BBK 12: ಗಿಲ್ಲಿ-ಕಾವ್ಯ ಸ್ನೇಹದಲ್ಲಿ ಬಿರುಕು; ಬಿಗ್‌ಬಾಸ್ ಮನೆಯಲ್ಲಿ ಹೊಸ ಡ್ರಾಮಾ!

Untitled design 2025 11 13T174919.104

ಬಿಗ್‌ಬಾಸ್ ಸೀಸನ್ 12 ಆರಂಭವಾದ ದಿನದಿಂದಲೇ ಗಿಲ್ಲಿ ಮತ್ತು ಕಾವ್ಯ ಸ್ನೇಹವೇ ಮನೆಯಲ್ಲಿ ಚರ್ಚೆಯ ವಿಷಯವಾಗಿತ್ತು. ಇವರು ಇಬ್ಬರೂ ಒಂದೇ ತಂಡದವರಂತೆ ಇದ್ದು, ಪರಸ್ಪರ ಬೆಂಬಲಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಇವರಿಬ್ಬರ ನಡುವೆ ಅಸಮಾಧಾನ ಮೂಡಿದ್ದು, ಈ ಸ್ನೇಹ ಈಗ ಮುರಿಯುವ ಹಂತಕ್ಕೇರಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.

ಗಿಲ್ಲಿ–ಕಾವ್ಯ ಸ್ನೇಹವನ್ನು ಹಲವು ಸ್ಪರ್ಧಿಗಳು ಅರ್ಥ ಮಾಡಿಕೊಳ್ಳದೆ ತಮ್ಮದೇ ಆದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು “ಗಿಲ್ಲಿ ಕಾವ್ಯನ ಹತ್ತಿರ ಇರೋದನ್ನ ಅಡ್ವಾಂಟೇಜ್ ಆಗಿ ಉಪಯೋಗಿಸುತ್ತಾನೆ” ಎಂದು ದೂರಿದ್ದಾರೆ. ಮತ್ತೊಂದೆಡೆ “ಕಾವ್ಯ ಗಿಲ್ಲಿಯ ಬೆಂಬಲದಿಂದಲೇ ಶೋನಲ್ಲಿ ಉಳಿದಿದ್ದಾರೆ” ಎನ್ನುವ ಆರೋಪವೂ ಕೇಳಿಬಂದಿದೆ.

ಕಳೆದ ವಾರ ಚಂದ್ರಪ್ರಭ ಹೇಳಿದ ಮಾತು “ನನ್ನ ತಂಗಿ ಕಾವ್ಯ ಲವ್ ಅನ್ನೋ ಹೆಸರಿನಲ್ಲಿ ದಾರಿ ತಪ್ಪುತ್ತಿದ್ದಾಳಾ?”  ಬಿಗ್‌ಬಾಸ್ ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. ಈ ಹೇಳಿಕೆ ಕಾವ್ಯನ ಮನಸ್ಸಿಗೆ ನೋವು ತಂದಿತ್ತು. ಅವಳಿಗಿದು ಕೇವಲ ಸ್ನೇಹ ಮಾತ್ರವಾಗಿದ್ದರೂ, ಮನೆಯೊಳಗಿನವರು ಬೇರೆ ರೀತಿಯಲ್ಲಿ ನೋಡುತ್ತಿರುವುದು ಅವಳಿಗೆ ಅಸಹ್ಯವಾಯಿತು.

ಈ ಹಿನ್ನೆಲೆಯಲ್ಲಿ ಕಾವ್ಯ ಗಿಲ್ಲಿಯೊಂದಿಗೆ ಗಂಭೀರವಾಗಿ ಮಾತನಾಡಿ, “ಇನ್ಮೇಲೆ ಎಲ್ಲರೂ ಗಿಲ್ಲಿ-ಕಾವ್ಯ ಅಂತ ಜೋಡಿಯಾಗಿ ಹೇಳೋದನ್ನ ಕೇಳಲು ನನಗೆ ಆಗೋದಿಲ್ಲ. ದಯವಿಟ್ಟು ನನ್ನನ್ನು ಯಾವುದೇ ಕಾರಣಕ್ಕೂ ರೇಗಿಸಬೇಡ” ಎಂದು ವಿನಂತಿಸಿಕೊಂಡಳು.

ಗಿಲ್ಲಿಯ ತೀರ್ಮಾನ: ಮಾತೇ ಆಡಲ್ಲ!

ಗಿಲ್ಲಿ ಕಾವ್ಯನ ಮಾತನ್ನು ಕೇಳಿದರೂ, ತಮ್ಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. “ನಿನ್ನನ್ನು ರೇಗಿಸಬಾರದು ಅಂದ್ರೆ ನಾನು ಮಾತೇ ಆಡಲ್ಲ. ನಾನು ನನ್ನ ಮಾತಿಗೆ ಬದ್ಧ” ಎಂದ ಅವರು, ನಿಜಕ್ಕೂ ಕಾವ್ಯ ಜೊತೆ ಮಾತುಕತೆ ನಿಲ್ಲಿಸಿದರು.

ಬಿಗ್‌ಬಾಸ್ ಮನೆಯಲ್ಲಿ  ಪ್ರತಿ ದಿನ ಮಾತು, ನಗುವು, ಆಟಗಳಲ್ಲಿ ಒಂದಾಗಿ ಕಾಣುತ್ತಿದ್ದ ಈ ಇಬ್ಬರು ಈಗ ದೂರವಾಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಕಾವ್ಯ, ಗಿಲ್ಲಿಯ ಈ ನಿರ್ಧಾರದಿಂದ ಬೇಸರಗೊಂಡು, “ನಾನು ಹೀಗೇ ಮೂರನೆಯವಳಾಗಿ ಇದ್ದು ಬಿಡ್ತೀನಿ” ಎಂದು ಎದ್ದು ಹೊರಟಳು.

ಈ ಘಟನೆಯ ನಂತರ ಮನೆಯೊಳಗಿನ ವಾತಾವರಣ ಸಂಪೂರ್ಣ ಬದಲಾಗಿದೆ. ಕೆಲವರು ಕಾವ್ಯನ ಪರ ನಿಂತರೆ, ಇನ್ನು ಕೆಲವರು ಗಿಲ್ಲಿಯ ನಿರ್ಧಾರವನ್ನು ಸಮರ್ಥಿಸುತ್ತಿದ್ದಾರೆ. ಗಿಲ್ಲಿ ಎಂದಿಗೂ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹೇಳುವ ವ್ಯಕ್ತಿ. ಆದರೆ ಈ ಬಾರಿ ಅವರು ಮೌನವಾಗಿರುವುದು ಎಲ್ಲರಿಗೂ ಅಚ್ಚರಿಯಾಗಿದೆ.

ಬಿಗ್‌ಬಾಸ್ ಮನೆಯಲ್ಲಿ ಎಲ್ಲವೂ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ನಿನ್ನೆ ವೈರಿಯಾಗಿದ್ದವರು ಇಂದು ಗೆಳೆಯರಾಗಬಹುದು. ಅದೇ ರೀತಿ ಇಂದು ಮೌನವಾಗಿರುವವರು ನಾಳೆ ಒಂದಾಗಿ ನಗಬಹುದು. ಹೀಗಾಗಿ ಗಿಲ್ಲಿ–ಕಾವ್ಯ ಸ್ನೇಹಕ್ಕೆ ಅಂತ್ಯವಾಯಿತೇ, ಅಥವಾ ಇವರು ತಮ್ಮ ತಪ್ಪುಅರ್ಥಗಳನ್ನು ಬಗೆಹರಿಸಿಕೊಂಡು ಮತ್ತೆ ಒಟ್ಟಾಗುತ್ತಾರೆಯೇ ಎಂಬುದನ್ನು ಮುಂದಿನ ಎಪಿಸೋಡ್‌ಗಳು ಮಾತ್ರ ಹೇಳಬಹುದು.

Exit mobile version