ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2026: ಜಿಡಿಪಿ ಶೇ. 6.8-7.2% ಬೆಳೆಯುವ ನಿರೀಕ್ಷೆ

BeFunky collage 2026 01 29T135721.022

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ 2025-26ರ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನೇತೃತ್ವದ ತಂಡ ತಯಾರಿಸಿದ ಈ ವರದಿಯ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ (2026-27) ಭಾರತದ ಜಿಡಿಪಿ ಬೆಳವಣಿಗೆ ಶೇ. 6.8ರಿಂದ 7.2ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಜಿಡಿಪಿ ಬೆಳವಣಿಗೆ ಶೇ. 7.4ರಷ್ಟು ತಲುಪಬಹುದು ಎಂದು ವರದಿ ಹೇಳಿದೆ.

ಸರ್ಕಾರದ ಸುಧಾರಣಾ ಕ್ರಮಗಳು, ಪ್ರಬಲ ಮೂಲಭೂತ ಅಂಶಗಳು ಮತ್ತು ಆರ್ಥಿಕ ಸ್ಥಿರತೆಯಿಂದಾಗಿ ಭಾರತದ ಬೆಳವಣಿಗೆ ಉತ್ತಮವಾಗಿರುವುದಾಗಿ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಹಲವು ಅಂತರರಾಷ್ಟ್ರೀಯ ಏಜೆನ್ಸಿಗಳ ಅಂದಾಜುಗಳಿಗಿಂತ ಹೆಚ್ಚಿನ ನಿರೀಕ್ಷೆಯನ್ನು ತೋರಿಸುತ್ತದೆ.

ಆರ್ಥಿಕ ಸಮೀಕ್ಷೆ ಎಂದರೇನು?
ಪ್ರತಿ ವರ್ಷ ಬಜೆಟ್‌ಗೆ ಮುಂಚಿತವಾಗಿ ಮಂಡಿಸಲಾಗುವ ಆರ್ಥಿಕ ಸಮೀಕ್ಷಾ ವರದಿ ದೇಶದ ಆರ್ಥಿಕ ಸ್ಥಿತಿ-ಗತಿಯನ್ನು ವಿಶ್ಲೇಷಿಸುತ್ತದೆ. ಹಿಂದಿನ ವರ್ಷದ ಬೆಳವಣಿಗೆ, ಹಣದುಬ್ಬರ, ಉದ್ಯೋಗ, ರಫ್ತು-ಆಮದು, ಫಾರೆಕ್ಸ್ ಭಂಡಾರ, ಸಾಮಾಜಿಕ ಸೂಚಕಗಳು (ಆರೋಗ್ಯ, ಶಿಕ್ಷಣ), ಹಣಕಾಸು ನೀತಿ ಮತ್ತು ಮುಂದಿನ ವರ್ಷದ ನಿರೀಕ್ಷೆಗಳನ್ನು ಇದರಲ್ಲಿ ವಿವರಿಸಲಾಗುತ್ತದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಈ ವರದಿಯನ್ನು ತಯಾರಿಸುತ್ತದೆ.

ಪ್ರಮುಖ ಹೈಲೈಟ್ಸ್:

ಈ ಆರ್ಥಿಕ ಸಮೀಕ್ಷೆಯು ಮುಂಬರುವ ಬಜೆಟ್‌ಗೆ ಮಾರ್ಗದರ್ಶನ ನೀಡುವ ಪ್ರಮುಖ ದಾಖಲೆಯಾಗಿದ್ದು, ದೇಶದ ಆರ್ಥಿಕ ಭವಿಷ್ಯಕ್ಕೆ ಆಶಾದಾಯಕ ಸಂಕೇತ ನೀಡುತ್ತಿದೆ.

Exit mobile version