ಯಶ್‌ ಕಂಡ್ರೆ ಉರ್ಕೊಳ್ಳೋರು ಒಬ್ರಾ..? ಇಬ್ರಾ?! ‘ಟಾಕ್ಸಿಕ್’ ವಿರುದ್ಧ ನೆಗೆಟಿವ್ ಕ್ಯಾಂಪೇನ್ ಆರೋಪ!

ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು ಚಾಲಕ ಪಾರು! (4)

ನನ್ನ ಕಂಡ್ರೆ ಉರ್ಕೊಳ್ಳೋರು ಒಬ್ರಾ ಇಬ್ರಾ..? ದುಷ್ಮನ್ ಕಹಾ ಹೈ ಅಂದ್ರೆ ಬಗಲ್‌ ಮೇ ಹೈ ಅಂತ ಹೇಳುವಂತಾಗಿದೆ. ಅಂದಹಾಗೆ ಇದು ಬರೀ ಯಶ್ ಸಿನಿಮಾದ ಡೈಲಾಗ್ ಅಷ್ಟೇ ಆಗಿ ಉಳಿದಿಲ್ಲ. ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಏಳಿಗೆಯನ್ನ ಸಹಿಸಿಕೊಳ್ಳಲಾಗದೆ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕ್ಯಾಂಪೇನ್ ಮಾಡೋಕೆ ಟೊಂಕ ಕಟ್ಟಿ ನಿಂತಂತಿದೆ. ಈ ಕುರಿತ ಒಂದು ರಿಪೋರ್ಟ್ ನಿಮ್ಮ ಮುಂದೆ.

ಇತ್ತೀಚೆಗೆ ಚಿತ್ರಗಳನ್ನ ವೀಕ್ಷಿಸುವವರಿಗಿಂತ ಅವುಗಳನ್ನ ನೋಡಿ ವಿಮರ್ಶಿಸುವವರ ಸಂಖ್ಯೆಯೇ ಜಾಸ್ತಿ ಆಗಿಬಿಟ್ಟಿದೆ. ಸಿನಿಮಾ ಅಂದ್ಮೇಲೆ ಟೀಕೆ, ಟಿಪ್ಪಣಿ ಸರ್ವೇ ಸಾಮಾನ್ಯ. ಆದ್ರೆ ಬೇಕು ಅಂತಲೇ ಟಾರ್ಗೆಟ್ ಮಾಡೋದು ಎಷ್ಟರ ಮಟ್ಟಿಗೆ ಸರಿ..? ಹೌದು.. ಸದ್ಯ ರಿಲೀಸ್ ಆಗಿರೋ ಟಾಕ್ಸಿಕ್ ಸಿನಿಮಾಗೆ ದೇಶದಾದ್ಯಂತ ಸಾಕಷ್ಟು ಪೇಯ್ಡ್ ನೆಗೆಟಿವ್ ಕ್ಯಾಂಪೇನ್ ಆಗ್ತಿರೋದು ಮೇಲ್ನೋಟಕ್ಕೆ ಕಂಡುಬರ್ತಿದೆ. ಅದಕ್ಕೆ ಕಾರಣ ಆಗಿರೋದು ಯಶ್ ಅನ್ನೋ ಅಪ್ಪಟ ಕನ್ನಡಿಗನ ಪ್ಯಾನ್ ಇಂಡಿಯಾ ಸ್ಟಾರ್‌ಡಮ್.

ಬಾಲಿವುಡ್‌ಗೆ ಸೌತ್ ಸಿನಿದುನಿಯಾನ ಕಂಡ್ರೆ ಅಷ್ಟಕ್ಕಷ್ಟೇ. ಅದ್ರಲ್ಲೂ ಸೌತ್ ಇಂಡಸ್ಟ್ರಿ ಮಂದಿಗೆ ನಮ್ಮ ಕನ್ನಡಿಗರು ಅಥ್ವಾ ಕನ್ನಡ ಚಿತ್ರರಂಗ ಅಂದ್ರೆ ಕೇವಲ. ಯಾಕಂದ್ರೆ ಕೆಜಿಎಫ್‌ಗೂ ಮುನ್ನ ಪ್ರಭಾಸ್, ಮಹೇಶ್ ಬಾಬು, ರಾಮ್ ಚರಣ್, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಎಲ್ಲಾನೂ ಸೌತ್‌ಗೆ ನಾವೇ ಬಿಗ್ ಸ್ಟಾರ್ಸ್ ಅಂದುಕೊಂಡಿದ್ರು. ಆದ್ರೆ ಕೆಜಿಎಫ್ ಮೂಲಕ ರಾಕಿಭಾಯ್ ಕೊಟ್ಟ ಒಂದೇ ಒಂದು ಡೋಸ್‌ಗೆ ಪ್ಯಾನ್ ಇಂಡಿಯಾ ಸ್ಟಾರ್‌ಡಮ್‌‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ರು ಯಶ್. ಅದು ಖಾನ್, ಕಪೂರ್‌‌ಗಳಿಗೂ ಅಸೂಯೆ ತರಿಸಿತ್ತು.

ಟಾಕ್ಸಿಕ್ ಹಾಲಿವುಡ್ ಅಂಗಳದ ವರೆಗೂ ಸದ್ದು ಮಾಡಿದ ಹಿನ್ನೆಲೆ ಸಾಕಷ್ಟು ಮಂದಿ ಪರಭಾಷಾ ಸ್ಟಾರ್‌ಗಳು, ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಯಶ್‌‌ನ ತುಳಿಯೋಕೆ ಹುನ್ನಾರ ಮಾಡಿವೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಿವೆ. ಅದಕ್ಕೆ ಪೂರಕವಾಗಿ ಟಾಕ್ಸಿಕ್ ಸಿನಿಮಾಗೆ ಸಿಕ್ಕಾಪಟ್ಟೆ ಟ್ರೋಲ್ & ಮೀಮ್ಸ್ ಮಾಡಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ನೆಗೆಟೀವ್ ಮಾಡಲಾಗ್ತಿದೆ.

ದುಡ್ಡು ಮಾಡೋದೇ ಯಶ್ ಅವ್ರ ಧ್ಯೇಯ ಆಗಿದ್ದಿದ್ರೆ.. ನೂರಾರು ಕೋಟಿ ಸಂಭಾವನೆ ಪಡೆದು ಪಾಲಿಗೆ ಬರೋ ಪಾತ್ರ ಮಾಡ್ಕೊಂಡು ಐಷಾರಾಮಿ ಜೀವನ ನಡೆಸಬಹುದಿತ್ತು. ಆದ್ರೆ ನಮ್ಮ ಚಿತ್ರರಂಗಕ್ಕೆ ಗ್ಲೋಬಲ್ ಮಾರ್ಕೆಟ್‌‌ನಲ್ಲಿ ನೆಲೆ, ಬೆಲೆ ತಂದುಕೊಡಬೇಕು ಅನ್ನೋದು ಅವ್ರ ಮಹದಾಸೆ ಆಗಿದೆ. ಅದೇ ಕಾರಣದಿಂದ ತನ್ನ 150 ಕೋಟಿ ಸಂಭಾವನೆಗೆ ಸಹ ನಿರ್ಮಾಪಕರಾಗಿ, ಬಾಲಿವುಡ್ ನಟಿಯಿಂದ ಮುಖಕ್ಕೆ ಎಂಜಲು ಉಗಿಸಿಕೊಳ್ಳುವಂತಹ ದೃಶ್ಯಗಳಲ್ಲೆಲ್ಲಾ ನಟಿಸಿದ್ದಾರೆ ಯಶ್.

ಇರುಮುಡಿ ಸಿನಿಮಾಗಾಗಿ ಇಡೀ ತೆಲುಗು ಚಿತ್ರರಂಗ ಒಂದಾಗಿದೆ. ಚಿರಂಜೀವಿ, ರಾಮ್‌ಚರಣ್, ವಿಜಯ್ ದೇವರಕೊಂಡ, ರಶ್ಮಿಕಾ ಎಲ್ರೂ ಸಿನಿಮಾನ ಹೊಗಳಿ ಪೋಸ್ಟ್ ಮಾಡ್ತಿದ್ದಾರೆ. ಆದ್ರೆ ಟಾಕ್ಸಿಕ್‌‌ಗಾಗಿ ಕನ್ನಡಿಗರು ನಿಜಕ್ಕೂ ಸಾಥ್ ಕೊಡ್ತಿದ್ದಾರಾ..? ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಬಿಟ್ರೆ ಬೇರೆ ಯಾವೊಬ್ಬ ಸ್ಟಾರ್ ಕೂಡ ಬಹಿರಂಗವಾಗಿ ಸಪೋರ್ಟ್ ವ್ಯಕ್ತಪಡಿಸಿಲ್ಲ. ಇದು ಕನ್ನಡಾಭಿಮಾನದ ಕೊರತೆಯೂ ಹೌದು.. ಆತ್ಮಾಭಿಮಾನದ ವಿಷಯದಲ್ಲಿ ಆತ್ಮ ವಿಶ್ವಾಸದ ಕೊರತೆಯೂ ಹೌದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

Exit mobile version