ಬಿಗ್ ಬಾಸ್ ಕನ್ನಡ ಸೀಜನ್ 10 ರ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಿಷಾ ಗೌಡ, ತಮ್ಮ ಪ್ರವೇಶದೊಂದಿಗೆ ಮನೆಯ ಸಂಪೂರ್ಣ ವಾತಾವರಣವನ್ನು ಬದಲಾಯಿಸಿದ್ದಾರೆ. ಬಿಗ್ ಬಾಸ್ ಅವರನ್ನು ಸ್ವಾಗತಿಸಿದ ನಂತರ, ರಿಷಾ ನೇರವಾಗಿ ಮನೆಗೆ ಪ್ರವೇಶಿಸಿ ಆ್ಯಕ್ಟಿವಿಟಿ ಏರಿಯಾವನ್ನು ತಲುಪಿದರು.
ಮನೆಯ ಪ್ರಮುಖ ಸ್ಪರ್ಧಿಗಳ ಫೋಟೋಗಳನ್ನು ಒಳಗೊಂಡಿರುವ ಬಾಕ್ಸ್ ಅನ್ನು ರಿಷಾ ಗೌಡ ಪುಡಿಪುಡಿ ಮಾಡುವ ಮೂಲಕ ತಮ್ಮ ಹಳೇ ಸ್ಪರ್ಧಿಗಳ ಮೇಲೆ ಅವರಿಗಿರುವ ಅಭಿಪ್ರಾಯವನ್ನ ಹೇಳಿ, ಅಲ್ಲಿರುವ ಸ್ಪರ್ಧಿಗಳ ಫೋಟೋ ಅಂತಿಸಿರುವ ಬಾಕ್ಸ್ ಅನ್ನು ಅವರು ಒಡೆದು ಹಾಕಬೇಕಿತ್ತು. ಮೊದಲಿಗೆ ಧ್ರುವರ ಫೋಟೋ ಬಾಕ್ಸ್ ಅನ್ನು ತೆಗೆದುಕೊಂಡ ರಿಷಾ, ಧ್ರುವರ ಸಮಯ ಮುಗಿದಿದೆ ಎಂದು ಹೇಳಿ, ಬಾಕ್ಸ್‌ನ ಪುಡಿ ಮಾಡಿದರು.
ರಿಷಾ ಕೊಟ್ಟ ಮಾತಿನ ಏಟನ್ನ ಅರಗಿಸಿಕೊಳ್ತಾರಾ ಮನೆಮಂದಿ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/NSxIR3Tgvi
— Colors Kannada (@ColorsKannada) October 20, 2025
ನಂತರ ರಿಷಾ ಸ್ಪಂದನಾ ಅವರ ಫೋಟೋ ಬಾಕ್ಸ್ ಅನ್ನು ತೆಗೆದುಕೊಂಡರು. ಕಪಟ ಮುಖವಾಡ ಹಾಕಿಕೊಂಡು ಬದುಕುತ್ತಿರೋವರು ಸ್ಪಂದನಾ ಎಂದು ಟೀಕೆ ಮಾಡಿದ ರಿಷಾ, ಅವರ ಭಾವಚಿತ್ರವನ್ನು ಸಹ ಪುಡಿಮಾಡಿದರು.
ನಂತರ ಅಶ್ವಿನಿ ಗೌಡರ ಭಾವಚಿತ್ರ ಇರುವ ಬಾಕ್ಸ್ ತೆಗೆದುಕೊಂಡ ರಿಷಾ, ಅಶ್ವಿನಿ ಹೇಳೋದು ಒಂದು, ಮಾಡೋದು ಇನ್ನೊಂದು. ನಾನು ಅವರಿಗೆ ಬಿಗ್ ಬಾಸ್ ಏನೆಂದು ತೋರಿಸ್ತೇನೆ ಎಂದು ಸವಾಲ್ ಹಾಕಿದರು ಜೊತೆಗೆ ಆನೆ ನಡೆದಿದ್ದೇ ಹಾದಿ ಯಾವಾಗಲೂ ಕರೆಕ್ಟ್ ಆಗಿ ಇರಲ್ಲ ಅನ್ನೋದನ್ನ ತೋರಿಸ್ತೀನಿ ಎಂದು ಬಾಕ್ಸ್ ಅನ್ನು ಒಡೆದು ಹಾಕಿದರು
ಕೊನೆಯದಾಗಿ, ರಿಷಾ ಕಾಕ್ರೋಚ್ ಅವರ ಭಾವಚಿತ್ರ ಇರುವ ಬಾಕ್ಸ್ ತೆಗೆದುಕೊಂಡು, ನನ್ನ ಟಾರ್ಗೆಟ್ ನೇರ ಕಾಕ್ರೋಚ್ ಎಂದು ಹೇಳಿ, ಅವರು ತುಂಬಾನೇ ಟಫ್ ಕಂಟೆಸ್ಟೆಂಟ್ ಅಂತಾ ಅನ್ಕೊಂಡಿದ್ದೆ. ಕಾಕ್ರೋಚ್ ಅನ್ನೋದ್ರ ಬದಲು ಉತ್ತರ ಕುಮಾರ ಎಂದು ಹೆಸರಿಡಲು ನಿರ್ಧರಿಸಿದ್ದೇನೆ ಟೀಕಿಸಿ ಬಾಕ್ಸ್ ಹೊಡೆದಿದ್ದಾರೆ.
