ಬೆಂಗಳೂರು, ಅಕ್ಟೋಬರ್ 3: ಸತತವಾಗಿ ಏರಿಕೆಯ ನಡತೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಗಮನಾರ್ಹ ಇಳಿಕೆ ದಾಖಲಿಸಿವೆ. ಬುಲಿಯನ್ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 60 ರೂಪಾಯಿ ಕಡಿಮೆಯಾಗಿದ್ದು, ಬೆಳ್ಳಿ ಬೆಲೆಯೂ 2 ರೂಪಾಯಿ ಇಳಿದಿದೆ.
ಇಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 10,880 ರೂಪಾಯಿಯಿಂದ ಕುಸಿದು 10,820 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 11,804 ರೂಪಾಯಿಯಾಗಿದೆ. ಬೆಳ್ಳಿಯ ಬೆಲೆ ಬೆಂಗಳೂರು ಸೇರಿದಂತೆ ಹಲವೆಡೆ 153 ರೂಪಾಯಿಯಿಂದ 151 ರೂಪಾಯಿಗೆ ಇಳಿದರೆ, ಚೆನ್ನೈ ಮತ್ತು ಕೇರಳದಂತೆ ಕೆಲವು ನಗರಗಳಲ್ಲಿ 161 ರೂಪಾಯಿಯಿಂದ 159 ರೂಪಾಯಿಗೆ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಮ್‌ಗೆ)
ನಗರ | 22 ಕ್ಯಾರಟ್ ಚಿನ್ನದ ಬೆಲೆ (₹) | 24 ಕ್ಯಾರಟ್ ಚಿನ್ನದ ಬೆಲೆ (₹) |
---|---|---|
ಬೆಂಗಳೂರು | 10,820 | 11,804 |
ಚೆನ್ನೈ | 10,820 | 11,804 |
ಮುಂಬೈ | 10,820 | 11,804 |
ದೆಹಲಿ | 10,835 | 11,820 |
ಕೋಲ್ಕತಾ | 10,820 | 11,804 |
ಅಹ್ಮದಾಬಾದ್ | 10,825 | 11,809 |
ಜೈಪುರ್ | 10,835 | 11,820 |
ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್‌ಗೆ)
ನಗರ | ಬೆಳ್ಳಿ ಬೆಲೆ (₹) |
---|---|
ಬೆಂಗಳೂರು | 151 |
ಚೆನ್ನೈ | 161 |
ಮುಂಬೈ | 151 |
ದೆಹಲಿ | 151 |
ಕೋಲ್ಕತಾ | 151 |
ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
-
ದುಬೈ: 429 ಡಿರಾಮ್ (10,366 ರೂ.)
-
ಸಿಂಗಾಪುರ: 153.60 ಸಿಂಗಾಪುರ್ ಡಾಲರ್ (10,572 ರೂ.)
-
ಅಮೆರಿಕ: 119.50 ಡಾಲರ್ (10,606 ರೂ.)
-
ಕುವೇತ್: 34.94 ಕುವೇತಿ ದಿನಾರ್ (10,137 ರೂ.)
ಚಿನ್ನ ಮತ್ತು ಬೆಳ್ಳಿ ಖರೀದಿಸುವ ಸಂದರ್ಭದಲ್ಲಿ, ದರದ ಮೇಲೆ 3% ಜಿಎಸ್‌ಟಿ ಮತ್ತು ಆಭರಣಗಳಿಗೆ ಅನ್ವಯಿಸುವ ಮೇಕಿಂಗ್ ಚಾರ್ಜ್ ಮೇಲೆ 5% ಜಿಎಸ್‌ಟಿ ಹಾಕಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.