61ನೇ ಇಳಿವಯಸ್ಸಲ್ಲಿ ಮೂರನೇ ಮದುವೆ ಮಾಡಿಕೊಂಡಿರೋ ಆಮೀರ್ ಖಾನ್ ವಿರುದ್ಧ ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳು ಕಿಡಿಕಾರುತ್ತಿವೆ. ಲವ್ ಜಿಹಾದ್ ಪ್ರಚಾರ ಮಾಡ್ತಿದ್ದಾರೆ ಅಂತ ಆಮೀರ್ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾರ್ಯಕರ್ತರು. ಅಲ್ಲದೆ. ಮಗ ಜುನೈದ್ ಖಾನ್ ಕೂಡ ನಾನು ನಮ್ಮ ತಂದೆಯ ಅಡ್ವೈಸ್ ತೆಗೆದುಕೊಳ್ಳೋದಿಲ್ಲ. ಮದ್ವೆ ವಿಷಯದಲ್ಲಿ ನನ್ನ ತಂದೆ ಫೇಲ್ ಆಗಿದ್ದಾರೆ ಅಂತ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.
- ಲವ್ ಜಿಹಾದ್‌ನಲ್ಲಿ ಆಮೀರ್.. ಬಜರಂಗದಳ ವಾರ್ನಿಂಗ್
- ಪ್ರತಿಕೃತಿ ದಹಿಸಿ ಬಿಹಾರ್ನಲ್ಲಿ ಕಿಡಿಕಾರಿದ ಕಾರ್ಯಕರ್ತರು
- ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿರೋ ಆಮೀರ್
- ಲವ್ ಜಿಹಾದ್ಗೆ ಉತ್ತೇಜನ.. ಹಿಂದೂ ಭಾವನೆಗಳಿಗೆ ಧಕ್ಕೆ..!
ಯೆಸ್.. ಇತ್ತೀಚೆಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್‌ಖಾನ್ ಮೂರನೇ ಮದುವೆ ಆಗಿದ್ದು ನ್ಯಾಷನಲ್ ಅಷ್ಟೇ ಅಲ್ಲ, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸುದ್ದಿಯಾಯ್ತು. 61ನೇ ಇಳಿವಯಸ್ಸಿನಲ್ಲಿ ವೃದ್ದಾಪ್ಯ ಸ್ವೀಕರಿಸಿ, ಮಕ್ಕಳು, ಮೊಮ್ಮಕ್ಕಳ ಜೊತೆ ಸಂತೋಷದಿಂದ ಜೀವನ ಕಳೆಯೋದು ಬಿಟ್ಟು, ಬೇರೊಬ್ಬರಿಂದ ವಿಚ್ಚೇದಿತಗೊಂಡ ಮಹಿಳೆಯ ಕೈ ಹಿಡಿದು ಸಹಜೀವನಕ್ಕೆ ಮುಂದಾಗಿದ್ದಾರೆ ಆಮೀರ್ ಖಾನ್.
ಮಗ ಜುಲೈದ್ ಖಾನ್‌ಗೆ 33 ವರ್ಷ. ಆತನಿಗೆ ಮದ್ವೆ ಮಾಡೋದನ್ನ ಬಿಟ್ಟು ತಾವೇ ಮದ್ವೆ ಮೇಲೆ ಮದ್ವೆ ಆಗ್ತಾ ಹೋಗ್ತಿರೋ ಬಾಲಿವುಡ್ ಸೂಪರ್ ಸ್ಟಾರ್ ಮೇಲೆ ಎಲ್ಲರೂ ಕಿಡಿಕಾರಲು ಮುಂದಾಗಿದ್ದಾರೆ. ಅದ್ರಲ್ಲೂ ಲವ್ ಜಿಹಾದ್‌ನ ಉತ್ತೇಜಿಸುತ್ತಿರೋ ಆಮೀರ್ ಖಾನ್ ನಡೆಗೆ ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರ್‌ನ ಫೋರ್ಬ್ಸ್‌ಗಂಜ್‌ನಲ್ಲಿ ಆಮೀರ್ ಖಾನ್ ಪ್ರತಿಕೃತಿ ದಹನ ಮಾಡೋ ಮೂಲಕ ತಮ್ಮ ಅಸಾಮಾಧಾನ ಹೊರಹಾಕಿದ್ದಾರೆ ಕಾರ್ಯಕರ್ತರು.
ಆಮೀರ್ ಮೊದಲಿನಿಂದಲೂ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ನಿರಂತರವಾಗಿ ಮದುವೆಗಳನ್ನ ಆಗೋದು, ವಿಚ್ಚೇದನ ನೀಡೋದನ್ನ ಮಾಡ್ತಾ ಬರ್ತಿದ್ದಾರೆ. ಇದು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಲವ್ ಜಿಹಾದ್‌ನ ಉತ್ತೇಜಿಸೋ ಕ್ರಮ ಅಂತ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.
ಅಂದಹಾಗೆ ಆಮೀರ್ ಮದ್ವೆ ಆಗಿರೋ ಮೂವರೂ ಸಹ ಹಿಂದೂ ಹೆಣ್ಣು ಮಕ್ಕಳೇ. 1986ರಿಂದ 2002ರ ತನಕ ರೀನಾ ದತ್ತಾರನ್ನ ಮದ್ವೆ ಆಗಿದ್ರು. ಆಕೆಗೆ ಡಿವೋರ್ಸ್ ನೀಡಿ, ನಮ್ಮ ಮಲ್ಲೇಶ್ವರಂನ ಕಿರಣ್ ರಾವ್‌ರನ್ನ 2005ರಲ್ಲಿ ಕೈ ಹಿಡಿದು, 2021ರ ತನಕ ಸಂಸಾರ ಮಾಡಿದ್ರು. ಆದ್ರೆ ಕನ್ನಡತಿ ಕಿರಣ್ ರಾವ್‌ಗೂ ವಿಚ್ಚೇದನ ನೀಡಿದ್ದ ಆಮೀರ್, ಇತ್ತೀಚೆಗೆ ಒನ್ಸ್ ಅಗೈನ್ ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಅನ್ನೋ ಹೆಣ್ಣನ್ನ ಮನೆ ತುಂಬಿಸಿಕೊಂಡಿದ್ದಾರೆ. ಅಲ್ಲಿಗೆ ಆಮೀರ್ ಒಬ್ಬ ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಮದ್ವೆಯಾದ ಮೂವರೂ ಸಹ ಹಿಂದೂ ಯುವತಿಯರೇ ಅನ್ನೋದು ಓಪನ್ ಸೀಕ್ರೆಟ್.
- ತಂದೆ ಅಡ್ವೈಸ್ ತಗೊಳಲ್ಲ.. ಆಮೀರ್ ಫೇಲ್ ಎಂದ ಮಗ
- ಮಿಸ್ಟರ್ ಪರ್ಫೆಕ್ಷನಿಸ್ಟ್ ಈ ವಿಚಾರದಲ್ಲಿಲ್ಲ ಗುರು ಪರ್ಫೆಕ್ಟ್
ಮಹಾರಾಜ ಚಿತ್ರದ ಮೂಲಕ ಬಾಲಿವುಡ್ ಹೀರೋ ಆಗಿ ಲಾಂಚ್ ಆದಂತಹ ಆಮೀರ್ ಮಗ ಜುನೈದ್ ಖಾನ್, ಇತ್ತೀಚೆಗೆ ಏಕ್ ದಿನ್ ಚಿತ್ರದಿಂದ ಎಲ್ಲರ ಗಮನ ಸೆಳೆದರು. ಅಪ್ಪನಿಗಿಂತ ಡಬಲ್ ಹೈಟ್ ಇರೋ ಜುನೈದ್ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದಾರೆ. 33 ವರ್ಷದ ಈ ಮಗನಿಗೂ ಮದ್ವೆ ವಯಸ್ಸು ಮೀರಿ ಹೋಗ್ತಿದೆ. ಹೀಗೆ ಜುನೈದ್‌ಗೆ ಮದುವೆ ವಿಷಯ ಕೇಳಿದಾಗ, ನಿಮ್ಮ ತಂದೆಯಿಂದ ನೀವೇನಾದ್ರೂ ಸಲಹೆ, ಸೂಚನೆ ತೆಗೆದುಕೊಳ್ತೀರಾ ಅಂದಿರೋ ಪ್ರಶ್ನೆಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.
ನಾನು ಮದುವೆ ವಿಷಯವಾಗಿ ನಮ್ಮ ತಂದೆ ಆಮೀರ್ ಖಾನ್‌ರಿಂದ ಯಾವುದೇ ಅಡ್ವೈಸ್ ತೆಗೆದುಕೊಳ್ಳುವುದಿಲ್ಲ. ಯಾಕಂದ್ರೆ ಮದುವೆ ವಿಚಾರದಲ್ಲಿ ನಮ್ಮ ತಂದೆ ಫೇಲ್ ಆಗಿದ್ದಾರೆ. ಅವರಿಂದ ನಾನೇನು ಸಲಹೆಗಳನ್ನ ಬಯಸಬಲ್ಲೇ ಅಂತ ನೇರವಾಗಿಯೇ ತನ್ನ ತಂದೆಯ ನಡೆ ಬಗ್ಗೆ ಬೇಸರ ಹೊರಹಾಕಿದ್ದಾರೆ ಜುನೈದ್ ಖಾನ್. ಅಂದ್ರೆ ಆಮೀರ್ ಖಾನ್ ಪರ್ಸನಲ್ ಲೈಫ್ ಬಗ್ಗೆ ಅವರ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳಿಗೇ ಅತೀವ ಅಸಮಾಧಾನವಿದೆ ಅನ್ನೋದು ಇದ್ರಿಂದ ಸ್ಪಷ್ಟವಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
