ಬೆಂಗಳೂರು, ಮಾ. 20: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಇದೀಗ ದಿಢೀರನೆ ಪಾತಾಳಕ್ಕೆ ಕುಸಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಮತ್ತು ಹಬ್ಬದ ಸೀಸನ್‌ನ ಪರಿಣಾಮದಿಂದ ಚಿನ್ನದ ದರದಲ್ಲಿ ಬರೋಬ್ಬರಿ ₹2,700 ರಷ್ಟು ಭಾರಿ ಇಳಿಕೆ ಕಂಡುಬಂದಿದೆ. ಇದರಿಂದ ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿದ್ದು, ಹಬ್ಬದ ಖುಷಿ ದುಪ್ಪಟ್ಟಾಗಿದೆ.
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ
ಮಾರ್ಚ್ 20, 2026ರ ಶುಕ್ರವಾರದಂದು ರಾಜ್ಯದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಅಪರಂಜಿ ಚಿನ್ನದ (24K Gold) 10 ಗ್ರಾಂ ಬೆಲೆ ₹1,50,270 ರೂ.ಗಳಿಗೆ ಇಳಿದಿದೆ. 22 ಕ್ಯಾರಟ್ ಆಭರಣ ಚಿನ್ನದ (22K Gold) 10 ಗ್ರಾಂ ಬೆಲೆ ₹1,37,740 ರೂ.ಗಳಾಗಿದೆ. ಕಳೆದ ವಾರದ ದರಕ್ಕೆ ಹೋಲಿಸಿದರೆ ಈ ಇಳಿಕೆ ಗಣನೀಯವಾಗಿದ್ದು, ಹಬ್ಬದ ಸೀಸನ್ನಲ್ಲಿ ಖರೀದಿದಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಬೆಳ್ಳಿ ದರದಲ್ಲೂ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ (Silver Rate) ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ₹2,59,900 ರೂ.ಗಳಾಗಿದ್ದು, ಇತರ ನಗರಗಳಲ್ಲೂ ಸರಿಸುಮಾರು ಇದೇ ದರ ಕಂಡುಬಂದಿದೆ.
ವಿವಿಧ ಕ್ಯಾರಟ್ಗಳಲ್ಲಿ ಚಿನ್ನದ ಬೆಲೆ
ಒಂದು ಗ್ರಾಂ ಚಿನ್ನ (1GM)
-
18 ಕ್ಯಾರೆಟ್ ಚಿನ್ನದ ಬೆಲೆ – ₹11,270
-
22 ಕ್ಯಾರೆಟ್ ಚಿನ್ನದ ಬೆಲೆ – ₹13,774
-
24 ಕ್ಯಾರೆಟ್ ಬಂಗಾರದ ಬೆಲೆ – ₹15,027
ಎಂಟು ಗ್ರಾಂ ಚಿನ್ನ (8GM)
-
18 ಕ್ಯಾರೆಟ್ ಚಿನ್ನದ ಬೆಲೆ – ₹90,160
-
22 ಕ್ಯಾರೆಟ್ ಚಿನ್ನದ ಬೆಲೆ – ₹1,10,192
-
24 ಕ್ಯಾರೆಟ್ ಬಂಗಾರದ ಬೆಲೆ – ₹1,20,216
ಹತ್ತು ಗ್ರಾಂ ಚಿನ್ನ (10GM)
-
18 ಕ್ಯಾರೆಟ್ ಚಿನ್ನದ ಬೆಲೆ – ₹1,12,270
-
22 ಕ್ಯಾರೆಟ್ ಚಿನ್ನದ ಬೆಲೆ – ₹1,37,740
-
24 ಕ್ಯಾರೆಟ್ ಬಂಗಾರದ ಬೆಲೆ – ₹1,50,270
ನೂರು ಗ್ರಾಂ ಚಿನ್ನ (100GM)
-
18 ಕ್ಯಾರೆಟ್ ಚಿನ್ನದ ಬೆಲೆ – ₹11,27,000
-
22 ಕ್ಯಾರೆಟ್ ಚಿನ್ನದ ಬೆಲೆ – ₹13,77,400
-
24 ಕ್ಯಾರೆಟ್ ಬಂಗಾರದ ಬೆಲೆ – ₹15,02,700
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
| ನಗರ | ಇಂದು 22K (1 ಗ್ರಾಂ) |
|---|---|
| ಚೆನ್ನೈ | ₹15,163 |
| ಮುಂಬೈ | ₹15,027 |
| ದೆಹಲಿ | ₹15,042 |
| ಕೋಲ್ಕತ್ತಾ | ₹15,027 |
| ಬೆಂಗಳೂರು | ₹15,027 |
| ಹೈದರಾಬಾದ್ | ₹15,027 |
| ಕೇರಳ | ₹15,027 |
| ಪುಣೆ | ₹15,027 |
| ವಡೋದರಾ | ₹15,032 |
| ಅಹಮದಾಬಾದ್ | ₹15,032 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (Silver Rate in Different Cities):
| ನಗರ | 1 ಕೆಜಿ |
|---|---|
| ಚೆನ್ನೈ | ₹2,64,900 |
| ಮುಂಬೈ | ₹2,59,900 |
| ದೆಹಲಿ | ₹2,59,900 |
| ಕೋಲ್ಕತ್ತಾ | ₹2,59,900 |
| ಬೆಂಗಳೂರು | ₹2,59,900 |
| ಹೈದರಾಬಾದ್ | ₹2,64,900 |
| ಕೇರಳ | ₹2,64,900 |
| ಪುಣೆ | ₹2,59,900 |
| ವಡೋದರಾ | ₹2,59,900 |
| ಅಹಮದಾಬಾದ್ | ₹2,59,900 |
