಲಿ ಕೆಲವೊತ್ತು ವಾಕ್ ಮಾಡಿ ಜೈಲು ಸಿಬ್ಬಂದಿ ನೀಡಿದ ತಿಂಡಿಯನ್ನು ಸವಿದು ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ರು ಎನ್ನಲಾಗಿದೆ.
ಪ್ರತಿಯೊಂದು ಬರ್ತಡೇ, ಆನಿವರ್ಸರಿ, ಹಬ್ಬಗಳನ್ನು ಸಂಭ್ರಮದಿಂದ ದಚ್ಚು ಫ್ಯಾಮಿಲಿ ಜೊತೆಗೆ ಆಚರಣೆ ಮಾಡ್ತಿದ್ರು. ಆದ್ರೆ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದರಿಂದ ಕಳೆದ ಬಾರಿಯೂ ಕೂಡ ದರ್ಶನ್ ಇಲ್ಲದೆ ಪತ್ನಿ ವಿಜಯಲಕ್ಷ್ಮೀ ಬರ್ತಡೇ ಆಚರಿಸಿಕೊಂಡಿರಲಿಲ್ಲ. ಈ ಬಾರಿಯು ಕೂಡ ದರ್ಶನ್ ಮತ್ತು ವಿಜಯಲಕ್ಷ್ಮೀ ಸ್ಥಿತಿ ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದೆ.

ಜೈಲಿನಲ್ಲಿ ಪತ್ನಿ ಮಗನನ್ನ ಮಿಸ್ ಮಾಡಿಕೊಳ್ತೀರುವ ದರ್ಶನ್‌ಗೆ ಆರೋಗ್ಯ ಸಮಸ್ಯೆ ಜೊತೆಗೆ ಒಂಟಿತನ ಕಾಡುತ್ತಿದೆ. ಇದರ ನಡುವೆಯೇ ವಿಜಯಲಕ್ಷ್ಮೀ ಕೇಕ್ ಕಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ದರ್ಶನ್ ಬಲಗೈ ಬಂಟ ಧನ್ವೀರ್ ಇನ್‍ಸ್ಟಾಗ್ರಾಂನಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮೀಯ ಪೋಟೋ ಅಪ್ಲೋಡ್ ಮಾಡಿ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ ಎಂದು ವಿಶ್ ಮಾಡಿದ್ದಾರೆ.

ದರ್ಶನ್‌ಗೆ ಜೈಲಿನಲ್ಲಿ ಬೆನ್ನು ನೋವು, ಮೊಣಕೈ ನೋವಿನ ಜೊತೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಪತ್ನಿ, ಪುತ್ರನ ಬರ್ತಡೇ ಸೆಲೆಬ್ರೇಷನ್ ಮಿಸ್ ಮಾಡಿಕೊಂಡು ಒಂಟಿತನ ಕಾಡತೊಡಗಿದ್ದು ಮಾನಸಿಕವಾಗಿ ಕೂಗ್ಗಿ ಹೋಗಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ದಚ್ಚು ಸಂಕಟಕ್ಕೆ ಮುಕ್ತಿ ಸಿಗುತ್ತ ಎಂದು ಕಾದು ನೋಡಬೇಕಿದೆ.





