ಇಂದು ಪ್ರೇಮುಗಳ ದಿನ ನಿಮ್ಮ ಸಂಗಾತಿಗೆ ಆಭರಣ ಅಥವಾ ಒಡವೆ ಗಿಫ್ಟ್ ಮಾಡಬೇಕೆನ್ನುವವರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ವಾರ ಗಗನಕ್ಕೇರಿದ್ದ ಬಂಗಾರದ ದರ ಇದೀಗ ಸತತ ಎರಡನೇ ದಿನವೂ ಇಳಿಕೆಯನ್ನು ದಾಖಲಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆ ಹಾಗೂ ಡಾಲರ್ ಮೌಲ್ಯದಲ್ಲಿ ಸ್ವಲ್ಪ ಸ್ಥಿರತೆ ಕಂಡುಬಂದಿರುವುದರಿಂದ ಚಿನ್ನದ ದರ ಕುಸಿದಿದೆ ಎನ್ನಲಾಗುತ್ತಿದೆ.
ಮನೆಯಲ್ಲೇ ಮಗಳ ಅಥವಾ ಮಗನ ಮದುವೆ ಫಿಕ್ಸ್ ಆಗಿದ್ದರೆ, ಆಭರಣ ಖರೀದಿಸಲು ಇದು ಉತ್ತಮ ಸಮಯವಾಗಬಹುದು. ವಿಶೇಷವಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರ ಸ್ವಲ್ಪ ಇಳಿಕೆ ಕಂಡಿದ್ದು, ಖರೀದಿದಾರರಲ್ಲಿ ನಿರಾಳತೆ ಮೂಡಿಸಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ
ಇಂದು ಬೆಳಿಗ್ಗೆ 7 ಗಂಟೆಗೆ ಪರಿಶೀಲಿಸಿದ ಮಾರುಕಟ್ಟೆ ದರ ಪ್ರಕಾರ
-
24 ಕ್ಯಾರೆಟ್ (10 ಗ್ರಾಂ) – ₹1,55,770
-
22 ಕ್ಯಾರೆಟ್ (10 ಗ್ರಾಂ) – ₹1,42,790
-
ಬೆಳ್ಳಿ (1 ಕೆಜಿ) – ₹2,95,100
ಚಿನ್ನದ ದರದಲ್ಲಿ ಇಳಿಕೆ ಕಂಡುಬಂದರೂ, ಮಾರುಕಟ್ಟೆ ತಜ್ಞರು ಮುಂದಿನ ದಿನಗಳಲ್ಲಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ಖರೀದಿಗೆ ಸೂಕ್ತ ಸಮಯವನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.
ಕರ್ನಾಟಕದಲ್ಲಿ ಚಿನ್ನದ ಬೆಲೆ (ಗ್ರಾಂವಾರು)
ಒಂದು ಗ್ರಾಂ (1GM)
-
18 ಕ್ಯಾರೆಟ್ – ₹11,683
-
22 ಕ್ಯಾರೆಟ್ – ₹14,232
-
24 ಕ್ಯಾರೆಟ್ – ₹15,839
ಎಂಟು ಗ್ರಾಂ (8GM)
-
18 ಕ್ಯಾರೆಟ್ – ₹93,464
-
22 ಕ್ಯಾರೆಟ್ – ₹1,14,232
-
24 ಕ್ಯಾರೆಟ್ – ₹1,26,712
ಹತ್ತು ಗ್ರಾಂ (10GM)
-
18 ಕ್ಯಾರೆಟ್ – ₹1,16,830
-
22 ಕ್ಯಾರೆಟ್ – ₹1,42,790
-
24 ಕ್ಯಾರೆಟ್ – ₹1,58,390
ನೂರು ಗ್ರಾಂ (100GM)
-
18 ಕ್ಯಾರೆಟ್ – ₹11,68,300
-
22 ಕ್ಯಾರೆಟ್ – ₹14,27,900
-
24 ಕ್ಯಾರೆಟ್ – ₹15,83,900
ಮದುವೆ ಸೀಸನ್‌ನಲ್ಲಿ ಸಾಮಾನ್ಯವಾಗಿ 22 ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಭರಣಗಳಿಗಾಗಿ ಇದು ಹೆಚ್ಚು ಉಪಯುಕ್ತವಾಗಿರುವುದರಿಂದ ಖರೀದಿದಾರರು 22K ಚಿನ್ನದತ್ತ ಹೆಚ್ಚಿನ ಆಸಕ್ತಿ ತೋರುತ್ತಾರೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ (1 ಗ್ರಾಂ) ದರ
| ನಗರ | ದರ |
|---|---|
| ಚೆನ್ನೈ | ₹14,791 |
| ಮುಂಬೈ | ₹14,631 |
| ದೆಹಲಿ | ₹14,646 |
| ಕೋಲ್ಕತ್ತಾ | ₹14,631 |
| ಬೆಂಗಳೂರು | ₹14,631 |
| ಹೈದರಾಬಾದ್ | ₹14,631 |
| ಕೇರಳ | ₹14,631 |
| ಪುಣೆ | ₹14,631 |
| ವಡೋದರಾ | ₹14,636 |
| ಅಹಮದಾಬಾದ್ | ₹14,636 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
| ನಗರ | ದರ |
|---|---|
| ಚೆನ್ನೈ | ₹2,99,900 |
| ಮುಂಬೈ | ₹2,89,900 |
| ದೆಹಲಿ | ₹2,89,900 |
| ಕೋಲ್ಕತ್ತಾ | ₹2,89,900 |
| ಬೆಂಗಳೂರು | ₹2,89,900 |
| ಹೈದರಾಬಾದ್ | ₹2,99,900 |
| ಕೇರಳ | ₹2,99,900 |
| ಪುಣೆ | ₹2,89,900 |
| ವಡೋದರಾ | ₹2,89,900 |
| ಅಹಮದಾಬಾದ್ | ₹2,89,900 |
ಖರೀದಿಗೆ ಇದು ಸೂಕ್ತ ಸಮಯವೇ?
ಚಿನ್ನದ ದರದಲ್ಲಿ ಸತತ ಎರಡನೇ ದಿನವೂ ಇಳಿಕೆ ಕಂಡುಬಂದಿರುವುದು ಖರೀದಿದಾರರಿಗೆ ಒಳ್ಳೆಯ ಸೂಚನೆ. ಆದರೆ ಮಾರುಕಟ್ಟೆ ಚಲನೆಗಳು ಜಾಗತಿಕ ಆರ್ಥಿಕ ಪರಿಸ್ಥಿತಿ, ಡಾಲರ್ ಮೌಲ್ಯ ಮತ್ತು ಬಡ್ಡಿದರಗಳ ಮೇಲೆ ಅವಲಂಬಿತವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಏರಿಳಿತ ಮುಂದುವರಿಯಬಹುದು.
