ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈಗ ಒಂದು ಹೊಸ ತಿರುವು ಕಂಡುಬಂದಿದೆ. ಪ್ರತಿ ವಾರ ಹೊಸ ವಿಷಯ, ಹೊಸ ವಿವಾದ, ಹೊಸ ಬಾಂಡ್‌ಗಳ ನಡುವೆ, ಈಗ ಗಮನ ಸೆಳೆಯುತ್ತಿರುವ ಹೆಸರು ರಕ್ಷಿತಾ ಶೆಟ್ಟಿ. ಶಾಂತ ಸ್ವಭಾವ, ನೇರ ಮಾತು, ಹಾಗೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಕಂಫರ್ಟ್ ನೀಡುವ ರೀತಿಯ ವರ್ತನೆಯಿಂದ ಅವರು ವೀಕ್ಷಕರ ಹೃದಯ ಗೆದ್ದಿದ್ದಾರೆ.
ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದು ಚುಟುಕು ಪ್ರಶ್ನೆ ಕೇಳುತ್ತಾರೆ. “ರಕ್ಷಿತಾ ಅಸಲಿನಾ? ನಕಲಿನಾ?” ಎಂಬುದು. ಈ ಪ್ರಶ್ನೆಗೆ ಅಶ್ವಿನಿ ಗೌಡ ಅವರು ಸುದೀಪ್ ಮುಂದೆ ನೇರವಾಗಿ ಹೇಳಿದ ಮಾತು ಎಲ್ಲರಿಗೂ ಗಮನ ಸೆಳೆದಿತ್ತು. ಅವರು, “ರಕ್ಷಿತಾ ಜಗಳ ಮಾಡ್ತಾರೆ ಅನ್ನಿಸಲ್ಲ, ಅವರು ಡ್ಯಾನ್ಸ್ ಮಾಡಿಕೊಂಡೇ ಆಟ ಆಡ್ತಾರೆ,” ಎಂದರು. ಅಂದರೆ, ಅವರ ಆಟದಲ್ಲೂ ಒಂದು ನಟನೆ ಇದೆ ಎಂಬ ಅಭಿಪ್ರಾಯ. ಇದಕ್ಕೆ ಕಿಚ್ಚ ಸುದೀಪ್ ಅವರು “ಕೆಲವರು ನಮಗೆ ಸೂಟ್ ಆಗ್ತಾರೆ, ಕೆಲವರು ಆಗೋದಿಲ್ಲ. ಅದಕ್ಕೆ ಯಾರನ್ನಾದರೂ ತಪ್ಪು ಹಿಡಿಯೋದಿಲ್ಲ” ಎಂದು ಮಾತು ಹೇಳಿದರು.
ರಿಷಾ ಮತ್ತು ಕಾಕ್ರೋಚ್ ಸುಧಿಯ ಆರೋಪಗಳು
ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ರಿಷಾ ಕೂಡ ರಕ್ಷಿತಾ ಬಗ್ಗೆ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದರು. “ಅವರು 15 ನಿಮಿಷ ಸ್ಪಷ್ಟವಾಗಿ ಕನ್ನಡ ಮಾತನಾಡ್ತಾರೆ. ಆದರೆ ಶನಿವಾರ ಭಾನುವಾರ ಬಂತು ಅಂದರೆ ಭಾಷೆಯಲ್ಲೂ ಬದಲಾವಣೆ ಆಗುತ್ತೆ. ಇದು ಅವರ ಸ್ಟ್ರಾಟಜಿ ಇರಬಹುದು” ಎಂದರು.
ಕಾಕ್ರೋಚ್ ಸುಧಿ ಕೂಡ “ರಕ್ಷಿತಾ ತುಂಬಾ ಫೇಕ್” ಎಂದು ನೇರವಾಗಿ ಹೇಳಿ ವಿವಾದ ಸೃಷ್ಟಿಸಿದರು. ಆದರೆ, ಈ ಎಲ್ಲ ಆರೋಪಗಳ ನಡುವೆಯೂ ರಕ್ಷಿತಾ ಶೆಟ್ಟಿ ತಮ್ಮ ಶಾಂತ ನಡವಳಿಕೆಯಿಂದ, ಚರ್ಚೆಗಳಿಗೆ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದರು.
ವೀಕ್ಷಕರಿಂದ ರಕ್ಷಿತಾಗೆ ಭಾರಿ ಬೆಂಬಲ
ಪ್ರೋಮೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ನೆಟ್ಟಿಗರಿಂದ ರಕ್ಷಿತಾ ಪರ ಅಭಿಪ್ರಾಯಗಳ ಮಳೆ ಸುರಿಯಿತು.
“ಅವಳು ಎಲ್ಲರ ಜೊತೆ ಮಾತನಾಡ್ತಾಳೆ ಅಂದ್ರೆ ಅದೇ ಅವಳ ಸ್ವಭಾವ. ಎಲ್ಲರಿಗೂ ಕಂಫರ್ಟ್ ನೀಡ್ತಾಳೆ. ಸುದೀಪ್ ಸರ್ ಮುಂದೆ ಮಾತ್ರ ನರ್ವಸ್ ಆಗುತ್ತಾಳೆ, ಅದಕ್ಕೇ ಭಾಷೆ ಬದಲಾಯ್ತದೆ,” ಎಂದು ಅಭಿಮಾನಿಗಳು ಕಮೆಂಟ್ ಮಾಡಿದರು.
ಇನ್ನೂ ಕೆಲವರು “ಫೇಕ್ ಅಂದ್ರೇ ಅದು ಅಶ್ವಿನಿ ಗೌಡ” ಎಂದು ರಕ್ಷಿತಾ ಪರ ನಿಂತರು.
ಕಳೆದ ಕೆಲವು ವಾರಗಳಿಂದ ಅಶ್ವಿನಿ, ರಾಶಿಕಾ, ಜಾನ್ವಿ ಮತ್ತು ಸುಧಿ ಈ ನಾಲ್ವರೂ ನಿರಂತರವಾಗಿ ರಕ್ಷಿತಾ ವಿರುದ್ಧ ಟಾರ್ಗೆಟ್ ಮಾಡಿದ್ದಾರೆ. ಕೆಲವೊಮ್ಮೆ ಅವಳ ಮೇಲೆ “ಮೂಗು ತೋರಿಸುತ್ತಾರೆ” ಎಂಬ ಆರೋಪ ಬಂದಿದ್ದರೂ, ರಕ್ಷಿತಾ ಅದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದರು. ಒಮ್ಮೆ, ‘ಚಿಕ್ಕ ಹುಡುಗಿ’ ಎಂದು ಹೇಳಿ ಕೆಲವರು ಬಳಸಿದ ಪದಗಳು ಟೆಲಿಕಾಸ್ಟ್‌ಗೂ ಯೋಗ್ಯವಾಗಿರಲಿಲ್ಲ. ಆದರೂ ರಕ್ಷಿತಾ ಕುಗ್ಗದೆ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿ ತಮ್ಮ ಸ್ಥೈರ್ಯ ತೋರಿಸಿದರು.
ರಕ್ಷಿತಾ ಶೆಟ್ಟಿ ಯಾವ ಡಬಲ್ ಗೇಮ್ ಆಡದೆ, ನೇರವಾಗಿ ಮಾತಾಡಿ, ಮನೆಯಿಂದ ಹೊರಗಿನ ವೀಕ್ಷಕರ ಹೃದಯದಲ್ಲೂ ನೆಲೆಯೂರಿದ್ದಾರೆ. ಕಿಚ್ಚ ಸುದೀಪ್ ಕೂಡ ಕಳೆದ ವೀಕೆಂಡ್‌ನಲ್ಲಿ ಅವರ ನಡವಳಿಕೆಯನ್ನು ಮೆಚ್ಚಿಕೊಂಡು, “ನಿನ್ನ ನೇರತೆ ನಿನ್ನ ಶಕ್ತಿ” ಎಂದು ಶ್ಲಾಘಿಸಿದ್ದರು.
