ಡೆವಿಲ್ ರಿಲೀಸ್‌ಗೂ ಮುನ್ನ ನೋಡಿದ್ದು ಟೀಸರ್.. ಅಸಲಿ ಪಿಚ್ಚರ್ ಈಗ ರಿವೀಲ್. ದಿಬಾಸ್ ದರ್ಶನ್‌ಗೆ ಬ್ಯಾಕ್‌ಪೇನ್ ಇದ್ದಿದ್ದು ನಿಜ ನಿಜ ನಿಜ. ಅದಕ್ಕೆ ಡೆವಿಲ್ ಲೇಟೆಸ್ಟ್ ಮೇಕಿಂಗ್ ವಿಡಿಯೋನೇ ಸಾಕ್ಷಿ. ನಿರ್ಮಾಪಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ದಾಸ ಭಾರಿ ಒದ್ದಾಡಿದ್ರು. ಜೊತೆಗೆ ಇಂದು ಅವರ ಹುಟ್ಟುಹಬ್ಬ ಅವರಿಗಾಗಿ ಯಾರೆಲ್ಲಾ ಶುಭ ಕೋರಿದ್ದಾರೆ..? ಸದ್ಯ ಜೈಲಲ್ಲಿ ದರ್ಶನ್ ಪರಿಸ್ಥಿತಿ ಹೇಗಿದೆ..? ಮೂಲಭೂತ ಸೌಕರ್ಯಗಳು ಸಿಕ್ತಾ ಇಲ್ವಾ ಅನ್ನೋದ್ರ ರಿಪೋರ್ಟ್ ಇಲ್ಲಿದೆ ನೋಡಿ.
ಓ ಮೈ ಗಾಡ್.. ಬ್ಯಾಕ್‌ಪೇನ್‌ಗೆ ಇಷ್ಟು ನರಳಾಡಿದ್ರಾ ದರ್ಶನ್?
ಮೊದಲ ವಿಡಿಯೋ ಜಸ್ಟ್ ಟೀಸರ್.. ಅಸಲಿ ಪಿಚ್ಚರ್ ಇಲ್ಲಿದೆ..!
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್‌ಗೆ ಬೇಲ್ ಸಿಗೋಕೆ ಅವರಿಗಿದ್ದ ಬೆನ್ನು ನೋವು ಪ್ರಮುಖ ಕಾರಣವಾಯ್ತು. ಮೊದಲಿಗೆ ಮೆಡಿಕಲ್ ಬೇಲ್ ಮೇಲೆ ದರ್ಶನ್ ಹೊರಗೆ ಬಂದಿದ್ದೇ ಬ್ಯಾಕ್‌ಪೇನ್‌ನಿಂದ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್, ಅಲ್ಲಿ ನಿಲ್ಲೋಕೂ ಆಗದೆ ಒದ್ದಾಡಿದ್ರು. ಆ ವಿಡಿಯೋಗಳು ಸಖತ್ ವೈರಲ್ ಕೂಡ ಆಗಿದ್ದವು. ಹಾಗಾಗಿಯೇ ಕೋರ್ಟ್ ಅವರಿಗೆ ಮೆಡಿಕಲ್ ಬೇಲ್ ಮಂಜೂರು ಮಾಡಿತ್ತು. ನಂತ್ರ ರೆಗ್ಯುಲರ್ ಬೇಲ್ ಪಡೆದುಕೊಂಡ್ರು.
ಆಗಸ್ಟ್ 15ರಂದು ಆ ರೆಗ್ಯಲರ್ ಬೇಲ್ ಕೂಡ ಸುಪ್ರೀಂ ರದ್ದು ಮಾಡಿ, ಮತ್ತೆ ಅವ್ರನ್ನ ಕಸ್ಟಡಿಗೆ ತೆಗೆದುಕೊಂಡಿತ್ತು. ಸದ್ಯ ದರ್ಶನ್ ಜೈಲಲ್ಲಿ ಪಂಜರದ ಪಕ್ಷಿಯಂತಾಗಿದ್ದಾರೆ. ಅಂದಹಾಗೆ ಬೇಲ್ ಸಿಕ್ಕ ಬಳಿಕ ಡೆವಿಲ್ ಸಿನಿಮಾ ಮಾಡಿ ಮುಗಿಸಿದ ದರ್ಶನ್, ಆ ಚಿತ್ರ ರಿಲೀಸ್‌ಗೂ ಮುನ್ನ ಒಂದು ಬ್ಯಾಕ್‌ಪೇನ್ ವಿಡಿಯೋ ಸಖತ್ ವೈರಲ್ ಆಗಿತ್ತು. ನಾಯಕಿಯನ್ನ ಹೊತ್ತು ಓಡುವ ದೃಶ್ಯದಲ್ಲಿ ನಿಲ್ಲೋಕೂ ಆಗದೆ ನೆಲಕ್ಕೊರಗಿದ್ರು ದಾಸ. ಅದು ಜಸ್ಟ್ ಟೀಸರ್ ಅಷ್ಟೇ. ಅಸಲಿ ಪಿಚ್ಚರ್ ಈಗ ರಿಲೀಸ್ ಆಗಿದೆ.
ನಿರ್ಮಾಪಕರಿಗಾಗಿ ನೋವುಂಡಿದ್ದೆಷ್ಟು..? ಒದ್ದಾಡಿದ್ದೆಷ್ಟು ದಾಸ..?!
ಸಾಂಗ್, ಫೈಟ್, ಟಾಕಿ ಪೋರ್ಷನ್.. ಎಲ್ಲೆಡೆ ಭಯಾನಕ ನೋವು
ಇದು ದರ್ಶನ್ ಬರ್ತ್ ಡೇ ವಿಶೇಷ ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್‌ನಿಂದ ಸ್ವತಃ ಮಿಲನ ಪ್ರಕಾಶ್ ಅವರೇ ರಿಲೀಸ್ ಮಾಡಿರೋ ಮೇಕಿಂಗ್ ವಿಡಿಯೋ. ದರ್ಶನ್ ಸ್ಟಂಟ್ಸ್ ಮಾಡುವಾಗ, ಡ್ಯಾನ್ಸ್ ಮಾಡುವಾಗ, ಟಾಕಿ ಪೋರ್ಷನ್ ಚಿತ್ರಿಸುವಾಗಲೆಲ್ಲಾ ಬೆನ್ನು ನೋವಿಗೆ ಸಿಕ್ಕಾಪಟ್ಟೆ ಒದ್ದಾಡಿದ್ದಾರೆ. ನರಳಿದ್ದಾರೆ. ಬೇರ್ ಮಾಡೋಕೆ ಆಗದೇ ಇರುವಷ್ಟು ಭಯಾನಕ ನೋವನ್ನ ನುಂಗಿ, ನಿರ್ಮಾಪಕರನ್ನ ದಡ ಸೇರಿಸುವ ಕಾರ್ಯ ಮಾಡಿದ್ದಾರೆ. ಅದು ಅವ್ರ ಕಮಿಟ್ಮೆಂಟ್. ನಿಜಕ್ಕೂ ಈ ವಿಡಿಯೋ ನೋಡ್ತಿದ್ರೆ ಪಾಪ ಗುರು ಅನಿಸುತ್ತೆ. ಯಾಕಂದ್ರೆ ಅವ್ರಿಗಿರೋ ಬ್ಯಾಕ್‌ಪೇನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಕೂಡ ಆಗಿತ್ತು.
ಅಭಿಷೇಕ್ ಅಂಬರೀಶ್, ತರುಣ್ ಸುಧೀರ್ ಶುಭಾಶಯ
ಝೈದ್, ಮಹೇಶ್ ಸೇರಿದಂತೆ ಗಜಪಡೆಯಿಂದ ಪೋಸ್ಟ್
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್‌ಗೂ ದರ್ಶನ್‌ಗೂ ಅಷ್ಟಕ್ಕಷ್ಟೇ ಎನ್ನಲಾಗಿತ್ತು. ಆದ್ರೀಗ ಅವರುಗಳ ನಡುವೆ ಅಂಥದ್ದೇನಿಲ್ಲ ಅನ್ನೋದನ್ನ ಅಭಿಷೇಕ್ ತಮ್ಮ ಪೋಸ್ಟ್ ಮೂಲಕ ಪ್ರೂವ್ ಮಾಡಿದ್ದಾರೆ. ಹ್ಯಾಪಿಯೆಸ್ಟ್ ಬರ್ತ್ ಡೇ ಸೀನಿಯರ್ ಅಂತ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬ್ರದರ್ ಮೇಲಿನ ಅಭಿಮಾನ ತೋರಿದ್ದಾರೆ ಜೂನಿಯರ್.
ತರುಣ್ ಸುಧೀರ್, ಅನುಷಾ ರೈ, ಝೈದ್ ಖಾನ್, ಅಯೋಗ್ಯ ಖ್ಯಾತಿಯ ಡೈರೆಕ್ಟರ್ ಮಹೇಶ್ ಕುಮಾರ್ ಸೇರಿದಂತೆ ಇಡೀ ಗಜಪಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜನುಮ ದಿನದ ಶುಭಾಶಯಗಳನ್ನ ಸಾಮಾಜಿಕ ಜಾಲತಾಣದ ಮೂಲಕ ಕೋರಿದ್ದಾರೆ.
ಹೆಚ್ಚುವರಿ ಬೆಡ್, ತಲೆ ದಿಂಬು ಸಿಕ್ಕಿದೆ.. ಮನೆ ಊಟ ಇಲ್ಲ..!
ಬ್ಯಾರಕ್‌ನಲ್ಲಿ ಸಿಸಿಟಿವಿ ಕಣ್ಗಾವಲು.. VIP ಟ್ರೀಟ್ಮೆಂಟ್ ಇಲ್ಲ
ಆಗಸ್ಟ್ 15ರಂದು ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲು ಸೇರಿದ ದರ್ಶನ್ ಅಕ್ಷರಶಃ ಸ್ವತಂತ್ರ ಕಳೆದುಕೊಂಡಿದ್ದಾರೆ. ಅಲ್ಲಿ ಸ್ಟಾರ್‌ಡಮ್, ನೇಮು, ಫೇಮು, ರೆಕಮಂಡೇಷನ್ ಎಲ್ಲವನ್ನ ಪಕ್ಕಕ್ಕಿಟ್ಟು ಶ್ರೀಸಾಮಾನ್ಯ ಕೈದಿಯಂತೆ ಬದುಕುತ್ತಿದ್ದಾರೆ. ಒಂದೇ ಒಂದು ಹೆಚ್ಚುವರಿ ಬೆಡ್ ಹಾಗೂ ತಲೆ ದಿಂಬಿಗಾಗಿ ಗೋಗರೆದಿದ್ರು ದರ್ಶನ್. ಬಟ್ಟೆ ಫಂಗಸ್ ಆಗ್ತಿದೆ ಅಂತೆಲ್ಲಾ ಜಡ್ಜ್ ಮುಂದೆ ವಿಸಿ ಮೂಲಕ ಕಾಡಿದ್ರು.
ಮನೆಯೂಟಕ್ಕಾಗಿಯೂ ಸಹ ಬೇಡಿಕೆ ಇಟ್ಟಿದ್ರು ದರ್ಶನ್. ಆದ್ರೆ ಕೋರ್ಟ್ ಎಲ್ಲರಿಗೂ ನೀಡಿದಂತೆ ಮೂಲಭೂತ ಸೌಕರ್ಯಗಳನ್ನ ಮಾತ್ರ ನೀಡಲು ಅಂಗೀಕರಿಸಿದೆ. ಮನೆ ಊಟ ನೀಡಲು ನಿರಾಕರಿಸಿದೆ. ಟಿವಿ ಕೂಡ ಸಿಕ್ಕಿದೆ. ಆದ್ರೆ ಸಿಸಿಟಿವಿ ಟೈಟ್ ಸೆಕ್ಯೂರಿಟಿಯೊಂದಿಗೆ ಇಡೀ ದರ್ಶನ್ ಬ್ಯಾರಕ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಜೈಲಾಧಿಕಾರಿಗಳು. ದುಡ್ಡು ಕೊಟ್ರೆ ವಿಐಪಿ ಟ್ರೀಟ್ಮೆಂಟ್ ಸಿಗುತ್ತೆ ಅನ್ನೋದೆಲ್ಲಾ ಸುಳ್ಳು ಅನ್ನೋದು ದರ್ಶನ್ ವಿಚಾರದಲ್ಲಿ ಪ್ರೂವ್ ಆಗಿದೆ.
ಕೋರ್ಟ್ ಟ್ರಯಲ್ಸ್‌ನಲ್ಲಿ ರೇಣುಕಾಸ್ವಾಮಿ ತಾಯಿ ಎಡವಟ್
ಪ್ರತ್ಯಕ್ಷದರ್ಶಿ ಸಾಕ್ಷಿಯ ಕೊರತೆ.. ಜುಲೈ ವೇಳೆಗೆ ಜಾಮೀನು..?!
ಸದ್ಯ ಕೋರ್ಟ್ ಟ್ರಯಲ್ಸ್ ಜೋರಾಗಿ ನಡೆಯುತ್ತಿದ್ದು, ಕೋರ್ಟ್ ಕಲಾಪಗಳು ತುಂಬಾ ಗೌಪ್ಯವಾಗಿವೆ. ಆದ್ರೆ ರೇಣುಕಾಸ್ವಾಮಿ ತನ್ನ ಮಗನ ನಂಬರ್ ಗೊತ್ತು, ಸೇವ್ ಮಾಡಿದ್ದೀನಿ ಅಂದಿದ್ದೆಲ್ಲಾ ಸುಳ್ಳಾಗಿದೆ. ಅವ್ರು ಪೊಲೀಸರಿಗೆ ಒಂದು ಬಗೆಯ ಹೇಳಿಕೆ, ಕೋರ್ಟ್ ಟ್ರಯಲ್ಸ್ ವೇಳೆ ಮತ್ತೊಂದು ಬಗೆಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಅದು ದರ್ಶನ್ ಬೇಲ್‌ಗೆ ಪ್ಲಸ್ ಆಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಪ್ರತ್ಯಕ್ಷದರ್ಶಿಯ ಸಾಕ್ಷ್ಯ ಕೂಡ ಕೊರತೆಯಿದೆ ಎನ್ನಲಾಗ್ತಿದೆ. ಇವೆಲ್ಲಾ ನೋಡ್ತಿದ್ರೆ ದಾಸ ಬೇಗ ಹೊರಗೆ ಬರೋ ಮುನ್ಸೂಚನೆ ಸಿಕ್ಕಿದೆ.
ಒಟ್ಟಾರೆ ಕಾಲಿಗೊಂದು, ಕೈಗೊಂದು ಆಳುಗಳನ್ನ ಇಟ್ಕೊಂಡು ಎಸಿ ಕಾರ್‌ಗಳಲ್ಲಿ ಓಡಾಡ್ಕೊಂಡು, ಹೆಂಡ್ತಿ-ಮಗ, ಅಮ್ಮ, ಸಹೋದರ, ತನ್ನನ್ನ ಪ್ರೀತಿಸೋ ಆಪ್ತರ ಜೊತೆ ದಿಲ್ದಾರ್ ಆಗಿ ಜೀವನ ಮಾಡಬೇಕಿದ್ದ ದರ್ಶನ್, ಹೀಗೆ ಕೈ ಕಟ್ಟಿ ಜೈಲಲ್ಲಿ ಕೂರುವಂತೆ ಆಗಿರೋದು ಬೇಸರದ ವಿಷಯ. ಅಭಿಮಾನಿಗಳ ಹೋಮ, ಹವನಗಳು ಫಲಿಸುವಂತಾಗಲಿ. ವಿಜಯಲಕ್ಷ್ಮೀ ದರ್ಶನ್ ಟೆಂಪಲ್ ರನ್ ಸಫಲವಾಗಲಿ. ದರ್ಶನ್ ಬೇಗ ಹೊರಬರಲಿ. ಚಿತ್ರರಂಗಕ್ಕೆ ಆಸರೆಯಾಗಿ ನಿಲ್ಲಲಿ ಅನ್ನೋದೇ ನಮ್ಮ ಆಶಯ.
