ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದಚಿನ್ನದ ಬೆಲೆ ಇಂದು ಗಣನೀಯವಾಗಿ ಇಳಿಕೆ ಕಂಡಿದೆ. ಫೆಬ್ರವರಿ 13ರ ಶುಕ್ರವಾರದಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆಗಳು ಕುಸಿತ ಕಂಡಿದ್ದು, ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.
ಚಿನ್ನದ ದರದಲ್ಲಿ ಭಾರಿ ಕುಸಿತ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಪರಿಣಾಮ ಭಾರತದಲ್ಲೂ ಚಿನ್ನದ ಬೆಲೆ ಇಳಿದಿದೆ. ಇಂದು ಪ್ರತಿ ಗ್ರಾಂ ಚಿನ್ನದ ಮೇಲೆ ಸುಮಾರು 250 ರಿಂದ 280 ರೂಪಾಯಿಗಳಷ್ಟು ಇಳಿಕೆಯಾಗಿದೆ.
-
22 ಕ್ಯಾರಟ್ ಚಿನ್ನ: 10 ಗ್ರಾಂ ಚಿನ್ನದ ಬೆಲೆ ಈಗ 1,42,800 ರೂಪಾಯಿ ಆಗಿದೆ.
-
24 ಕ್ಯಾರಟ್ (ಅಪರಂಜಿ) ಚಿನ್ನ: ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 1,55,780 ರೂಪಾಯಿ ತಲುಪಿದೆ.
ವಿದೇಶಗಳಲ್ಲೂ ಚಿನ್ನದ ದರ ಕಡಿಮೆಯಾಗಿದ್ದು, ದುಬೈ ಮತ್ತು ಕುವೇತ್‌ನಂತಹ ರಾಷ್ಟ್ರಗಳಲ್ಲಿ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಚಿನ್ನ ಲಭ್ಯವಿರುವುದು ಕಂಡುಬಂದಿದೆ.
ಬೆಳ್ಳಿ ಬೆಲೆಯೂ ಇಳಿಕೆ
ಚಿನ್ನದ ಹಾದಿಯನ್ನೇ ಬೆಳ್ಳಿಯ ದರವೂ ಕಡಿಮೆಯಾಗುತ್ತಿದ್ದು, ಇಂದು ಪ್ರತಿ ಗ್ರಾಂ ಬೆಳ್ಳಿಯ ಬೆಲೆಯಲ್ಲಿ 10 ರಿಂದ 20 ರೂಪಾಯಿ ಇಳಿಕೆಯಾಗಿದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 280 ರೂಪಾಯಿ ಇದ್ದರೆ, 100 ಗ್ರಾಂ ಬೆಳ್ಳಿಯ ಬೆಲೆ 28,000 ರೂಪಾಯಿ ಇದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂಗೆ):
ಬೆಂಗಳೂರು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದ್ದರೂ, ಇತರ ನಗರಗಳಲ್ಲಿ ಅಲ್ಪ ವ್ಯತ್ಯಾಸಗಳಿವೆ:
-
ಬೆಂಗಳೂರು, ಮುಂಬೈ, ಕೋಲ್ಕತಾ: 14,280 ರೂ.
-
ಚೆನ್ನೈ: 14,400 ರೂ.
-
ದೆಹಲಿ, ಜೈಪುರ: 14,295 ರೂ.
-
ಅಹ್ಮದಾಬಾದ್: 14,285 ರೂ.
ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್ – 1 ಗ್ರಾಂಗೆ):
ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಚಿನ್ನದ ಬೆಲೆ ಹೀಗಿದೆ (ಭಾರತೀಯ ರೂಪಾಯಿಗಳಲ್ಲಿ):
-
ದುಬೈ: 13,646 ರೂ.
-
ಕುವೇತ್: 13,351 ರೂ.
-
ಅಮೆರಿಕ: 14,288 ರೂ.
-
ಸಿಂಗಾಪುರ: 14,291 ರೂ.
ಗಮಿನಿಸಿ: ಇಲ್ಲಿ ನೀಡಲಾಗಿರುವ ದರಗಳು ಮಾರುಕಟ್ಟೆಯ ಮೂಲ ದರಗಳಾಗಿವೆ. ಆಭರಣ ಮಳಿಗೆಗಳಲ್ಲಿ ನೀವು ಚಿನ್ನ ಖರೀದಿಸುವಾಗ ಈ ದರದ ಮೇಲೆ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಹೆಚ್ಚುವರಿಯಾಗಿ ಬೀಳುತ್ತವೆ. ಹೀಗಾಗಿ ನಿಖರ ಬೆಲೆಗಾಗಿ ನಿಮ್ಮ ಹತ್ತಿರದ ವಿಶ್ವಾಸಾರ್ಹ ಆಭರಣ ಮಳಿಗೆಗೆ ಭೇಟಿ ನೀಡುವುದು ಉತ್ತಮ.





