ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಮತ್ತು ಬೆಳ್ಳಿಗೆ ಕೇವಲ ಆಭರಣದ ಸ್ಥಾನವಲ್ಲದೆ, ಅದನ್ನ ಕಷ್ಟ ಕಾಲದಲ್ಲಿ ಬಳಕೆಯಾಗುವಂತೆ ಹೂಡಿಕೆಯೂ ಮಾಡಲಾಗುತ್ತದೆ. 2026ರ ಜನವರಿ 25ರ ಈ ದಿನದಂದು ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಮತ್ತು ಹಣದುಬ್ಬರದ ಒತ್ತಡದಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮದುವೆ ಹಾಗೂ ಹಬ್ಬಗಳ ಸೀಸನ್ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಬೆಲೆ ಏರಿಕೆ ಕಂಡು ಗ್ರಾಹಕರು ಬೇಸರ ವ್ತಕ್ತಪಡಿಸಿದ್ದಾರೆ.
ಇಂದಿನ ಚಿನ್ನದ ದರ
ಜಾಗತಿಕ ಮಟ್ಟದಲ್ಲಿ ಯುಎಸ್ ಡಾಲರ್ ವಿನಿಮಯ ದರ ಮತ್ತು ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇಂದು ಚಿನ್ನದ ಬೆಲೆ ಏರಿಕೆಯ ಪಥದಲ್ಲಿದೆ.
-
24 ಕ್ಯಾರೆಟ್ ಚಿನ್ನ (99.9% ಶುದ್ಧ): ಇಂದು 1 ಗ್ರಾಂ ಚಿನ್ನದ ಬೆಲೆ 16,026 ರೂ. ಗಳಾಗಿದೆ.
-
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಆಭರಣ ತಯಾರಿಕೆಯಲ್ಲಿ ಬಳಸುವ 22K ಚಿನ್ನದ ಬೆಲೆ 1 ಇಂದು ಗ್ರಾಂಗೆ 14,690 ರೂ. ಗಳಷ್ಟಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ:
ಭಾರತದ ವಿವಿಧ ನಗರಗಳಲ್ಲಿ ಸ್ಥಳೀಯ ತೆರಿಗೆ ಮತ್ತು ಸಾಗಾಣಿಕೆ ವೆಚ್ಚಗಳ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.
| ನಗರ | 24K ಚಿನ್ನ (ಪ್ರತಿ ಗ್ರಾಂ) | 22K ಚಿನ್ನ (ಪ್ರತಿ ಗ್ರಾಂ) |
| ದೆಹಲಿ | 16,041 ರೂ. | 14,705 ರೂ. |
| ಮುಂಬೈ | 16,026 ರೂ. | 14,690 ರೂ. |
| ಬೆಂಗಳೂರು/ಕೋಲ್ಕತ್ತಾ | 16,026 ರೂ. | 14,690 ರೂ. |
| ಚೆನ್ನೈ | 15,949 ರೂ. | 14,570 ರೂ. |
ಬೆಳ್ಳಿಯ ಬೆಲೆ ವಿವರ
ಕೈಗಾರಿಕಾ ಬೇಡಿಕೆ ಮತ್ತು ಹೂಡಿಕೆದಾರರ ಆಸಕ್ತಿಯಿಂದಾಗಿ ಬೆಳ್ಳಿಯ ಬೆಲೆಯೂ ಸಹ ಗರಿಷ್ಠ ಮಟ್ಟದಲ್ಲಿದೆ. ಇಂದು ಭಾರತದಲ್ಲಿ 1 ಕಿಲೋಗ್ರಾಂ ಬೆಳ್ಳಿಯ ಬೆಲೆ ಸರಿಸುಮಾರು 3,35,000 ರೂ. ಗಳಲ್ಲಿ ವಹಿವಾಟು ನಡೆಸುತ್ತಿದೆ. ಸ್ಟರ್ಲಿಂಗ್ ಬೆಳ್ಳಿ (925 ಸಿಲ್ವರ್) ಬೆಲೆ ಕೆಜಿಗೆ 3,34,900 ರೂ. ಗಳಷ್ಟಿದೆ.
ನಗರವಾರು ಬೆಳ್ಳಿ ಬೆಲೆ (10 ಗ್ರಾಂಗೆ):
-
ದೆಹಲಿ, ಮುಂಬೈ, ಕೋಲ್ಕತ್ತಾ: 3,350 ರೂ.
-
ಚೆನ್ನೈ: 3,650 ರೂ.
ಬೆಲೆ ಏರಿಳಿತಕ್ಕೆ ಕಾರಣಗಳೇನು?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದಂತೆ ದೇಶೀಯವಾಗಿಯೂ ಬೆಲೆ ಏರುತ್ತದೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತವು ಆಮದು ಮಾಡಿಕೊಳ್ಳುವ ಚಿನ್ನದ ಬೆಲೆಯನ್ನು ದುಬಾರಿಯಾಗಿಸುತ್ತದೆ. ಇವುಗಳೊಟ್ಟಿಗೆ ಭಾರತದಲ್ಲಿ ಮದುವೆಗಳ ಸೀಸನ್ ಶುರುವಾದಾಗ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ, ಇದು ಸಹಜವಾಗಿಯೇ ಬೆಲೆ ಏರಿಕೆಗೆ ಕಾರಣವಾಗುತ್ತದೆ.
ಗಮನಿಸಿ: ಮೇಲೆ ನೀಡಿರುವ ದರಗಳು ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಒಳಗೊಂಡಿರುವುದಿಲ್ಲ. ಖರೀದಿಸುವ ಮುನ್ನ ನಿಮ್ಮ ಸ್ಥಳೀಯ ಆಭರಣದ ಅಂಗಡಿಗಳಲ್ಲಿ ಬಳಿ ನಿಖರವಾದ ಬೆಲೆಯನ್ನು ಪರಿಶೀಲಿಸಿ.





