ಯುಗಾದಿಗೆ ಟ್ರಿಪ್ ಪ್ಲಾನ್ ಮಾಡಿದ್ರಾ? ಹಾಗಾದ್ರೆ ಇಂಧನ ದರ ತಿಳಿದುಕೊಂಡು ಗಾಡಿಗೆ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಿ!

Untitled design 2026 03 18T102130.697

ಬೆಂಗಳೂರು, ಮಾರ್ಚ್ 18: ನಾಳೆ ಯುಗಾದಿ ಹಬ್ಬ (Yugadi Festival) ಆದ್ದರಿಂದ ರಜೆ ಇರುತ್ತದೆ. ಜೊತೆಗೆ ಊರು-ಕೇರಿಗಳಿಗೆ ಪ್ರಯಾಣ, ಪಿಕ್ನಿಕ್, ಖರೀದಿಗೆ ಅಲ್ಲಿ-ಇಲ್ಲಿ ಓಡಾಡೋದು ಕೂಡ ಇರುತ್ತದೆ. ಈಗಾಗಲೇ ಯುದ್ಧದ (War Impact) ಕಾರಣದಿಂದ ಪೆಟ್ರೋಲ್-ಡೀಸೆಲ್ ಕೊರತೆಯ ಆತಂಕವೂ ಶುರುವಾಗಿದೆ. ಹೀಗಾಗಿ ಇವತ್ತೇ ನಿಮ್ಮ ಗಾಡಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಬಿಡಿ. ಬಂಕ್ಗೆ ಹೋಗೋ ಮೊದಲು ಇವತ್ತಿನ ಇಂಧನ ದರ ಎಷ್ಟಿದೆ ಅಂತಾ ಚೆಕ್ ಮಾಡಿಕೊಳ್ಳಿ.

ಯುದ್ಧದ ಆತಂಕದಲ್ಲಿ ವಾಹನ ಸವಾರರು

ಯುದ್ಧದ ಕಾರಣ ಬಂಕ್ಗಳಲ್ಲಿ ಪೆಟ್ರೋಲ್-ಡೀಸೆಲ್ ಖಾಲಿಯಾಗಿ ಬಿಡುತ್ತದೆಯೋ ಎಂಬ ಆತಂಕದಲ್ಲಿ ವಾಹನ ಸವಾರರು ಇದ್ದಾರೆ. ಯುದ್ಧದ ಪರಿಣಾಮ ಬೆಲೆ ಮೇಲೆ ಪರಿಣಾಮ ಬೀಳುತ್ತದೆ ಅನ್ನೋ ಟೆನ್ಶನ್ಗಿಂತ ದಾಸ್ತಾನು ಖಾಲಿಯಾಗಿ ಬಿಟ್ಟರೆ ಕಥೆ ಏನು? ಎಂಬ ಆತಂಕ ಹಲವರದ್ದು. ಕೆಲವೇ ದಿನಗಳಲ್ಲಿ ಸಂಗ್ರಹಿಸಿಟ್ಟ ತೈಲಗಳು ಖಾಲಿಯಾಗಬಹುದು ಎಂದು ಗ್ರಾಹಕರು ತಮ್ಮ ಗಾಡಿಗಳಿಗೆ ಫುಲ್ ಟ್ಯಾಂಕ್ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ತೈಲಗಳನ್ನು ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ.

ಮಹಾನಗರಗಳಲ್ಲಿ ಇಂಧನ ಬೆಲೆ (ಮಾರ್ಚ್ 18, 2026)
ನಗರ ಪೆಟ್ರೋಲ್ (ರೂ. ಪ್ರತಿ ಲೀಟರ್) ಡೀಸೆಲ್ (ರೂ. ಪ್ರತಿ ಲೀಟರ್)
ಬೆಂಗಳೂರು ₹102.96 ₹90.99
ಚೆನ್ನೈ ₹100.80 ₹92.39
ಮುಂಬೈ ₹103.54 ₹90.03
ಕೊಲ್ಕತ್ತಾ ₹105.45 ₹92.02
ದೆಹಲಿ ₹94.77 ₹87.67
ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ವಿವರ
ಜಿಲ್ಲೆ ಪೆಟ್ರೋಲ್ ದರ (ರೂ. ಪ್ರತಿ ಲೀಟರ್) ಬದಲಾವಣೆ
ಬಾಗಲಕೋಟೆ ₹103.26 43 ಪೈಸೆ ಇಳಿಕೆ
ಬೆಂಗಳೂರು ₹102.96 ಸ್ಥಿರ
ಬೆಂಗಳೂರು ಗ್ರಾಮಾಂತರ ₹103.05 06 ಪೈಸೆ ಏರಿಕೆ
ಬೆಳಗಾವಿ ₹103.11 68 ಪೈಸೆ ಇಳಿಕೆ
ಬಳ್ಳಾರಿ ₹104.09 ಸ್ಥಿರ
ಬೀದರ್ ₹104.08 ಸ್ಥಿರ
ವಿಜಯಪುರ ₹103.10 29 ಪೈಸೆ ಏರಿಕೆ
ಚಾಮರಾಜನಗರ ₹103.40 27 ಪೈಸೆ ಏರಿಕೆ
ಚಿಕ್ಕಬಳ್ಳಾಪುರ ₹103.67 95 ಪೈಸೆ ಏರಿಕೆ
ಚಿಕ್ಕಮಗಳೂರು ₹104.08 13 ಪೈಸೆ ಇಳಿಕೆ
ಚಿತ್ರದುರ್ಗ ₹103.99 14 ಪೈಸೆ ಇಳಿಕೆ
ದಕ್ಷಿಣ ಕನ್ನಡ ₹102.09 65 ಪೈಸೆ ಇಳಿಕೆ
ದಾವಣಗೆರೆ ₹104.14 02 ಪೈಸೆ ಇಳಿಕೆ
ಧಾರವಾಡ ₹102.83 20 ಪೈಸೆ ಇಳಿಕೆ
ಗದಗ ₹103.19 50 ಪೈಸೆ ಇಳಿಕೆ
ಕಲಬುರಗಿ ₹103.00 24 ಪೈಸೆ ಇಳಿಕೆ
ಹಾಸನ ₹103.06 40 ಪೈಸೆ ಏರಿಕೆ
ಹಾವೇರಿ ₹103.60 ಸ್ಥಿರ
ಕೊಡಗು ₹104.08 03 ಪೈಸೆ ಏರಿಕೆ
ಕೋಲಾರ ₹102.85 38 ಪೈಸೆ ಇಳಿಕೆ
ಕೊಪ್ಪಳ ₹103.85 26 ಪೈಸೆ ಏರಿಕೆ
ಮಂಡ್ಯ ₹103.18 14 ಪೈಸೆ ಏರಿಕೆ
ಮೈಸೂರು ₹103.07 37 ಪೈಸೆ ಏರಿಕೆ
ರಾಯಚೂರು ₹104.09 ಸ್ಥಿರ
ರಾಮನಗರ ₹102.98 41 ಪೈಸೆ ಇಳಿಕೆ
ಶಿವಮೊಗ್ಗ ₹104.14 09 ಪೈಸೆ ಇಳಿಕೆ
ತುಮಕೂರು ₹103.23 76 ಪೈಸೆ ಇಳಿಕೆ
ಉಡುಪಿ ₹102.90 04 ಪೈಸೆ ಏರಿಕೆ
ಉತ್ತರ ಕನ್ನಡ ₹103.80 81 ಪೈಸೆ ಏರಿಕೆ
ವಿಜಯನಗರ ₹104.08 ಸ್ಥಿರ
ಯಾದಗಿರಿ ₹103.45 35 ಪೈಸೆ ಇಳಿಕೆ
ಕರ್ನಾಟಕದ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ವಿವರ
ಜಿಲ್ಲೆ ಡೀಸೆಲ್ ದರ (ರೂ. ಪ್ರತಿ ಲೀಟರ್)
ಬಾಗಲಕೋಟೆ ₹91.33
ಬೆಂಗಳೂರು ₹90.99
ಬೆಂಗಳೂರು ಗ್ರಾಮಾಂತರ ₹91.11
ಬೆಳಗಾವಿ ₹91.19
ಬಳ್ಳಾರಿ ₹92.22
ಬೀದರ್ ₹91.18
ವಿಜಯಪುರ ₹91.44
ಚಾಮರಾಜನಗರ ₹91.69
ಚಿಕ್ಕಬಳ್ಳಾಪುರ ₹91.69
ಚಿಕ್ಕಮಗಳೂರು ₹91.80
ಚಿತ್ರದುರ್ಗ ₹90.18
ದಕ್ಷಿಣ ಕನ್ನಡ ₹90.31
ದಾವಣಗೆರೆ ₹92.26
ಧಾರವಾಡ ₹90.93
ಗದಗ ₹91.27
ಕಲಬುರಗಿ ₹91.10
ಹಾಸನ ₹90.93
ಹಾವೇರಿ ₹91.65
ಕೊಡಗು ₹92.10
ಕೋಲಾರ ₹90.93
ಕೊಪ್ಪಳ ₹91.88
ಮಂಡ್ಯ ₹91.23
ಮೈಸೂರು ₹91.13
ರಾಯಚೂರು ₹92.18
ರಾಮನಗರ ₹91.05
ಶಿವಮೊಗ್ಗ ₹91.97
ತುಮಕೂರು ₹91.28
ಉಡುಪಿ ₹90.93
ಉತ್ತರ ಕನ್ನಡ ₹91.27
ವಿಜಯನಗರ ₹92.22
ಯಾದಗಿರಿ ₹91.51
ಗ್ರಾಹಕರಿಗೆ ಸಲಹೆ

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಾಳೆ ಬಹುತೇಕ ಪೆಟ್ರೋಲ್ ಬಂಕ್ಗಳು ಬಂದ್ ಆಗಿರಬಹುದು. ಜೊತೆಗೆ ಯುದ್ಧದ ಪರಿಣಾಮ ಇಂಧನ ದಾಸ್ತಾನು ಮತ್ತು ಬೆಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇಂದೇ ನಿಮ್ಮ ವಾಹನಕ್ಕೆ ಪೂರ್ಣ ಪ್ರಮಾಣದಲ್ಲಿ ಇಂಧನ ತುಂಬಿಸಿಕೊಳ್ಳುವುದು ಉತ್ತಮ. ನಿಮ್ಮ ಜಿಲ್ಲೆಯ ದರ ಪರಿಶೀಲಿಸಿ, ಬಳಿಕ ಬಂಕ್‌ಗೆ ಭೇಟಿ ನೀಡಿ. 

Exit mobile version