ಜಿಎಸ್‌ಟಿ ಪರಿಷ್ಕರಣೆ: ಉತ್ಪನ್ನಗಳ ಮೇಲೆ ಹಳೆ-ಹೊಸ ದರ ನಮೂದಿಸುವಂತೆ ಗ್ರಾಹಕ ವ್ಯವಹಾರ ಸಚಿವಾಲಯ ಸೂಚನೆ

ಜಿಎಸ್‌ಟಿ ದರ ಕಡಿತ: ಉತ್ಪನ್ನಗಳ ಹೊಸ ಬೆಲೆ ನಮೂದಿಸಲು ಸರ್ಕಾರದ ಆದೇಶ!

Untitled design (22)

ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರ ಪರಿಷ್ಕರಣೆಯ ಬಳಿಕ, ಗ್ರಾಹಕರಿಗೆ ಈ ಸುಧಾರಣೆಯ ಲಾಭ ತಲುಪಿಸುವ ಸಲುವಾಗಿ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ಉತ್ಪಾದಕರು, ತಯಾರಕರು, ವಿತರಕರು ಮತ್ತು ಮಾರಾಟಗಾರರಿಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ಹೊರಡಿಸಿದೆ. ಎಲ್ಲಾ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಹಳೆಯ ದರದ ಜತೆಗೆ ಹೊಸ ದರಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ನಿರ್ದೇಶನ ನೀಡಿದೆ.

ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯದ ಪ್ರಮುಖ ನಿರ್ದೇಶನಗಳು:

ಪ್ಯಾಕೇಜಿಂಗ್ ವಸ್ತುಗಳ ಬಳಕೆ:

ಜಿಎಸ್‌ಟಿ ದರ ಪರಿಷ್ಕರಣೆಗೆ ಮೊದಲು ತಯಾರಕರು, ಪ್ಯಾಕರ್‌ಗಳು ಅಥವಾ ಆಮದುಕಾರರು ಬಳಸದೆ ಉಳಿದಿರುವ ಯಾವುದೇ ಪ್ಯಾಕೇಜಿಂಗ್ ವಸ್ತುಗಳು ಅಥವಾ ರ‍್ಯಾಪರ್‌ಗಳನ್ನು 2025ರ ಡಿಸೆಂಬರ್ 31ರವರೆಗೆ ಅಥವಾ ಆ ವಸ್ತುಗಳು ಖಾಲಿಯಾಗುವವರೆಗೆ, ಯಾವುದು ಮೊದಲೋ ಅದು ಜಾರಿಯಲ್ಲಿರುವವರೆಗೆ ಬಳಸಬಹುದು. ಆದರೆ, ಜಿಎಸ್‌ಟಿ ಅನುಷ್ಠಾನದಿಂದಾಗಿ ಚಿಲ್ಲರೆ ಮಾರಾಟ ಬೆಲೆ (ಎಂಆರ್‌ಪಿ)ಯಲ್ಲಿ ಅಗತ್ಯವಾದ ತಿದ್ದುಪಡಿಗಳನ್ನು ಸ್ಟಾಂಪಿಂಗ್, ಸ್ಟಿಕರ್ ಹಾಕುವಿಕೆ ಅಥವಾ ಆನ್‌ಲೈನ್ ಮುದ್ರಣದ ಮೂಲಕ ಮಾಡಬೇಕು.

ಕೇಂದ್ರ ಸರ್ಕಾರದ ಆದೇಶ ಪ್ರತಿ ವೀಕ್ಷಿಸಿಲು ಈ ಲಿಂಕ್ ಕ್ಲಿಕ್ಕಿಸಿ: Permission-to-the-Manufacturers-or-Packerts-or-Importers

ಕೇಂದ್ರ ಸರ್ಕಾರದ ಈ ಕ್ರಮವು ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ಗ್ರಾಹಕ ವ್ಯವಹಾರ ಸಚಿವಾಲಯವು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒತ್ತಾಯಿಸಿದ್ದು, ಉತ್ಪಾದಕರು ಮತ್ತು ಮಾರಾಟಗಾರರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ. ಈ ಮೂಲಕ ಜನಸಾಮಾನ್ಯರಿಗೆ ಜಿಎಸ್‌ಟಿ ಸುಧಾರಣೆಯ ಲಾಭ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ.

Exit mobile version