45 ಚಿತ್ರದ ಅದ್ದೂರಿ ಪ್ರೀ ರಿಲೀಸ್ ಇವೆಂಟ್..!

ದೊಡ್ಮನೆ ದೊರೆ ಎಮೋಷನಲ್.. ಇದು 100% ರಿಯಾಲಿಟಿ..!

Untitled design (45)

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಸೌತ್ ಸಿನಿ ದುನಿಯಾವೇ ಕನ್ನಡ ಸಿನಿಮಾ‌ ಇಂಡಸ್ಡ್ರಿಯತ್ತ ನೋಡೋ ಪ್ರಯತ್ನಕ್ಕೆ 45 ಸಿನಿಮಾ ಸಾಕ್ಷಿಯಾಗ್ತಿದೆ. ಸದ್ಯ ಸಿನಿಮಾ ಬಿಡುಗಡೆಗೂ ಮೊದಲು ಪ್ರೀ ರಿಲೀಸ್ ಇವೆಂಟ್ ಮಾಡಿರೋ 45 ಚಿತ್ರತಂಡದ ಕಲಾವಿದರು ಏನೆಲ್ಲ ಹೇಳಿದ್ರು..?  45 ಸಿನಿಮಾ ಮಾಡ್ತಿರೋ‌ ಮೋಡಿ ಹೇಗಿದೆ..? ತ್ರಿಬಲ್ ಸ್ಟಾರ್ ಗಳ ಧಮಾಕ ಶುರುವಾಗೋದು ಯಾವಾಗಿಂದ ಅನ್ನೊದ್ರ ಮಾಹಿತಿ ಇಲ್ಲಿದೆ ನೋಡಿ.

45 ಚಿತ್ರದ ಅದ್ದೂರಿ ಪ್ರೀ ರಿಲೀಸ್ ಇವೆಂಟ್..!

ಅಫ್ರೋ ಹಾಡಿಗೆ ಶಿವಣ್ಣ, ಉಪ್ಪಿ, ರಾಜ್ ಬಿ ಡ್ಯಾನ್ಸ್

ಶಿವಣ್ಣ ಹೆಣ್ಣಾಗಿದ್ದಿದ್ರೆ ಗೀತಕ್ಕಗೆ ಸೌತಿ ಆಗ್ತಿದ್ರಂತೆ ಉಪ್ಪಿ..!

ಕನ್ನಡದ ಬಹು ನಿರೀಕ್ಷಿತ ಸಿನಿಮಾ 45. ಸದ್ಯ ಟ್ರೈಲರ್ ರಿಲೀಸ್ ಆಗಿ ಸೋಶಿಯಲ್ ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಿದೆ. ಅಂದ ಹಾಗೆ 45 ಸಿನಿಮಾದಲ್ಲಿ ಶಿವಣ್ಣ …ಉಪೇಂದ್ರ‌‌…ರಾಜ್ ಬಿ ಶೆಟ್ಟಿ ಮಾಡ್ತಿರೋ‌ ಮೋಡಿ ಒಂದು ದಿನ ಮೊದಲೇ ತೆರೆ ಮೇಲೆ ಶುರುವಾಗಲಿದೆ‌‌. ಸದ್ಯ ಸಿನಿಮಾ ಬಿಡುಗಡೆಗೂ ಮೊದಲು ಪ್ರೀ ರಿಲೀಸ್ ಇವೆಂಟ್ ನಡೆದಿದ್ದು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.

45 ಚಿತ್ರದ ಅಡ್ವಾಸ್ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಡಿಸೆಂಬರ್ 24 ರ ಸಂಜೆ 7 ಘಂಟೆಯಿಂದಲೇ ಬೆಂಗಳೂರು, ಮಂಗಳೂರು, ದಾವಣಗೆರೆ, ತುಮಕೂರು ಸೇರಿದಂತೆ ಹಲವೆಡೆ ಪೇಯ್ಡ್ ಪ್ರೀಮಿಯರ್ ಶೋ ಆರಂಭ ಆಗಲಿದೆ. ಸದ್ಯ ಒಂದು ದಿನ ಮುಂಚೆಯೆ 50 ಕ್ಕೂ ಹೆಚ್ವು ಶೋಗಳನ್ನ ಓಪನ್ ಮಾಡಲಾಗ್ತಿದೆ. ಇನ್ನೂ ಟಿಕೇಟ್ ದರ ಕೂಡ ದುಬಾರಿ ಮಾಡಬಾದ್ರು ಅಂತ ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಪರಬಾಷಿಗರೂ ಕೂಡ ಸಿನಿಮಾವನ್ನ ನೋಡಿ ಮೆಚ್ಚಿ ವಿತರಕರು ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ. ವಿದೇಶದಲ್ಲೂ ಕೂಡ 45 ಸಿನಿಮಾ ತೆರೆಗೆ ಅಪ್ಪಳಿಸ್ತಿದೆ‌…ಶಿವಣ್ಣನ ಚಲುವೆಯೇ ನೋ ಚೆನ್ನ ಗೆಟಪ್ ಸಕತ್ ಹಕ್ ಚಲ್ ಎಬ್ಬಿಸಿದೆ.

ಇದೆ ವೇಳೆ ಮಾತನಾಡಿದ ಪ್ರಮೋದ್ ಶೆಟ್ಟಿ ಉಪೇಂದ್ರ ನಮ್ಮ ಬಾಸ್.. ಅವರು ಬಂದ ದಾರಿಯಲ್ಲೇ ರಕ್ಷಿತ್, ರಿಷಬ್, ರಾಜ್ ಬಿ ಶೆಟ್ಟಿ ಬಂದಿದ್ದಾರೆ ಎಂದರೆ ಪ್ರಮೋದ್ ಶೆಟ್ಟಿ ಗ್ಯಾಂಗ್ ನಲ್ಲಿ ಬಿರುಕು ಇದೆ ಎಂಬ ಬಿಸಿ ಚರ್ಚೆ ಬಗ್ಗೆಯೂ ಸ್ಪಷ್ಟನೆ ನೀದಿದ್ದಾರೆ.

 

ಶಿವಣ್ಣ ಎನರ್ಜಿ, ಉಪೇಂದ್ರ ಡೈಲಾಗ್‌‌ಗೆ ರಮೇಶ್ ರೆಡ್ಡಿ ಸುಸ್ತು

ದೊಡ್ಮನೆ ದೊರೆ ಎಮೋಷನಲ್.. ಇದು 100% ರಿಯಾಲಿಟಿ..!

ವ್ಯಕ್ತಿ ಪೂಜೆ, ಶಿವಣ್ಣ ಹೀರೋಯಿಸಂಗೆ ರಾಜ್ ಹೇಳಿದ್ದೇನು

ಅಂದ ಹಾಗೆ 45 ಸಿನಿಮಾ ಶೂಟಿಂಗ್ ವೇಳೆ ಶಿವಣ್ಣ ಅನಾರೋಗ್ಯದ ನಡುವೆಯೂ ಸಿನಿಮಾಗಾಗಿ ಡೆಡಿಕೇಟ್ ಆಗಿರೋ ರೀತಿ ಚಿತ್ರತಂಡಕ್ಕೂ ಅಚ್ಚರಿ ಆಗಿತ್ತು‌. ಈ ಬಗ್ಗೆ ನಟ ರಾಜ್ ಬಿ ಶೆಟ್ಟಿ ಮಾತನಾಡಿದ್ದು ಶಿವಣ್ಣ ಡೆಡಿಕೇಶನ್.. ಉಪೇಂದ್ರ ವ್ಯಕ್ತಿತ್ವದ ಬಗ್ಗೆ ಹೊಗಳಿದ್ದಾರೆ

ಇನ್ನು ಯಮನ ರೂಪದಲ್ಲಿ ಉಪೇಂದ್ರ , ರಾಜ್ ಬಿ ಶೆಟ್ಟಿ ಬದುಕಿನ ಭಯದ ಜೊತೆ ಓಡೋ ದೃಶ್ಯಗಳು ಈಗಾಗಲೆ ಸೆನ್ಸೇಶನ್ ಕ್ರಿಯೇಟ್ ಮಾಡಿವೆ. ಇದರ ನಡುವೆ ಶಿವಣ್ಣ ಮಾನವ ದೈವನ ಅಥವಾ ಹೆಣ್ಣಿನ ಗೆಟಪ್ ನಲ್ಲಿರೋ ಆ ಚೆಲುವೆ ಯಾರೆಂಬುದು ಅವರೇ ವಿವರಿಸಿದ್ದಾರೆ. ಹಾಗೆ ದುಡ್ಡು.. ಸಮಯಕ್ಕೆ ಎಷ್ಟು ಗೌರವ ಕೊಡ್ಬೇಕು ಅನ್ನೋದರ ಬಗ್ಗೆ ಅಪರೂಪದ ಮಾತು ಹೇಳಿದ್ದಾರೆ

ಬಾಯಲ್ಲಿ ಸಿಗಾರ್.. ಯಮನ ರೂಪ..ಕರುಣೆಯಿಲ್ಲದ ಡೈಲಾಗ್ಸ್ ಇದು 45 ಸಿನಿಮಾದಲ್ಲಿ ಉಪೇಂದ್ರ ಕ್ಯಾರೆಕ್ಟರ್. ಪ್ರೀ ರಿಲೀಸ್ ಇವೆಂಟ್ ನಲ್ಲಿ ಉಪ್ಪಿ ನಿರ್ಮಾಪಕ ರಮೇಶ್ ರೆಡ್ಡಿ ಮುಗ್ದ ಮಾತಿಗೆ ಕಳೆದುಹೋಗಿದ್ರು.

ಒಟ್ಟಿನಲ್ಲಿ ತ್ರಿಮೂರ್ತಿಗಳ ಜೊತೆ ಸಿನಿಮಾ‌ ಮಾಡಿರೋ ಅರ್ಜುನ್‌ ಜನ್ಯ ಸಾಹಸಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಮೆಚ್ಚಿಕೊಂಡಿದ್ದಾರೆ.  ಅಷ್ಟೇ ಅಲ್ಲ ಸದ್ಯ ಪರಭಾಷಿಗರು ಸಿನಿಮಾ ನೋಡಿ ವಿತರಣೆಗೆ ರೆಡಿಯಾಗಿರೋದಕ್ಕೆ ಚಿತ್ರತಂಡ ಕೂಡ ಥ್ರಿಲ್ ಆಗಿದೆ. ಇನ್ನೂ 45 ಸಿನಿಮಾ ಡಿಸೆಂಬರ್ 25ಕ್ಕೆ ಹೇಗೆ ಮೋಡಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

 

Exit mobile version