ಬಾಕ್ಸ್ ಆಫೀಸ್ ದಂಗಲ್‌ಗೆ ಮುನ್ನುಡಿ ಬರೆಯುತ್ತಿದೆ ಇಯರ್ ಎಂಡ್ ಕ್ರಿಸ್‌ಮಸ್. ಯೆಸ್.. ಸ್ಯಾಂಡಲ್‌ವುಡ್‌ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಾದ 45 ಹಾಗೂ ಮಾರ್ಕ್ ಎರಡೂ ಒಂದೇ ದಿನ ತೆರೆಗೆ ಬರೋಕೆ ಸಜ್ಜಾಗಿವೆ. ಆದ್ರೆ ಬುಕ್ ಮೈ ಶೋ ಇಂಟ್ರೆಸ್ಟ್ ಲಿಸ್ಟ್‌ನಲ್ಲಿ 45 ಟಾಪ್‌ನಲ್ಲಿದ್ದು, ಶಿವಣ್ಣನಿಗಾಗಿ ಬಾದ್‌ಷಾ ಸುದೀಪ್ ದಾರಿ ಮಾಡಿಕೊಡ್ತಾರಾ ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಸ್ಯಾಂಡಲ್‌ವುಡ್ ಕಿಂಗ್, ಕರುನಾಡ ಚಕ್ರವರ್ತಿ, ಲಿವಿಂಗ್ ಲೆಜೆಂಡ್ ಡಾ. ಶಿವರಾಜ್‌ಕುಮಾರ್ ಒಂಥರಾ ಈಗಿನ ಜನರೇಷನ್ ಸ್ಟಾರ್‌ಗಳಿಗೆ ಲೀಡರ್. ವಯಸ್ಸು, ಅನುಭವ, ಲೆಗಸಿ ಎಲ್ಲಾ ವಿಚಾರದಲ್ಲಿ ಅದು ಹಂಡ್ರೆಡ್ ಪರ್ಸೆಂಟ್ ಸತ್ಯವೂ ಹೌದು. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪ್ಯಾನ್ ಇಂಡಿಯಾ ಸ್ಟಾರ್ ಆದ್ರೂ ಸಹ, ಶಿವಣ್ಣ ಅವರೊಟ್ಟಿಗೆ ಒಂದೊಳ್ಳೆ ಬಾಂಧವ್ಯ ಹೊಂದಿದ್ದಾರೆ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸ್ತಾರೆ. ಅಭಿಮಾನಿಸ್ತಾರೆ. ಸಿಕ್ಕಾಪಟ್ಟೆ ಪ್ರೀತಿ, ಒಡಹುಟ್ಟಿದವರಷ್ಟು ಆಪ್ಯಾಯತೆ.
ಶಿವಣ್ಣನಿಗೆ ದಾರಿ ಕೊಡ್ತಾರಾ ಕಿಚ್ಚ..? 45 ವರ್ಸಸ್ ಮಾರ್ಕ್
ಆಗ UI- ಮ್ಯಾಕ್ಸ್ ವಾರ್.. ಈಗ ಶಿವಣ್ಣ ಜೊತೆ ದಂಗಲ್..?!
ಆದ್ರೀಗ ಇದೇ ಡಿಸೆಂಬರ್ 25ಕ್ಕೆ ಶಿವಣ್ಣ ಹಾಗೂ ಸುದೀಪ್ ನಡುವೆ ಬಾಕ್ಸ್ ಆಫೀಸ್ ದಂಗಲ್ ನಡೆಯಲಿದೆ. ಹೌದು.. ವರ್ಷಾಂತ್ಯದ ಕ್ರಿಸ್‌ಮಸ್‌ಗೆ ಇವರುಗಳ ಮಾರ್ಕ್ ಹಾಗೂ 45 ಚಿತ್ರಗಳು ಒಂದೇ ದಿನ ಪ್ರೇಕ್ಷಕರನ್ನ ರಂಜಿಸಲು ಬರ್ತಿವೆ. ಇದ್ರಿಂದ ಚಿತ್ರಪ್ರೇಮಿಗಳಿಗೆ ಯಾವ ಸಿನಿಮಾ ಮೊದಲು ನೋಡಬೇಕು ಅನ್ನೋ ಕನ್ಫ್ಯೂಷನ್. ಮಿಗಿಲಾಗಿ ಥಿಯೇಟರ್ ಕ್ಲ್ಯಾಶ್ ಆಗಲಿದೆ. ಶೋಗಳು ಕ್ಲ್ಯಾಶ್ ಆಗಲಿವೆ. ಅಷ್ಟೇ ಅಲ್ಲ, ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೂ ಅದು ಪ್ರತಿಕೂಲ ಪರಿಣಾಮ ಬೀರಲಿದೆ.
ಕಳೆದ ವರ್ಷ ಕೂಡ ಇಂಥದ್ದೇ ಸ್ಥಿತಿ ನಿರ್ಮಾಣವಾಗಿತ್ತು. ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಯುಐ ಸಿನಿಮಾ ಸುದೀಪ್ ನಟನೆಯ ಮ್ಯಾಕ್ಸ್ ಜೊತೆ ಜೊತೆಯಲ್ಲಿ ತೆರೆಕಂಡಿದ್ದವು. ಇದೀಗ ಅರ್ಜುನ್ ನಿರ್ದೇಶನದ ಶಿವಣ್ಣ-ಉಪೇಂದ್ರ-ರಾಜ್ ಬಿ ಶೆಟ್ಟಿ ನಟನೆಯ ಬಿಗ್ಗೆಸ್ಟ್ ಮಲ್ಟಿ ಸ್ಟಾರರ್, ಕಿಚ್ಚನ ಮಾರ್ಕ್ ಜೊತೆ ಬಿಡುಗಡೆ ಆಗ್ತಿದೆ. ಇದ್ರಿಂದ ಒನ್ಸ್ ಅಗೈನ್ ಸಮಸ್ಯೆಗಳು ಶುರುವಾಗಲಿವೆ. ಆದ್ರೆ ಶಿವಣ್ಣಗಾಗಿ ಸುದೀಪ್ ತಮ್ಮ ನಿರ್ಧಾರವನ್ನು ಬದಲಿಸ್ತಾರಾ..? ಮಾರ್ಕ್ ರಿಲೀಸ್ ಪೋಸ್ಟ್‌ಪೋನ್ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಬುಕ್ ಮೈ ಶೋ ಇಂಟರೆಸ್ಟ್.. ಟಾಪ್ ರ್ಯಾಂಕಿಂಗ್‌ನಲ್ಲಿ 45
ಕನ್ನಡದ ಬಿಗ್ಗೆಸ್ಟ್ ಮಲ್ಟಿಸ್ಟಾರರ್.. ನ್ಯೂ ಎಕ್ಸ್‌ಪೆರಿಮೆಂಟ್..!!
ಸಾವನ್ನು ಗೆದ್ದು ಬಂದಿರೋ ಮಿಸ್ಟರ್ ಮೃತ್ಯುಂಜಯ ಶಿವಣ್ಣನಿಗಾಗಿ ಸುದೀಪ್ ಏನು ಬೇಕಾದ್ರೂ ಮಾಡ್ತಾರೆ. ಬಹುಶಃ 45ಗಾಗಿ ಮಾರ್ಕ್ ಪೋಸ್ಟ್‌ಪೋನ್ ಆದ್ರೆ ಬ್ಯುಸಿನೆಸ್ ವೈಸ್ ಎರಡೂ ಚಿತ್ರಗಳಿಗೆ ಪ್ಲಸ್ ಆಗಲಿದೆ. ಅಲ್ಲದೆ, ಬುಕ್ ಮೈ ಶೋ ಇಂಟರೆಸ್ಟ್ ಲಿಸ್ಟ್‌ನಲ್ಲಿ ಸದ್ಯ ಡಿಸೆಂಬರ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ 45 ಸಿನಿಮಾ ಟಾಪ್ ಲಿಸ್ಟ್‌ನಲ್ಲಿದೆ. ಹೌದು.. ಸುದೀಪ್‌ರ ಮಾರ್ಕ್ ಹಾಗೂ ದರ್ಶನ್‌ರ ಡೆವಿಲ್ ಚಿತ್ರಗಳನ್ನ ಹಿಂದಿಕ್ಕಿ ಅತಿಹೆಚ್ಚು ಇಂಟರೆಸ್ಟ್ ಲೈಕ್ಸ್‌ನ ಪಡೆದಿದೆ 45 ಸಿನಿಮಾ.
ಸಕ್ಸಸ್‌ಫುಲ್ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಬಾರಿ ಸಿಕ್ಕಾಪಟ್ಟೆ ಹಣ ಸುರಿದು 45 ಚಿತ್ರ ನಿರ್ಮಿಸಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ. ಪಾತ್ರಗಳು ಹಾಗೂ ಅರ್ಜುನ್ ಜನ್ಯ ಪ್ರೆಸೆಂಟೇಷನ್. ಹೌದು.. ಇಂಡಿಯನ್ ಸಿನಿದುನಿಯಾದಲ್ಲೇ ಇದೊಂದು ವಿನೂತನ ಪ್ರಯೋಗ ಅಂದ್ರೆ ತಪ್ಪಾಗಲ್ಲ. ಹಾಗಾಗಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಬ್ಬರಿಗಿಂತ ಒಬ್ಬರು ನಿರೀಕ್ಷೆಗೂ ಮೀರಿದ ಪರ್ಫಾಮೆನ್ಸ್ ನೀಡಿದ್ದಾರೆ.
