ಗಿಲ್ಲಿ-ಕಾವ್ಯ ಮಧ್ಯೆ ಮನಸ್ತಾಪ: “ನಿಮ್ಮನ್ನು ಇಷ್ಟಪಡುವವರಿಗೆ ವ್ಯಾಲ್ಯೂ ಕೊಡಿ” ಎಂದ ರಕ್ಷಿತಾ

Untitled design 2026 01 10T175802.445

ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆಟದ ಜೊತೆಗೆ ಮನೆಯೊಳಗಿನ ಸಂಬಂಧಗಳು ಮನಸ್ತಾಪಗಳು ಕೂಡ ವೀಕ್ಷಕರ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ, ಕಾವ್ಯ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ನಡೆಯುತ್ತಿರುವ ಘಟನೆಗಳು ಮತ್ತೆ ಹಾಟ್ ಟಾಪಿಕ್ ಆಗಿವೆ.

ರಕ್ಷಿತಾ ಶೆಟ್ಟಿ ಅವರು ಕಾವ್ಯ ಶೈವ ಅವರನ್ನು ಪದೇ ಪದೇ ನಾಮಿನೇಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿದ್ದು, ಈ ವಿಷಯ ಗಿಲ್ಲಿಗೂ ತಿಳಿದು ಬಂದಿದೆ. ಇದರ ಪರಿಣಾಮವಾಗಿ ಗಿಲ್ಲಿ ಮತ್ತು ಕಾವ್ಯ ನಡುವೆ ಸಣ್ಣ ಮನಸ್ತಾಪ ಉಂಟಾಗಿದೆ.

ಮನಸ್ತಾಪದ ಬಳಿಕ ಗಿಲ್ಲಿ ಪದೇ ಪದೇ ಕಾವ್ಯ ಬಳಿ ಹೋಗಿ ಕ್ಷಮೆ ಕೇಳುತ್ತಿದ್ದಾರೆ. ಆದರೆ ಕಾವ್ಯ ಮನಸ್ಸು ಇನ್ನೂ ಸರಿ ಹೋದಂತಿಲ್ಲ. ಈ ಎಲ್ಲದನ್ನು ಗಮನಿಸಿದ ರಕ್ಷಿತಾ ಶೆಟ್ಟಿ, ಒಬ್ಬ ಒಳ್ಳೆಯ ಸ್ನೇಹಿತೆಯಾಗಿ ಗಿಲ್ಲಿಗೆ ಕೆಲವು ಬುದ್ಧಿಮಾತುಗಳನ್ನು ಹೇಳಿದ್ದಾರೆ.

“ಸಮಯ ಕೊಡು ಅಂತ ಯಾರಿಗೂ ಒತ್ತಾಯ ಮಾಡಬೇಡಿ”

ರಕ್ಷಿತಾ ಶೆಟ್ಟಿ ಗಿಲ್ಲಿಗೆ ಹೇಳಿದ ಪ್ರಮುಖ ಸಲಹೆ ಎಂದರೆ “ನನ್ನ ಜೊತೆ ಮಾತಾಡಿ, ನನಗೆ ಲವ್ ಮಾಡು, ಗೆಳತನ ಮಾಡು, ಸಮಯ ಕೊಡು ಅಂತ ಯಾರಿಗೂ ಒತ್ತಾಯ ಮಾಡಬೇಡಿ.” ಯಾರಾದರೂ ನಿಮ್ಮನ್ನು ಬಲವಂತವಾಗಿ ಇಷ್ಟಪಡಬೇಕೆಂದು ನೀವು ಒತ್ತಾಯಿಸಿದರೆ, ಅದರಲ್ಲಿ ಸ್ವಾಭಿಮಾನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

“ನೀವು ಒಬ್ಬರಿಗೆ ನೂರು ಪರ್ಸೆಂಟ್ ಕೊಟ್ಟರೂ, ಅವರು ನಿಮಗೆ ಕೇವಲ ಹತ್ತು ಪರ್ಸೆಂಟ್ ಸಮಯ ಕೊಡಬಹುದು. ಆದರೆ ಯಾರು ನಿಮ್ಮನ್ನು ನಿಜವಾಗಿಯೂ ಇಷ್ಟಪಡ್ತಾರೋ, ಅವರಿಗೆ ನೀವು ಹತ್ತು ಪರ್ಸೆಂಟ್ ಕೊಟ್ಟರೂ, ಅವರು ನಿಮಗೆ 200 ಪರ್ಸೆಂಟ್ ವ್ಯಾಲ್ಯೂ ಕೊಡ್ತಾರೆ” ಎಂದು ರಕ್ಷಿತಾ ಹೇಳಿದ್ದಾರೆ. ಈ ಮಾತು ಗಿಲ್ಲಿಗೆ ಮಾತ್ರವಲ್ಲ, ಮನೆಮಂದಿಯಲ್ಲಿರುವ ಎಲ್ಲರಿಗೂ ಒಂದು ಪಾಠದಂತಿತ್ತು.

ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅಭಿಮಾನ

ರಕ್ಷಿತಾ ಶೆಟ್ಟಿ ಅವರಿಗೆ ಗಿಲ್ಲಿ ತರಹದ ಹುಡುಗ ಇಷ್ಟ ಎಂಬ ವಿಷಯವನ್ನು ಅವರು ಈ ಹಿಂದೆ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮೊದಲಿಗೆ ‘ಗೌರಿ ಕಲ್ಯಾಣ’ ಧಾರಾವಾಹಿ ತಂಡ ಬಿಗ್ ಬಾಸ್ ಮನೆಗೆ ಬಂದ ಸಂದರ್ಭದಲ್ಲಿ ಮದುವೆ ವಿಚಾರ ಚರ್ಚೆಗೆ ಬಂದಿತ್ತು. ಆಗ ಅನುಪಮಾ ಗೌಡ, “ನಿನಗೆ ಮದುವೆ ಆಗಬೇಕಾದ ಹುಡುಗ ಹೇಗಿರಬೇಕು?” ಎಂದು ಕೇಳಿದಾಗ, ರಕ್ಷಿತಾ ನೇರವಾಗಿ “ಗಿಲ್ಲಿ ಹಾಗಿರಬೇಕು” ಎಂದು ಹೇಳಿದ್ದರು.

ಈ ಮಾತು ಕೇಳಿ ಮನೆಮಂದಿಯೆಲ್ಲಾ ನಗುತ್ತಾ ರಕ್ಷಿತಾ ಅವರನ್ನು ಕಾಲೆಳೆದಿದ್ದರು. ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಕೂಡ ಈ ವಿಚಾರವಾಗಿ ಪ್ರಶ್ನೆ ಕೇಳಿದಾಗ, “ಜಾಸ್ತಿ ಯೋಚಿಸದವರು, ಒಳ್ಳೆಯ ಸೆನ್ಸ್ ಆಫ್ ಹ್ಯೂಮರ್ ಇರುವವರು ನನಗೆ ಇಷ್ಟ. ಹೀಗಾಗಿ ಗಿಲ್ಲಿ ನನಗೆ ಇಷ್ಟ” ಎಂದು ಸುದೀಪ್ ಮುಂದೆಯೇ ಹೇಳಿದ್ದಾರೆ.

ಈಗ ಮತ್ತೆ ಗಿಲ್ಲಿ, ಕಾವ್ಯ ವಿಚಾರದಲ್ಲಿ ರಕ್ಷಿತಾ ಹೇಳಿದ ಮಾತುಗಳು, ಸಂಬಂಧಗಳಲ್ಲಿ ಸ್ವಾಭಿಮಾನ ಮತ್ತು ವ್ಯಾಲ್ಯೂ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿವೆ.

Exit mobile version