ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ರೊಮಾಂಚನದ ತಿರುವುಗಳು ತುಂಬಿವೆ. ಮನೆಯ ಒಳಗೆ ನಡೆಯುತ್ತಿರುವ ಘಟನೆಗಳು ಪ್ರೇಕ್ಷಕರ ಮನಸ್ಸನ್ನೂ ತಟ್ಟಿವೆ. ವಿಶೇಷವಾಗಿ ರಕ್ಷಿತಾ ಮತ್ತು ರಾಶಿಕಾ ನಡುವಿನ ಪ್ರತಿಸ್ಪರ್ಧೆ ಈಗ ಹೊಸ ತಿರುವು ಪಡೆದುಕೊಂಡಿದೆ. ರಕ್ಷಿತಾ ಹಾಗೂ ರಾಶಿಕಾ ಇಬ್ಬರೂ ನಾಮಿನೇಷನ್‌ಗೆ ಸಿಲುಕಿದ್ದು, ಇವರಲ್ಲಿ ಒಬ್ಬರು ಔಟ್ ಆಗುವುದು ಗ್ಯಾರಂಟಿ. ಈ ವಾರದ ಪ್ರಮುಖ ಪ್ರಶ್ನೆ “ಯಾರು ಸೇಫ್? ರಕ್ಷಿತಾ ಅಥವಾ ರಾಶಿಕಾ?” ಎಂಬುದಾಗಿದೆ.
ಈ ವಾರ ಬಿಗ್‌ಬಾಸ್ ಮನೆಗೆ ಹೊಸ ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದಿದ್ದು, ಯಾರಿಗೆ ಮನೆಯವರ ಪತ್ರ ಸಿಗಬೇಕು ಎಂಬ ನಿರ್ಧಾರವನ್ನು ಮನೆ ಸದಸ್ಯರ ಕೈಗೆ ಬಿಟ್ಟಿದ್ದಾರೆ. ಅಂದರೆ ಈ ಬಾರಿ ಪ್ರೇಕ್ಷಕರು ಅಲ್ಲ, ಮನೆಯವರೇ ಯಾರನ್ನು ಸೇಫ್ ಮಾಡಬೇಕೆಂದು ತೀರ್ಮಾನಿಸಬೇಕಾಗಿದೆ.
ಅದರಿಂದ ಮನೆಯಲ್ಲಿ ಒತ್ತಡ ಹೆಚ್ಚಾಗಿದೆ. ಧ್ರುವಂತ್, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಹಾಗೂ ರಿಷಾ ಅವರು ರಾಶಿಕಾ ಪರವಾಗಿ ನಿಂತಿದ್ದಾರೆ. ಅವರು ಹೇಳುವ ಪ್ರಕಾರ ರಾಶಿಕಾ ಸತತವಾಗಿ ಆಟದಲ್ಲಿ ನೆಟ್ಟಗೆ ಆಡುತ್ತಾಳೆ. ಆಕೆ ಮನೆಯಲ್ಲಿ ಹೃದಯದ ಮಾತು ಆಡುತ್ತಾಳೆ ಎಂದು ಪ್ರಶಂಸಿಸಿದ್ದಾರೆ. ಇನ್ನು ಉಳಿದ ಕೆಲವರು ರಕ್ಷಿತಾ ಪರ ನಿಂತು, ಆಕೆ ನೇರವಾಗಿಯೂ ಸತ್ಯವನ್ನು ಹೇಳುವ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ನಾಲ್ವರು ಸ್ಪರ್ಧಿಗಳು ಒಮ್ಮತಕ್ಕೆ ಬರದೇ, ಇಬ್ಬರಿಗೂ ಪತ್ರ ಸಿಗದಿದ್ದರೂ ಪರವಾಗಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದಾರೆ.
ಈ ಸಮಯದಲ್ಲಿ ಅಶ್ವಿನಿ ಗೌಡ ರಕ್ಷಿತಾ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. “ಮನೆಯಲ್ಲಿ ಮನಸ್ಸುಗಳು ಮತ್ತು ಸಂಬಂಧಗಳು ಹಾಳಾಗುವುದಕ್ಕೆ ಮೂಲ ಕಾರಣ ರಕ್ಷಿತಾ” ಎಂದು ಅಶ್ವಿನಿ ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ “ತಮ್ಮ ವ್ಯಕ್ತಿತ್ವವನ್ನು ತಿರುಚಿ ತೋರಿಸಲು ಪ್ರಯತ್ನಿಸಿದ ರಕ್ಷಿತಾಗೆ ಕ್ಷಮೆನೇ ಇಲ್ಲ” ಎಂದು ಹೇಳಿದ್ದಾರೆ.
ಇನ್ನೊಂದು ಕಡೆ, ರಕ್ಷಿತಾ ತಮ್ಮ ಮೇಲೆ ನಡೆದ ಆರೋಪಗಳಿಗೆ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದು, “ನಾನು ಯಾರನ್ನೂ ತಪ್ಪಾಗಿ ತೋರಿಸಲು ಪ್ರಯತ್ನಿಸಿಲ್ಲ. ನನ್ನ ನಿಜವಾದ ಮುಖವನ್ನು ಬಿಗ್‌ಬಾಸ್ ಪ್ರೇಕ್ಷಕರು ನೋಡುತ್ತಿದ್ದಾರೆ” ಎಂದಿದ್ದಾರೆ.
ಈ ವಾರದ ಆಟದಲ್ಲಿ ದೈಹಿಕ ಶಕ್ತಿ ಹೊರಬಂದಿಲ್ಲ, ಆದರೆ ಮನಸ್ಸಿನ ಆಳದ ಮಾತುಗಳು ಹೊರಹೊಮ್ಮಿವೆ. ರಕ್ಷಿತಾಗೆ ತನ್ನವರು ಯಾರು, ಕೆಡುಕು ಬಯಸುವವರು ಯಾರು ಎನ್ನುವುದು ಅರ್ಥವಾಗುತ್ತಿದೆ. ಮನೆಯವರು ರಾಶಿಕಾ ಪರ ಮತ ಹಾಕಿದರೆ ರಕ್ಷಿತಾ ಔಟ್ ಆಗಲಿದ್ದಾಳೆ. ಇನ್ನು ರಕ್ಷಿತಾ ಔಟ್ ಆಗೋದು ಗ್ಯಾರಂಟಿಯಾ? ಅಥವಾ ರಾಶಿಕಾ ಸೇಫ್ ಆಗಿ ಉಳಿಯುತ್ತಾಳೇ? ಮನೆಯವರ ಒಮ್ಮತದ ನಿರ್ಧಾರ ಏನು? ಯಾರ ಕೈಗೆ ಪತ್ರ ಸಿಗುತ್ತೆ? ಇವತ್ತಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
