ಬೆಂಗಳೂರು: ಡಿಸೆಂಬರ್ 5, ಶುಕ್ರವಾರ ಮದುವೆ ಸೀಸನ್ ಭರದಲ್ಲಿ ಚಿನ್ನ ಖರೀದಿಗೆ ಜನರು ಅಂಗಡಿಗಳಿಗೆ ಧಾವಿಸುತ್ತಿರುವ ಸಮಯ ಇದು. ಆದರೆ ಅಂಗಡಿಯ ಬಾಗಿಲು ತಟ್ಟುವ ಮುನ್ನ ಒಮ್ಮೆ ದರ ಪಟ್ಟಿಗೆ ಕಣ್ಣಾಯಿಸಿ. ಕಳೆದ ಎರಡು ದಿನಗಳಿಂದ ಏರಿಳಿತ ಕಂಡಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಬದಲಾವಣೆ ದಾಖಲಾಗಿದೆ. ಇದು ಗ್ರಾಹಕರಿಗೆ ಸಿಹಿಸುದ್ದಿಯೇ? ಇಲ್ಲವೇ ಜೇಬಿಗೆ ಹೊರೆ ತರಬಹುದಾದ ಕಹಿಸುದ್ದಿಯೇ? ಇಂದು ಮಾರುಕಟ್ಟೆಯಲ್ಲಿ ಏನಿದೆ ನೋಡೋಣ.
ಬೆಂಗಳೂರು–ಕರ್ನಾಟಕ: ಇಂದಿನ ಚಿನ್ನ–ಬೆಳ್ಳಿ ದರ (ಡಿಸೆಂಬರ್ 05, 2025)
ಬೆಂಗಳೂರು ನಗರದಲ್ಲಿ ಇಂದು ಬಂಗಾರದ ದರ ಹೀಗೆ ಇದೆ.
-
24 ಕ್ಯಾರಟ್ (10 ಗ್ರಾಂ): ₹1,29,650
-
22 ಕ್ಯಾರಟ್ (10 ಗ್ರಾಂ): ₹1,18,840
-
ಬೆಳ್ಳಿ (1 ಕೆಜಿ): ₹1,71,900
ಇಂದು ದರದಲ್ಲಿ ಸಣ್ಣ ಏರಿಳಿತ ಕಂಡುಬಂದಿದ್ದು, ಮದುವೆ ಪ್ಲಾನ್ ಮಾಡುತ್ತಿರುವ ಕುಟುಂಬಗಳ ಗಮನ ಸೆಳೆದಿದೆ.
ಕರ್ನಾಟಕದಲ್ಲಿ ಚಿನ್ನದ ದರ (1GM, 8GM, 10GM, 100GM)
1 ಗ್ರಾಂ ಚಿನ್ನ
-
18K: ₹9,723
-
22K: ₹11,884
-
24K: ₹12,965
8 ಗ್ರಾಂ ಚಿನ್ನ
-
18K: ₹77,784
-
22K: ₹95,072
-
24K: ₹1,03,720
10 ಗ್ರಾಂ ಚಿನ್ನ
-
18K: ₹97,230
-
22K: ₹1,18,840
-
24K: ₹1,29,650
100 ಗ್ರಾಂ ಚಿನ್ನ
-
18K: ₹9,72,300
-
22K: ₹11,88,400
-
24K: ₹12,96,500
ವಿವಿಧ ನಗರಗಳಲ್ಲಿ 22K ಚಿನ್ನದ ದರ (1 ಗ್ರಾಂ)
ನಗರ ಇಂದಿನ ದರ ಚೆನ್ನೈ ₹12,019 ಮುಂಬೈ ₹11,884 ದೆಹಲಿ ₹11,899 ಕೋಲ್ಕತ್ತಾ ₹11,884 ಬೆಂಗಳೂರು ₹11,884 ಹೈದರಾಬಾದ್ ₹11,884 ಕೇರಳ ₹11,884 ಪುಣೆ ₹11,884 ವಡೋದರಾ ₹11,889 ಅಹಮದಾಬಾದ್ ₹11,889 ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ನಗರ ಇಂದಿನ ದರ ಚೆನ್ನೈ ₹19,990 ಮುಂಬೈ ₹19,090 ದೆಹಲಿ ₹19,090 ಕೋಲ್ಕತ್ತಾ ₹19,090 ಬೆಂಗಳೂರು ₹19,090 ಹೈದರಾಬಾದ್ ₹19,990 ಕேரಳ ₹19,990 ಪುಣೆ ₹19,090 ವಡೋದರಾ ₹19,090 ಅಹಮದಾಬಾದ್ ₹19,090 ಚಿನ್ನ–ಬೆಳ್ಳಿ ದರಗಳು ಏಕೆ ಬದಲಾಗುತ್ತವೆ?
ಚಿನ್ನದ ಬೆಲೆ ಒಂದೇ ದೇಶದಲ್ಲಿ ಒಂದೇ ರೀತಿ ಇರುವುದಿಲ್ಲ. ಇದಕ್ಕೆ ಕಾರಣ
-
ಅಬಕಾರಿ ಸುಂಕ (Excise Duty)
-
ಮೇಕಿಂಗ್ ಚಾರ್ಜ್
-
ರಾಜ್ಯ ಸರ್ಕಾರದ ತೆರಿಗೆಗಳು
-
ಜಾಗತಿಕ ಮಾರುಕಟ್ಟೆಯ ಬದಲಾವಣೆ
ಈ ಎಲ್ಲಾ ಅಂಶಗಳು ಬಂಗಾರದ ಅಂತಿಮ ಮಾರಾಟ ದರಕ್ಕೆ ನೇರವಾಗಿ ಪರಿಣಾಮ ಬೀರುತ್ತವೆ.
-
ಇಂದಿನ ದರವನ್ನು ಗಮನಿಸಿದರೆ ಮಾರುಕಟ್ಟೆಯು ಗ್ರಾಹಕರಿಗೆ ಮಿಶ್ರ ಫಲ ನೀಡಿದಂತಿದೆ. ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಇಲ್ಲದೇ, ಸಣ್ಣ ಏರಿಳಿತ ಮಾತ್ರ ಕಾಣಿಸಿಕೊಳ್ಳುತ್ತಿದೆ. ಮದುವೆ, ಗೃಹಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಚಿನ್ನ ಕೊಳ್ಳಬೇಕಾದವರು. ದರ ಇಳಿಕೆಯ ದಿನದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಳ್ಳುವುದು ಉತ್ತಮ ಆಯ್ಕೆ.
