Bigg Boss Kannada 12: ಈ ವಾರ ಐದು ಮಂದಿ ನಾಮಿನೇಟ್..ಯಾರ ಆಟಕ್ಕೆ ಬ್ರೇಕ್?

Untitled design 2025 12 31T123005.809

ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಇನ್ನು ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರತಿಯೊಬ್ಬ ಸ್ಪರ್ಧಿಯ ಆಟವೂ ನಿರ್ಣಾಯಕ ಹಂತಕ್ಕೆ ಬಂದಿದೆ. ಪ್ರೇಕ್ಷಕರ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ವಾರದ ನಾಮಿನೇಷನ್ ಪ್ರಕ್ರಿಯೆ ಮತ್ತಷ್ಟು ರೋಚಕತೆಯಿಂದ ತುಂಬಿದೆ..

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದೆ. ನಾಮಿನೇಷನ್ ಪಟ್ಟಿಯಲ್ಲಿ ಹೆಚ್ಚಿನ ಮಂದಿ ಇದ್ದ ಕಾರಣ, ಪ್ರೇಕ್ಷಕರಿಗೆ ಭಾರೀ ಆತಂಕ ಉಂಟಾಗಿತ್ತು. ಅಂತಿಮವಾಗಿ ಮಾಳು ನಿಪನಾಳ್ ಮತ್ತು ಸೂರಜ್ ಸಿಂಗ್ ಮನೆ ಬಿಟ್ಟು ಹೊರ ನಡೆದರು. ಈ ಡಬಲ್ ಶಾಕ್‌ನ ಬಳಿಕ ಈ ವಾರದ ನಾಮಿನೇಷನ್ ಕೂಡ ಎಲ್ಲರ ಗಮನ ಸೆಳೆದಿದೆ.

ಈ ವಾರ ಯಾರೆಲ್ಲಾ ನಾಮಿನೇಟ್?

ಈ ವಾರ ಮನೆಯ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆಯ ಬಳಿಕ ಐವರು ಸ್ಪರ್ಧಿಗಳು ಎಲಿಮಿನೇಷನ್ ಅಪಾಯ ಎದುರಿಸುತ್ತಿದ್ದಾರೆ.
ಈ ವಾರ ನಾಮಿನೇಟ್ ಆದವರು.

ಕಳೆದ ವಾರ ಅಂತಿಮ ಕ್ಷಣದವರೆಗೆ ಎಲಿಮಿನೇಷನ್ ಹಂತದಲ್ಲಿದ್ದ ಸ್ಪಂದನಾ ಸೋಮಣ್ಣ ಈ ವಾರವೂ ಮತ್ತೆ ನಾಮಿನೇಟ್ ಆಗಿದ್ದಾರೆ.

ಸ್ಪಂದನಾ ಸೋಮಣ್ಣ – ಸೇಫ್ ಆಗ್ತರಾ?

ಸ್ಪಂದನಾ ಪ್ರತೀ ವಾರ ನಾಮಿನೇಷನ್ ಪಟ್ಟಿಯಲ್ಲಿ ಇದ್ದರೂ, ಕೊನೆ ಕ್ಷಣದಲ್ಲಿ ಸೇಫ್ ಆಗುತ್ತಿರುವುದು ಈಗ ಟ್ರೆಂಡ್ ಆಗಿದೆ. ಕಳೆದ ವಾರವೂ ಅವರು ಎಲಿಮಿನೇಷನ್‌ನ ಕೊನೆ ಹಂತದವರೆಗೂ ಹೋಗಿದ್ದರು. ಆದರೆ ಅಂತಿಮವಾಗಿ ಸ್ಪಂದನಾ ಸೇಫ್ ಆದರು ಮತ್ತು ಮಾಳು ನಿಪನಾಳ್ ಹೊರನಡೆದರು. ಈ ವಾರವೂ ಸ್ಪಂದನಾ ಸೇಫ್ ಆಗುತ್ತಾರಾ? ಅಥವಾ ಈ ಬಾರಿ ಅವರ ಜರ್ನಿಗೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.

ಇತರ ಸ್ಪರ್ಧಿಗಳಿಗೂ ಅಪಾಯ?

ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಷ್ ಇವರಲ್ಲಿ ಯಾರೇ ಒಬ್ಬರು ಎಲಿಮಿನೇಟ್ ಆದರೂ ಅದು ಅಚ್ಚರಿಯೇ ಅಲ್ಲ. ಎಲ್ಲರೂ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿದ್ದು, ಗೇಮ್‌ನಲ್ಲೂ ಸಕ್ರಿಯರಾಗಿದ್ದಾರೆ. ಇದೇ ಕಾರಣಕ್ಕೆ ಈ ವಾರ ಮತ್ತೆ ಡಬಲ್ ಎಲಿಮಿನೇಷನ್ ಇರಬಹುದಾ? ಎಂಬ ಅನುಮಾನವೂ ಜೋರಾಗಿದೆ.

ಕ್ಯಾಪ್ಟನ್ ಗಿಲ್ಲಿ- ಸಂಪೂರ್ಣ ಸೇಫ್!

ಮನೆಯ ಕ್ಯಾಪ್ಟನ್ ಆಗಿರುವ ಕಾರಣ ಗಿಲ್ಲಿ ನಟ ಈ ವಾರ ಎಲಿಮಿನೇಷನ್‌ನಿಂದ ಸಂಪೂರ್ಣವಾಗಿ ಸೇಫ್ ಆಗಿದ್ದಾರೆ. ಜೊತೆಗೆ ಮುಂದಿನ ವಾರದ ಕ್ಯಾಪ್ಟನ್ಸಿ ರೇಸ್‌ಗೆ ನೇರ ಎಂಟ್ರಿ ಪಡೆಯುವ ಅರ್ಹತೆಯನ್ನೂ ಗಳಿಸಿದ್ದಾರೆ. ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ, ಅಶ್ವಿನಿ ಗೌಡ ಕೂಡ ಕ್ಯಾಪ್ಟನ್ಸಿ ಓಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ವಿನ್ನರ್ ರೇಸ್ ಯಾರಿಗೆ?

ಫಿನಾಲೆಗೆ ಇನ್ನು 20 ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ವಿನ್ನರ್ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರಿಗೆ ಸದ್ಯ ಭಾರೀ ಜನಪ್ರಿಯತೆ ಸಿಕ್ಕಿದ್ದು, ಕಳೆದ ವಾರದ ಫ್ಯಾಮಿಲಿ ವೀಕ್ ನಂತರ ಅವರ ಬೆಂಬಲ ಇನ್ನಷ್ಟು ಹೆಚ್ಚಾಗಿದೆ.

ಇನ್ನು ಉಳಿದ ಸ್ಪರ್ಧಿಗಳೂ ಪೈಪೋಟಿಯಲ್ಲಿ ಹಿಂದೆ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಡ್ರಾಮಾ, ಟ್ವಿಸ್ಟ್‌ಗಳು ಮತ್ತು ಅಚ್ಚರಿಗಳು ಕಾದಿವೆ.

Exit mobile version