ಬೆಂಗಳೂರು, ಡಿಸೆಂಬರ್ 10, 2025: ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಗ್ರಾಂಗೆ ₹9ರಷ್ಟು ಹೆಚ್ಚಾಗಿದ್ದು, ಭಾರತದಲ್ಲಿ ಇಂದು ಬೆಳ್ಳಿ ಐತಿಹಾಸಿಕ ದಾಖಲೆ ಬರೆದಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹199ಕ್ಕೆ ತಲುಪಿದೆ. ತಮಿಳುನಾಡು, ಕೇರಳ ಮತ್ತು ಭುವನೇಶ್ವರದಲ್ಲಿ ಇದೇ ಬೆಳ್ಳಿ ₹207ಕ್ಕೆ ಮಾರಾಟವಾಗುತ್ತಿದೆ. ಅಂದರೆ, 100 ಗ್ರಾಂ ಬೆಳ್ಳಿಯ ಬೆಲೆ ಬೆಂಗಳೂರಿನಲ್ಲಿ ₹19,900 ಆದರೆ, ಚೆನ್ನೈ-ಕೇರಳದಲ್ಲಿ ₹20,700 ತಲುಪಿದೆ.
ಕಳೆದ ಅಕ್ಟೋಬರ್ 15ರಂದು ಬೆಳ್ಳಿ ₹190ರ ಗರಿಷ್ಠ ಮಟ್ಟವನ್ನು ಮುಟ್ಟಿ ದಾಖಲೆ ಬರೆದಿತ್ತು. ಕೇವಲ ಎರಡು ತಿಂಗಳಲ್ಲೇ ಆ ದಾಖಲೆಯನ್ನು ಮುರಿದು ₹199-207 ರೂ. ಹೆಚ್ಚಾಗಿದೆ.
ಇನ್ನು ಚಿನ್ನದ ಬೆಲೆಯಲ್ಲಿಯೂ ಸಣ್ಣ ಏರಿಕೆ ಕಂಡುಬಂದಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ ಸರಾಸರಿ ₹20ರಷ್ಟು ಹೆಚ್ಚಾಗಿ ₹11,945ಕ್ಕೆ ತಲುಪಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ರಾಷ್ಟ್ರದ ಬಹುತೇಕ ನಗರಗಳಲ್ಲಿ ₹1,19,450 ಆಗಿದೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ ₹13,031 (10 ಗ್ರಾಂಗೆ ₹1,30,310) ಇದೆ.
ಭಾರತದಾದ್ಯಂತ 22 ಕ್ಯಾರಟ್ ಚಿನ್ನ (ಪ್ರತಿ ಗ್ರಾಂ)
- ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ: ₹11,945
- ಚೆನ್ನೈ: ₹12,030
- ದೆಹಲಿ, ಜೈಪುರ, ಲಕ್ನೋ: ₹11,960
- ಅಹ್ಮದಾಬಾದ್: ₹11,950
ಬೆಳ್ಳಿ ಬೆಲೆ (ಪ್ರತಿ ಗ್ರಾಂ)
- ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಪುಣೆ: ₹199
- ಚೆನ್ನೈ, ಕೇರಳ, ಭುವನೇಶ್ವರ: ₹207
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನ (ಪ್ರತಿ ಗ್ರಾಂ – ಭಾರತೀಯ ರೂಪಾಯಿಯಲ್ಲಿ)
- ಮಲೇಷ್ಯಾ: ₹11,723
- ಸಿಂಗಾಪುರ: ₹11,823
- ಅಮೆರಿಕ: ₹11,785
- ದುಬೈ: ₹11,482
- ಸೌದಿ ಅರೇಬಿಯಾ: ₹11,459
ಬೆಳ್ಳಿಯ ಈ ರಾಕೆಟ್ ಏರಿಕೆಗೆ ಪ್ರಪಂಚ ಮಾರುಕಟ್ಟೆಯಲ್ಲಿ ಕೈಗಾರಿಕಾ ಬೇಡಿಕೆ, ಡಾಲರ್ ದುರ್ಬಲತೆ ಹೆಚ್ಚಾಗುತ್ತದೆ. ಚಿನ್ನದ ಬೆಲೆ ಸ್ಥಿರವಾಗಿರುವಾಗ ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚು ವೇಗವಾಗಿ ಏರಿಕೆ ಕಾಣುತ್ತಿರುವುದು ಗಮನಾರ್ಹ.
ಗಮನಿಸಿ: ಮೇಲಿನ ದರಗಳು ಪ್ರಮುಖ ಜ್ಯುವೆಲರಿ ಮಳಿಗೆಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರಿತ. ಇದಕ್ಕೆ GST (3%), ಮೇಕಿಂಗ್ ಚಾರ್ಜ್ (10-20%) ಮತ್ತು ಇತರ ತೆರಿಗೆಗಳು ಸೇರಿ ಅಂತಿಮ ಬೆಲೆ ಇನ್ನಷ್ಟು ಹೆಚ್ಚಾಗಬಹುದು. ಖರೀದಿಗೆ ಮುಂಚೆ ಸ್ಥಳೀಯ ಅಂಗಡಿಯಲ್ಲಿ ದರ ಪರಿಶೀಲಿಸಿ.





