ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಪ್ರತಿ ವಾರ ಹೊಸ ಡ್ರಾಮಾ, ಭಾವನೆ, ವಿವಾದಗಳು ಮನೆ ಮಾಡುತ್ತಿವೆ. ಈ ವಾರದ ವೀಕೆಂಡ್ ಪಂಚಾಯಿತಿ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಪಾಠ ಹೇಳಿಕೊಟ್ಟರು. ಈ ಬಾರಿ ಅವರ ಟಾರ್ಗೆಟ್ ಚಂದ್ರಪ್ರಭ ಮತ್ತು ಅಶ್ವಿನಿ ಗೌಡ. ವಿಶೇಷವಾಗಿ ಕಾವ್ಯ ಶೈವ ಮತ್ತು ಗಿಲ್ಲಿ ನಟರ ಸ್ನೇಹದ ಬಗ್ಗೆ ಚಂದ್ರಪ್ರಭ ನೀಡಿದ ಹೇಳಿಕೆ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಯಿತು.
ಮಸಿ ಬಳಿಯುವ ಟಾಸ್ಕ್‌ನ ಸಮಯದಲ್ಲಿ ಚಂದ್ರಪ್ರಭ ಅವರು, ಕಾವ್ಯ ಮತ್ತು ಗಿಲ್ಲಿಯ ಸ್ನೇಹದ ಬಗ್ಗೆ ಟೀಕೆ ಮಾಡಿದರು. “ಎಲ್ಲ ವಿಚಾರದಲ್ಲಿಯೂ ನನ್ನ ತಂಗಿ ಕಾವ್ಯ ಶೈವ ಕರೆಕ್ಟ್ ಆಗಿ ಹೋಗ್ತಿದ್ದಾಳೆ ಅಂತ ಅಂದುಕೊಂಡಿದ್ದೆ. ಆದರೆ ಎಲ್ಲಿ ಹಂಸ್ ಗುಂಡಿ ಸಿಗ್ತಿದ್ದೇಯೋ ಅಲ್ಲಿ ಕರೆಕ್ಟ್ ಆಗಿ ಹೋಗ್ತಿದ್ದಾಳೆಅಂತ ಅಂದುಕೊಂಡಿದ್ದೆ. ಒಳ್ಳೆಯ ದಾರಿಯಲ್ಲಿ ಹೋಗ್ತಿದ್ದವಳಿಗೆ ಗಾಡಿ ಓಡಿಸ್ಕೊಂಡು ಬರೋನು ಚೋಕ್ ಕೊಟ್ಟ ಅಂತ, ಅವಳು ದಾರಿ ತಪ್ಪಿದಳು ಎಂದು ಅನಿಸುತ್ತಿದೆ,” ಎಂದು ಮಾತನಾಡಿದ್ದರು. ಈ ಮಾತು ಕೇಳಿದ ನಂತರ ಕಾವ್ಯ ಶೈವ ಅವರಿಗೆ ನೋವಾಗಿತ್ತು.
ಕಿಚ್ಚ ಸುದೀಪ್‌ನಿಂದ ಕಠಿಣ ಎಚ್ಚರಿಕೆ
ಈ ಘಟನೆ ಬಗ್ಗೆ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಚಂದ್ರಪ್ರಭ ಅವರನ್ನು ಪ್ರಶ್ನಿಸಿದರು. ರಿಷಾ ಅವರೊಂದಿಗೆ ಚಂದ್ರಪ್ರಭ ಮಾತನಾಡುತ್ತಿದ್ದ ವಿಡಿಯೋವನ್ನೂ ಪ್ಲೇ ಮಾಡಿಸಿ ಎಲ್ಲರ ಮುಂದೆ ತೋರಿಸಿದರು. ನಂತರ ಸುದೀಪ್ ಅವರು, “ನಿಮ್ಮ ಅಭಿಪ್ರಾಯಕ್ಕೆ ಗೌರವ ಇದೆ. ಆದರೆ ಮನುಷ್ಯನಿಗೆ ನಡೆ-ನುಡಿ ತುಂಬಾ ಮುಖ್ಯ. ನಿಮ್ಮ ನಡೆ ಹೇಗಿದೆಯೋ ಹಾಗೆಯೇ ನುಡಿಯಲ್ಲಿಯೂ ಇರಬೇಕು. ತಂಗಿ ಎಂದು ಕರೆಯುವವರು ಈ ರೀತಿಯ ವಿಚಾರಗಳನ್ನು ಎಲ್ಲರ ಮುಂದೆ ಅಲ್ಲ, ವೈಯಕ್ತಿಕವಾಗಿ ಹೇಳಬೇಕು.” ಎಂದು ಹೇಳಿದರು.
ಈ ಮಾತುಗಳ ನಂತರ ಚಂದ್ರಪ್ರಭ ಅವರು ತಮ್ಮ ಮಾತುಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು. ಸುದೀಪ್ ಅವರ ಕಠಿಣ ಬೋಧನೆ ಚಂದ್ರಪ್ರಭ ಮಾತ್ರವಲ್ಲ, ಇತರೆ ಸ್ಪರ್ಧಿಗಳಿಗೂ ಪಾಠವಾಯಿತು.
ಬೇಸರ ಹೊರಹಾಕಿದ ಕಾವ್ಯ ಶೈವ
ಚಂದ್ರಪ್ರಭ ಅವರ ಕಾಮೆಂಟ್‌ನ ನಂತರ ಕಾವ್ಯ ಕೂಡಾ ಮನದಾಳದ ಬೇಸರವನ್ನು ಹೊರಹಾಕಿದರು. ಅವರು, “ನಾನು ಗಿಲ್ಲಿಗೆ ರಾಖಿ ಕಟ್ಟಿ ಅಣ್ಣಾ ಅಂತ ಕರೆದಿದ್ದೀನಿ. ನಮ್ಮಿಬ್ಬರ ನಡುವೆ ಲವ್ ಅನ್ನೋದು ಇಲ್ಲ. ನೀವು ಈ ರೀತಿ ಹೇಳಿದ್ದು ನನ್ನ ಹೆಸರಿಗೂ ಮಸಿ ಬಳಿದಂತಾಗಿದೆ. ನಿಮಗೆ ನಿಜ ಗೊತ್ತಿದ್ದರೂ ಈ ರೀತಿ ಟ್ಯಾಗ್ ಕೊಟ್ಟದ್ದು ಬೇಸರ ತಂದಿದೆ.” ಎಂದು ಹೇಳಿದರು.
ಈ ಮಾತು ಕೇಳಿದ ನಂತರ ಎಲ್ಲಾ ಸ್ಪರ್ಧಿಗಳು ಸಹ ಕಾವ್ಯಗೆ ಸಪೋರ್ಟ್ ನೀಡಿದರು. ಕಾವ್ಯ–ಗಿಲ್ಲಿಯ ಬಾಂಧವ್ಯ ಪ್ರೇಮವಲ್ಲ, ಸ್ನೇಹ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ಹೊಸ ವಿವಾದಗಳು ಹುಟ್ಟುತ್ತಲೇ ಇವೆ, ಆದರೆ ಈ ಬಾರಿ ಸುದೀಪ್ ಅವರ ಖಡಕ್ ಕ್ಲಾಸ್ ಸ್ಪಷ್ಟ ಸಂದೇಶ ನೀಡಿದೆ. “ವ್ಯಕ್ತಿತ್ವವನ್ನು ತೋರಿಸುವುದು ನಿಮ್ಮ ನಡೆ–ನುಡಿಯಿಂದ, ಅರೆನಾಲ್ಕು ಮಾತಿನಿಂದಲ್ಲ.” ಎಂದು ಕಿಚ್ಚ ಸುದೀಪ್ ಈ ವಾರದ ಎಪಿಸೋಡ್‌ನಲ್ಲಿ ಮಾತನಾಡಿದ್ದಾರೆ.
