ಮದುವೆ ಸೀಸನ್‌ನಲ್ಲಿ ಗೋಲ್ಡ್‌‌ ರೇಟ್‌‌ ಎಷ್ಟಿದೆ? ಇಂದಿನ ದರ ವಿವರ ತಿಳಿದುಕೊಳ್ಳಿ!

Untitled design 2025 12 03T101112.917

ಮದುವೆ ಸೀಸನ್‌ ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಬಂಗಾರ ಪ್ರಿಯರಿಗೆ ಇಂದು ಸ್ವಲ್ಪ ನೆಮ್ಮದಿ ನೀಡುವ ಪರಿಸ್ಥಿತಿ ಮೂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು, ಡಾಲರ್‌ ಮೌಲ್ಯದ ಕುಸಿತ ಮತ್ತು ಜಿಯೋಪಾಲಿಟಿಕಲ್ ಸ್ಥಿತಿಗತಿಗಳ ಪರಿಣಾಮವಾಗಿ ಇಂದು ಚಿನ್ನದ ಬೆಲೆಯಲ್ಲಿ ಸಣ್ಣ ಮಟ್ಟದ ಇಳಿಕೆ ಅಥವಾ ಸ್ಥಿರತೆ ಕಾಣುವ ಸಾಧ್ಯತೆ ವ್ಯಕ್ತವಾಗಿದೆ. ದೇಶದಾದ್ಯಂತ ಬಂಗಾರದ ದರಗಳಲ್ಲಿ ಸ್ವಲ್ಪ ಚಲನವಲನ ಕಂಡರೂ, ಬೆಂಗಳೂರಿನಲ್ಲಿ ದರಗಳು ಸಮತೋಲನದಲ್ಲಿ ಸಾಗುತ್ತಿವೆ.

ಮದುವೆ ಮನೆಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುವ ಈ ಸಮಯದಲ್ಲಿ ದರ ಇಳಿಕೆ ಗ್ರಾಹಕರ ಮುಖಕ್ಕೆ ನಗೆ ತರಿಸುವಂತಿದೆ. ನೀವು ಇಂದು ಆಭರಣ ಖರೀದಿಸಲು, ಬಂಗಾರದಲ್ಲಿ ಹೂಡಿಕೆ ಮಾಡಲು ಅಥವಾ ಚಿನ್ನದ ನೂತನ ದರಗಳನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ಇಲ್ಲಿದೆ ರಾಜ್ಯದ ಮತ್ತು ಪ್ರಮುಖ ನಗರಗಳ ಇಂದಿನ ಸಂಪೂರ್ಣ ದರ ವರದಿ.

ಬೆಂಗಳೂರಿನ ಇಂದಿನ ಚಿನ್ನ–ಬೆಳ್ಳಿ ದರ (03-12-2025)

ಈ ದರಗಳು ಶುದ್ಧ ಚಿನ್ನದ ಮೌಲ್ಯಕ್ಕೆ ಸಂಬಂಧಿಸಿದವು. ಆಭರಣ ಅಂಗಡಿಯಲ್ಲಿ ಖರೀದಿಸುವಾಗ ಜಿಎಸ್ಟಿ ಮತ್ತು ಮೇಕಿಂಗ್ ಶುಲ್ಕ ಸೇರಿದಂತೆ ಅಂತಿಮ ದರ ಹೆಚ್ಚಾಗಬಹುದು.

ಕರ್ನಾಟಕದಲ್ಲಿ ವಿವಿಧ ತೂಕ ಮತ್ತು ಕ್ಯಾರೆಟ್ ಪ್ರಕಾರ ಚಿನ್ನದ ದರಗಳು
1 ಗ್ರಾಂ ಚಿನ್ನ
8 ಗ್ರಾಂ ಚಿನ್ನ
10 ಗ್ರಾಂ ಚಿನ್ನ
100 ಗ್ರಾಂ ಚಿನ್ನ
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಿಗೆ ಚಿನ್ನದ ದರ (1 ಗ್ರಾಂ)
ನಗರ ಇಂದು 22K ದರ
ಚೆನ್ನೈ ₹12,039
ಮುಂಬೈ ₹11,904
ದೆಹಲಿ ₹11,919
ಕೋಲ್ಕತ್ತಾ ₹11,904
ಬೆಂಗಳೂರು ₹11,904
ಹೈದರಾಬಾದ್ ₹11,904
ಕೇರಳ ₹11,904
ಪುಣೆ ₹11,904
ವಡೋದರಾ ₹11,909
ಅಹಮದಾಬಾದ್ ₹11,909
ವಿವಿಧ ನಗರಗಳಲ್ಲಿ ಇಂದಿನ ಬೆಳ್ಳಿ ದರ (100 ಗ್ರಾಂ)
ನಗರ ಬೆಳ್ಳಿ ದರ
ಚೆನ್ನೈ ₹19,590
ಮುಂಬೈ ₹18,790
ದೆಹಲಿ ₹18,790
ಕೋಲ್ಕತ್ತಾ ₹18,790
ಬೆಂಗಳೂರು ₹18,790
ಹೈದರಾಬಾದ್ ₹19,590
ಕೇರಳ ₹19,590
ಪುಣೆ ₹18,790
ವಡೋದರಾ ₹18,790
ಅಹಮದಾಬಾದ್ ₹18,790

 ಬೆಲೆ ಇಳಿಕೆಗೆ ಕಾರಣಗಳು

ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ, ರೂಪಾಯಿ-ಡಾಲರ್ ವಿನಿಮಯ ದರ ಮತ್ತು ಸ್ಥಳೀಯ ಬೇಡಿಕೆ-ಹೂಡಿಕೆ ಸರಬರಾಜಿನ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರದಲ್ಲಿ ಸ್ಥಿರತೆ ಕಂಡುಬಂದಿರುವುದು ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ದೈನಂದಿನ ಏರಿಳಿತಗಳು ಈ ಸಣ್ಣ ಇಳಿಕೆಗೆ ಕಾರಣವಾಗಿರಬಹುದು. ಹೂಡಿಕೆದಾರರು ಇತರ ಆಸ್ತಿ ವರ್ಗಗಳ (ಈಕ್ವಿಟಿ ಮಾರುಕಟ್ಟೆ) ಕಡೆಗೆ ಆಕರ್ಷಿತರಾದರೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ.

ಹೂಡಿಕೆದಾರರಿಗೆ ಸೂಚನೆ

ಚಿನ್ನವನ್ನು ದೀರ್ಘಕಾಲೀನ ಹೂಡಿಕೆಯ ಸಾಧನವಾಗಿ ನೋಡುವವರು, ಇಂತಹ ಸಣ್ಣ ಇಳಿಕೆಯನ್ನು ಬಹಳ ದೊಡ್ಡ ಪ್ರವೃತ್ತಿಯ ಬದಲಾವಣೆ ಎಂದು ಪರಿಗಣಿಸಬಾರದು. ಮಾರುಕಟ್ಟೆ ಏರುಪೇರಾಗಿರಬಹುದು. ಆದ್ದರಿಂದ, ಹೆಚ್ಚಿನ ಮೊತ್ತದ ಹೂಡಿಕೆ ಮಾಡುವ ಮೊದಲು ದಿನಗಳ ತುಣುಕು ಮಾರುಕಟ್ಟೆ ಚಲನವಲನಗಳನ್ನು ಗಮನಿಸಲು ಸಲಹೆ ನೀಡಲಾಗುತ್ತದೆ. 

Exit mobile version