ಮಾಜಿ ಪ್ರೇಯಸಿಗೆ ಬರ್ತ್ ಡೇ ವಿಶ್‌ ಮಾಡಿ, ಹಳೆಯ ನೆನಪು ಹಂಚಿಕೊಂಡ ಕಿಶನ್ ಬಿಳಗಲಿ!

Untitled design 2025 11 24T222110.586

ಡ್ಯಾನ್ಸರ್ ಹಾಗೂ ನಟನಾಗಿ ಕನ್ನಡಿಗರ ಮನಸೆಳೆದ ಚಿಕ್ಕಮಗಳೂರು ಮೂಲದ ಕಿಶನ್ ಬಿಳಗಲಿ, ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಮಾಜಿ ಗರ್ಲ್ ಫ್ರೆಂಡ್‌ನ ಹಳೆಯ ಫೋಟೋ ಹಂಚಿಕೊಂಡ ಕಿಶನ್, ಆಕೆಗೆ ಹೃದಯಭರಿತವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ಹಿಂದಿ ರಿಯಾಲಿಟಿ ಶೋಗಳಲ್ಲಿಯೂ ಗಮನ ಸೆಳೆದ ಕಿಶನ್ ಬಿಳಗಲಿ, ‘ಬಿಗ್ ಬಾಸ್‌ ಮೂಲಕ ಕರ್ನಾಟಕದ ಪ್ರೇಕ್ಷಕರ ಜನಪ್ರಿಯತೆ ಗಳಿಸಿದ್ದರು. ಆದರೆ ಕಿಶನ್, ಈ ಬಾರಿ ಮಾಜಿ ಪ್ರೇಯಸಿಗೆ ಶುಭಾಶಯ ತಿಳಿಸಿರುವ ರೀತಿಯೇ ಅಭಿಮಾನಿಗಳ ಹೃದಯ ಗೆದ್ದಿದೆ.

ಮಾಜಿ ಪ್ರೇಯಸಿಯ ಫೋಟೋ ವೈರಲ್

ಕಿಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಗಳು ಸದ್ಯ ವೈರಲ್ ಆಗಿವೆ. ಕಿಶನ್‌ ಅವರು ತಮ್ಮ ಮಾಜಿ ಗರ್ಲ್ ಫ್ರೆಂಡ್‌ನ ಫೋಟೋ ಶೇರ್ ಮಾಡಿದ್ದು, ಆಕೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿಯೂ ಆಕೆ ಮುಖ ಪೂರ್ಣವಾಗಿ ಕಾಣದಿದ್ದರೂ, ಅದನ್ನು ವಿಶೇಷವಾಗಿ ಹಂಚಿಕೊಂಡಿದ್ದಾರೆ.

ಕಿಶನ್ ಬರೆದ ಮನಸಿನ ಮಾತು

ಮಾಜಿ ಪ್ರೇಯಸಿಗೆ ವಿಶೇಷವಾಗಿ ಸಂದೇಶ ಬರೆದಿದ್ದಾರೆ.

“ಪ್ರತಿಯೊಂದು ಪ್ರೇಮಕಥೆಯೂ ಸುಖಾಂತ್ಯವಾಗಬೇಕಾಗಿಲ್ಲ. ಪ್ರತಿ ಬ್ರೇಕಪ್ ದ್ವೇಷವಾಗಿ ಬದಲಾಗಬೇಕಾಗಿಲ್ಲ. ನನ್ನದು ನನ್ನ ಜೀವನವನ್ನು ಬದಲಾಯಿಸಿತು. ಹುಟ್ಟುಹಬ್ಬದ ಶುಭಾಶಯಗಳು ಪ್ರಿನ್ಸೆಸ್. ನನ್ನ ಕಠಿಣ ಪರಿಸ್ಥಿತಿಯಲ್ಲಿದ್ದಾಗ ನನ್ನ ಜೊತೆ ನಿಂತಿದ್ದಕ್ಕೆ ಧನ್ಯವಾದಗಳು. ನಿನ್ನ ನೆನಪುಗಳು ನನ್ನ ದೊಡ್ಡ ನಿಧಿ. ಇದು ಹೇಳಲಾಗದ ಕಥೆ… ‘ಮಿಸ್ ಇಂಡಿಪೆಂಡೆಂಟ್’.”

 ಮಾಜಿ ಗೆಳತಿಯನ್ನು ಸ್ಮರಿಸಿರುವ ಕಿಶನ್ ನಡೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬ್ರೇಕ್‌ಅಪ್ ನಂತರವೂ ಗೌರವ ಕಳೆದುಕೊಳ್ಳದೇ, ಆಕೆಯ ಬೆಂಬಲವನ್ನು ನೆನಪಿಸಿಕೊಂಡಿರುವುದು ಕಿಶನ್ ವ್ಯಕ್ತಿತ್ವವನ್ನು ಅಭಿಮಾನಿಗಳು ಪ್ರಶಂಸಿಸಿದ್ದಾರೆ.

ಫ್ಯಾನ್ಸ್ ಮೆಚ್ಚುಗೆ

ಬ್ರೇಕ್‌ಅಪ್ ಆದ ಬಳಿಕ ಗೆಳತಿಯನ್ನು ನಿಂದಿಸುವುದು ಸಾಮಾನ್ಯವಾಗಿರುವ ಜಗತ್ತಿನಲ್ಲಿ, ಕಿಶನ್ ತಮ್ಮ ಹಿಂದಿನ ಸಂಬಂಧವನ್ನು ಗೌರವದಿಂದ ನೆನೆದು, ಶುಭ ಕೋರಿರುವುದು “ಕ್ಲಾಸ್ ಆಕ್ಟ್” ಎಂದು ಕಾಮೆಂಟ್ ಮಾಡುವವರೇ ಹೆಚ್ಚು. “ನಿಮ್ಮ ಮೃದು ಹೃದಯಕ್ಕೆ ಸಲಾಮ್”, “ರಿಲೇಷನ್‌ಶಿಪ್‌ಗೂ, ಬ್ರೇಕ್‌ಅಪ್‌ಗೂ ಸಂಸ್ಕೃತಿ ಬೇಕು… ನೀವದು ತೋರಿಸಿದ್ದೀರಿ” ಎಂದು ನೆಟ್ಟಿಗರು ಹೊಗಳಿದ್ದಾರೆ.

Exit mobile version