ಬ್ರಿಟನ್‌‌ ಪತ್ರಕರ್ತೆ ಜೊತೆ ಆಮೀರ್ ಖಾನ್‌ ಅಕ್ರಮ ಸಂಬಂಧ..?!

ಒಡಹುಟ್ಟಿದವನನ್ನೇ ಗೃಹಬಂಧನದಲ್ಲಿಟ್ಟು ಔಷಧಿ ನೀಡ್ತಿದ್ರಾ?

11 (8)

ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮುಖವಾಡ ಕಳಚಿದ್ದಾರೆ ಒಡಹುಟ್ಟಿದ ಸಹೋದರ ಫೈಸಲ್ ಖಾನ್. ಯೆಸ್.. ಯುಕೆ ಜರ್ನಲಿಸ್ಟ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಆಮೀರ್ ಬಗ್ಗೆ ಹೇಳಿದ್ದ ಫೈಸಲ್ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಅದೇನು ಅಂತೀರಾ..? ಇಲ್ಲಿದೆ ನೋಡಿ.

ಬಾಲಿವುಡ್ ನಟ ಫೈಸಲ್ ಖಾನ್, ಸೂಪರ್ ಸ್ಟಾರ್ ಆಮೀರ್ ಖಾನ್‌ರ ಒಡಹುಟ್ಟಿದ ಸಹೋದರ. ಅಣ್ಣನಂತೆ ತಾನು ಕೂಡ ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಂಡವರು. ಆದ್ರೆ ಆಮೀರ್ ಖಾನ್ ಅವರೇ ತಮ್ಮ ಕರಿಯರ್‌ನ ಹಾಳು ಮಾಡಿದ್ರು. ನನ್ನನ್ನ ಚಿತ್ರರಂಗದಲ್ಲಿ ಬೆಳೆಯೋಕೆ ಬಿಡದೆ ತುಳಿದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲ, ನನ್ನನ್ನು ಒಂದಷ್ಟು ವರ್ಷ ಹೌಸ್ ಅರೆಸ್ಟ್ ಮಾಡಿ, ಒತ್ತಾಯಪೂರ್ವಕವಾಗಿ ಮೆಡಿಸಿನ್ ನೀಡ್ತಿದ್ರು ಅಂತ ಆರೋಪಿಸಿದ್ದಾರೆ. 2005ರಿಂದ ನನ್ನ ಜೀವನ ನರಕ ಆಗಿತ್ತು. ನಾನು 2016ರಲ್ಲೇ ಈ ವಿಚಾರ ಕೋರ್ಟ್‌ನಲ್ಲಿ ಕೇಸ್ ಗೆದ್ದಿದ್ದೇನೆ ಎಂದಿದ್ದಾರೆ. ಈ ಮೂಲಕ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಆರಾಧಿಸೋ ಆಮೀರ್ ಅಸಲಿ ಮುಖವಾಡ ಕಳಚಿದ್ದಾರೆ ಸ್ವಂತ ಸಹೋದರ ಫೈಸಲ್ ಖಾನ್.

ಇದಲ್ಲದೆ, ಮೊದಲ ಪತ್ನಿ ರೀನಾ ದತ್ತಾಗೆ ಡಿವೋರ್ಸ್‌ ನೀಡಿದ ಬಳಿಕ ಆಮೀರ್ ಖಾನ್ ಬೆಂಗಳೂರಿನ ಮಲ್ಲೇಶ್ವರಂ ಹುಡುಗಿ ಕಿರಣ್‌ರಾವ್‌ರನ್ನ ಮದ್ವೆ ಆದ ಬಳಿಕ ಕೂಡ ಯುಕೆ ಮೂಲದ ಜರ್ನಲಿಸ್ಟ್‌ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಅವರಿಗೆ ಜನಿಸಿದ ಒಬ್ಬ ಮಗ ಕೂಡ ಇದ್ದಾನೆ ಅಂತ ಆರೋಪ ಮಾಡಿದ್ದಾರೆ. ಇದೀಗ ಮೂರನೇ ಮದ್ವೆಗೆ ತಯಾರಾಗ್ತಿರೋ ಅಣ್ಣ ಆಮೀರ್‌‌ನ ಇದು ಮೂರನೆಯದ್ದಲ್ಲ, ನಾಲ್ಕನೆಯದ್ದು ಅನ್ನೋ ರೀತಿ ಸಮಾಜದ ಮುಂದೆ ಬೆತ್ತಲಾಗಿಸಿದ್ದಾರೆ ಫೈಸಲ್ ಖಾನ್. ಇದು ಸದ್ಯ ವರ್ಲ್ಡ್‌ ಸಿನಿದುನಿಯಾದ ಹಾಟೆಸ್ಟ್ ಟಾಪಿಕ್ ಆಗಿ ಎಲ್ಲೆಡೆ ಎಲ್ಲರೂ ಮಾತನಾಡುವಂತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version