ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ಡೈವರ್ಟ್ (9)

ಬೆಂಗಳೂರು, ಸೆ.18: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಳಿತ ಮುಂದುವರಿದಿದೆ. ಇಂದು ಶುಕ್ರವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ ಸುಮಾರು 145 ರೂ. ಹೆಚ್ಚಾಗಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ದಾಖಲಾಗಿದ್ದು, ಪ್ರತಿ ಗ್ರಾಂಗೆ 5 ರೂ. ಜಿಗಿತ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ಕಂಡಿವೆ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,41,550 ರೂ. ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,54,420 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 25,000 ರೂ. ಮಟ್ಟದಲ್ಲಿದೆ. ಬೆಂಗಳೂರಿನಲ್ಲೂ ಇದೇ ದರ ದಾಖಲಾಗಿದ್ದು, 10 ಗ್ರಾಂ 22 ಕ್ಯಾರಟ್ ಚಿನ್ನ 1,41,550 ರೂ. ಹಾಗೂ 100 ಗ್ರಾಂ ಬೆಳ್ಳಿ 25,000 ರೂ. ಇದೆ.

ಇಂದು, ಭಾರತದಲ್ಲಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 15,442 ರೂ. ಇದ್ದರೆ, 22 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 14,155 ರೂ. ಇದೆ. 18 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 11,582 ರೂ. ಇದೆ. ಬೆಳ್ಳಿ ಒಂದು ಗ್ರಾಂಗೆ 250 ರೂ. ದರದಲ್ಲಿದೆ.

ನಗರವಾರು ಚಿನ್ನದ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ ಮತ್ತು ಭುವನೇಶ್ವರದಲ್ಲಿ 22 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 14,155 ರೂ. ಇದೆ. ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ 14,170 ರೂ., ಅಹ್ಮದಾಬಾದ್‌ನಲ್ಲಿ 14,160 ರೂ. ದರ ದಾಖಲಾಗಿದೆ.

ಬೆಳ್ಳಿ ಬೆಲೆಯಲ್ಲೂ ನಗರದಿಂದ ನಗರಕ್ಕೆ ಸ್ವಲ್ಪ ವ್ಯತ್ಯಾಸವಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ ಮತ್ತು ಪುಣೆಯಲ್ಲಿ ಒಂದು ಗ್ರಾಂ ಬೆಳ್ಳಿ 250 ರೂ. ಇದ್ದರೆ, ಚೆನ್ನೈ, ಕೇರಳ ಮತ್ತು ಭುವನೇಶ್ವರದಲ್ಲಿ 255 ರೂ. ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಒಂದು ಗ್ರಾಂಗೆ 140.38 ಡಾಲರ್ ಹಾಗೂ ಸ್ಪಾಟ್ ಸಿಲ್ವರ್ ಒಂದು ಗ್ರಾಂಗೆ 2.126 ಡಾಲರ್ ಇದೆ. ವಿವಿಧ ದೇಶಗಳಲ್ಲಿನ 24 ಕ್ಯಾರಟ್ ಚಿನ್ನದ ದರವನ್ನು ಗಮನಿಸಿದರೆ, ಭಾರತದಲ್ಲಿ ಒಂದು ಗ್ರಾಂಗೆ 15,442 ರೂ. ದರ ದಾಖಲಾಗಿದೆ. ಮಲೇಷ್ಯಾ, ದುಬೈ, ಅಮೆರಿಕ, ಸಿಂಗಾಪುರ, ಕತಾರ್, ಸೌದಿ ಅರೇಬಿಯಾ, ಓಮನ್ ಮತ್ತು ಕುವೇತ್‌ಗಳಲ್ಲೂ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.

 

Exit mobile version