ಬೆಂಗಳೂರು: ಶಿವರಾತ್ರಿ ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದು, ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಂದು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿವೆ.ಬಂಗಾರದ ಬೆಲೆ ದಿಢೀರ್ ಏರಿಕೆಯಾಗಿದ್ದು, ಆಭರಣ ಖರೀದಿಗೆ ಮುಂದಾಗಿದ್ದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ದರ
ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ಬರೋಬ್ಬರಿ 2,290 ರೂಪಾಯಿ ಏರಿಕೆಯಾಗಿದೆ. ಇಂದಿನ ಬೆಲೆ ವಿವರಗಳು ಹೀಗಿವೆ:
-
1 ಗ್ರಾಂ: ₹15,649 (ನಿನ್ನೆ ₹15,420 ಇತ್ತು)
-
10 ಗ್ರಾಂ: ₹1,56,490 (ನಿನ್ನೆ ₹1,54,200 ಇತ್ತು)
-
100 ಗ್ರಾಂ: ₹15,64,900 (ಒಂದೇ ದಿನ ₹22,900 ಹೆಚ್ಚಳ)
22 ಕ್ಯಾರೆಟ್ ಆಭರಣ ಚಿನ್ನದ ದರ
ಆಭರಣ ತಯಾರಿಕೆಯಲ್ಲಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ.
-
1 ಗ್ರಾಂ ಬೆಲೆ: ₹210 ಏರಿಕೆಯೊಂದಿಗೆ ₹14,345 ತಲುಪಿದೆ.
-
10 ಗ್ರಾಂ ಬೆಲೆ: ₹2,100 ಏರಿಕೆಯೊಂದಿಗೆ ₹1,43,450 ದಾಖಲಾಗಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ
ಚಿನ್ನಕ್ಕಿಂತಲೂ ಮಿಗಿಲಾಗಿ ಇಂದು ಬೆಳ್ಳಿಯ ಬೆಲೆಯು ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಬೆಳ್ಳಿಯ ಬೆಲೆ ಕೆಜಿಗೆ ₹15,000 ಹೆಚ್ಚಳವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2,70,000 ರೂಪಾಯಿಗಳಿಗೆ ತಲುಪಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಅತಿ ದೊಡ್ಡ ಏರಿಕೆ ಎಂದು ವಿಶ್ಲೇಷಿಸಲಾಗಿದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂಗೆ):
| ನಗರ | ಬೆಲೆ (₹) |
| ಚೆನ್ನೈ | ₹15,818 |
| ದೆಹಲಿ | ₹15,664 |
| ಬೆಂಗಳೂರು | ₹15,649 |
| ಮುಂಬೈ | ₹15,649 |
| ಹೈದರಾಬಾದ್ | ₹15,649 |
ಬೆಲೆ ಏರಿಕೆಗೆ ಕಾರಣವೇನು ?
ಜಾಗತಿಕ ರಾಜಕೀಯ ಉದ್ವಿಗ್ನತೆ , ಡಾಲರ್ ಮೌಲ್ಯದ ಏರಿಳಿತ ಮತ್ತು ಕೇಂದ್ರ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಸಂಗ್ರಹಿಸುತ್ತಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿವೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡಿರುವುದು ಬೇಡಿಕೆಯನ್ನು ಹೆಚ್ಚಿಸಿದೆ.
