ನವದೆಹಲಿ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಸಾವು ಮತ್ತು ಇರಾನ್‌ನ ಪ್ರತೀಕಾರದ ಕ್ಷಿಪಣಿ ದಾಳಿಗಳು ಜಾಗತಿಕ ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸಿವೆ. ಇದರ ನೇರ ಪರಿಣಾಮವಾಗಿ, ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹಣ ಹಿಂತೆಗೆದು ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಸಂಚಲನ
ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಶೇ. 2.87 ರಷ್ಟು ಮತ್ತು ಬೆಳ್ಳಿ ಬೆಲೆ ಶೇ. 2.99 ರಷ್ಟು ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ $5,368.09 ತಲುಪುವ ಮೂಲಕ ನಾಲ್ಕು ವಾರಗಳ ಗರಿಷ್ಠ ಮಟ್ಟಕ್ಕೆ ಏರಿದೆ.
ಭಾರತದಲ್ಲಿ ಬೆಲೆ ಏರಿಕೆಯ ಬಿಸಿ
ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಿದೆ. 10 ಗ್ರಾಂ ಚಿನ್ನದ ಬೆಲೆ ಕೇವಲ ಒಂದು ದಿನದಲ್ಲಿ 1,62,490 ರೂ.ಗಳಿಂದ 1,73,090 ರೂ.ಗೆ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯು ಪ್ರತಿ ಕಿಲೋಗ್ರಾಂಗೆ 2,82,140 ರೂ.ಗಳಿಂದ 2,94,900 ರೂ.ಗೆ ತಲುಪಿದೆ. ಯುದ್ಧದ ತೀವ್ರತೆ ಹೆಚ್ಚಾದಲ್ಲಿ ಈ ಬೆಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ದುಬೈ ಪ್ರಸ್ತುತ ಭಾರತಕ್ಕೆ ಚಿನ್ನದ ಪ್ರಮುಖ ಪೂರೈಕೆದಾರ ಕೇಂದ್ರವಾಗಿದೆ. ಆದರೆ ಯುದ್ಧದ ಕಾರಣದಿಂದಾಗಿ ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ರದ್ದಾಗಿರುವುದು ಚಿನ್ನದ ಆಮದಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಭದ್ರತೆ ಮತ್ತು ವಿಮೆಯ ಕಾರಣದಿಂದಾಗಿ ಚಿನ್ನವನ್ನು ಸಾಮಾನ್ಯವಾಗಿ ವಿಮಾನದ ಮೂಲಕವೇ ಸಾಗಿಸಲಾಗುತ್ತದೆ. ವಿಮಾನಗಳ ಹಾರಾಟ ಸ್ಥಗಿತಗೊಂಡರೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಕಡಿಮೆಯಾಗಿ, ಬೆಲೆಗಳು ಮತ್ತಷ್ಟು ಕೃತಕವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ)
| ನಗರ | 24K ಚಿನ್ನ | 22K ಚಿನ್ನ | 18K ಚಿನ್ನ |
| ಬೆಂಗಳೂರು | ರೂ 1,73,090 | ರೂ 1,58,660 | ರೂ 1,29,820 |
| ಚೆನ್ನೈ | ರೂ 1,72,100 | ರೂ 1,57,760 | ರೂ 1,35,010 |
| ದೆಹಲಿ | ರೂ 1,73,240 | ರೂ 1,58,810 | ರೂ 1,29,970 |
| ಮುಂಬೈ | ರೂ 1,73,090 | ರೂ 1,58,660 | ರೂ 1,29,820 |
| ಹೈದರಾಬಾದ್ | ರೂ 1,73,090 | ರೂ 1,58,660 | ರೂ 1,29,820 |
ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಪ್ರತಿ ಕೆಜಿಗೆ)
-
ಬೆಂಗಳೂರು: ರೂ 2,81,850
-
ಮುಂಬೈ: ರೂ 2,81,630
-
ದೆಹಲಿ: ರೂ 2,81,140
-
ಚೆನ್ನೈ: ರೂ 2,82,450
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಿದೇಶಾಂಗ ನೀತಿ ಮತ್ತು ಬದಲಾಗುತ್ತಿರುವ ರಾಜತಾಂತ್ರಿಕ ಸಂಬಂಧಗಳು ಸಹ ಚಿನ್ನದ ಬೆಲೆ ಏರಿಕೆಗೆ ಪರೋಕ್ಷ ಕಾರಣವಾಗಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರು ಯಾವಾಗಲೂ ಚಿನ್ನವನ್ನೇ ನಂಬುತ್ತಾರೆ. ಹೀಗಾಗಿ ಪ್ರಸ್ಥುತ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ತೀವ್ರ ಹೆಚ್ಚಾಗುವ ಸಾದಯೆ ಇದೆ. ನಿಖರ ಬಂಗಾರದ ದರಕ್ಕಾಗಿ ಹತ್ತಿರದ ಆಭರಣದಂಗಡಿಗೆ ಭೇಟಿ ನೀಡಿ.





