ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ತನ್ನ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಎರಡು ವಾರಗಳಲ್ಲೇ ಅದ್ಭುತ ಟ್ವಿಸ್ಟ್‌ಗಳು, ಟರ್ನ್‌ಗಳು ಮತ್ತು ಡ್ರಾಮಾ ನೀಡಿದ್ದರೆ, ಈಗ ಮೂರನೇ ವಾರದಲ್ಲಿ ಬಿಗ್ ಬಾಸ್ ಇನ್ನಷ್ಟು ರೋಚಕ ಟ್ವಿಸ್ಟ್ ಹೆಚ್ಚಿಸಿದೆ. ಈ ವಾರಾಂತ್ಯದಲ್ಲಿ ಸೀಸನ್‌ನ ಮೊದಲ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಅದಕ್ಕೆ ಮುನ್ನವೇ ಮಿಡ್-ವೀಕ್ ಎಲಿಮಿನೇಷನ್ ಎಂಬ ಬಾಂಬ್ ಬೀದ್ದಿದೆ. ಹೌದು, ಇಂದು ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಹೊರಹೋಗುತ್ತಾರೆ. ಈ ಶಾಕಿಂಗ್ ಘಟನೆಯನ್ನು ಪ್ರೋಮೋದಲ್ಲಿ ತೋರಿಸಲಾಗಿದ್ದು, ಬಿಗ್ ಬಾಸ್ ಮನೆಯಲ್ಲಿ ರಾತ್ರಿ 12 ಗಂಟೆಗೆ ಸೈರನ್ ಸೌಂಡ್ ಬಂದಿದ್ದು, ಎಲ್ಲರೂ ಎಬ್ಬಿಸಲಾಯಿತು.
ಮಧ್ಯರಾತ್ರಿ ಸೈರನ್ ಸೌಂಡ್
ಎಲ್ಲ ಸ್ಪರ್ಧಿಗಳೂ ಆಳವಾದ ನಿದ್ರೆಯಲ್ಲಿದ್ದಾಗ, ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಆಗಿ, ಭಯಾನಕ ಸೈರನ್ ಸೌಂಡ್ ಕೇಳಿಬಂದಿತ್ತು. ಒಂದೇ ಕ್ಷಣದಲ್ಲಿ ಎಲ್ಲರೂ ಎಬ್ಬಿಸಿ, ಹೊರಗಿನ ಗಾರ್ಡನ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಯಿತು. ಬಿಗ್ ಬಾಸ್‌ನ ಧ್ವನಿ ಕೇಳಿಸಿತ್ತು. “ಗ್ರ್ಯಾಂಡ್ ಫಿನಾಲೆಗೆ ಮುನ್ನವೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ. ಯಾರನ್ನು ಈ ಮನೆಯಿಂದ ಹೊರಹಾಕಲು ಇಚ್ಚಿಸುತ್ತೀರಿ? ಈಗಲೇ ಘೋಷಿಸಿ!” ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಿಗಳ ಮುಖದಲ್ಲಿ ಭಯ, ಆಶ್ಚರ್ಯ ಕಂಡುಬಂದಿತ್ತು.
ಪ್ರೋಮೋದಲ್ಲಿ ತೋರಿಸಿದಂತೆ, ಹೆಚ್ಚಿನರು ಡಾಗ್ ಸತೀಶ್, ರಕ್ಷಿತಾ ಶೆಟ್ಟಿ, ಸ್ಪಂದನಾ ಮತ್ತು ಜಾನ್ವಿ ಅವರ ಹೆಸರು ತೆಗೆದುಕೊಂಡಿದ್ದಾರೆ. ಆದರೆ ಮೂಲಗಳ ಪ್ರಕಾರ, ಮಂಜು ಭಾಷಿಣಿ ಮತ್ತು ಸತೀಶ್ ಡೊಡ್ಮನೆಯಿಂದ ಆಚೆ ಬಂದು, ಮಿಡ್-ವೀಕ್ ಎಲಿಮಿನೇಷನ್‌ನಲ್ಲಿ ಹೊರಹೋಗುತ್ತಾರೆ. ಈ ಮಾಹಿತಿ ಅಧಿಕೃತವಾಗಿ ಇಂದಿನ ಎಪಿಸೋಡ್‌ನಲ್ಲಿ ಬಹಿರಂಗವಾಗುತ್ತದೆ. ಸತೀಶ್‌ನ ಡಾಗ್ ಆಕ್ಟಿಂಗ್ ಮತ್ತು ಮಂಜು ಅವರ ಭಾಷಣ ಶೈಲಿ ಆಕರ್ಷಿಸಿದ್ದರೂ, ಈಗ ಅವರ ಆಟಕ್ಕೆ ತೆರೆ ಬಿಳಲಿದೆ.
ಸೀಸನ್ 12: ಮೊದಲ ಮೂರು ವಾರಗಳ ಟ್ವಿಸ್ಟ್‌ಗಳು
ಮೊದಲ ವಾರದಲ್ಲಿ 17 ಸ್ಪರ್ಧಿಗಳು ಮನೆಗೆ ಪ್ರವೇಶಿಸಿದರು. ರಕ್ಷಿತಾ ಶೆಟ್ಟಿ, ಸ್ಪಂದನಾ, ಜಾನ್ವಿ, ಸತೀಶ್, ಮಂಜು ಭಾಷಿಣಿ ಸೇರಿದಂತೆ ಮೊದಲಾದ ಸ್ಟಾರ್‌ಗಳು ಸೇರಿದ್ದರು. ಎರಡನೇ ವಾರದಲ್ಲಿ ಮೊದಲ ಎಲಿಮಿನೇಷನ್ ನಡೆಯಿತು, ಆದರೆ ಮೂರನೇ ವಾರದಲ್ಲಿ ಬಿಗ್ ಬಾಸ್ ಟ್ವಿಸ್ಟ್‌ಗಳನ್ನು ಹೆಚ್ಚಿಸಿದರು. ಡೊಡ್ಮನೆ ಟಾಸ್ಕ್‌ಗಳು, ಗ್ರೂಪ್ ಡಿವೈಡ್ ಮತ್ತು ಸೀಕ್ರೆಟ್ ಮಿಷನ್‌ಗಳು ಸ್ಪರ್ಧಿಗಳನ್ನು ಒತ್ತಡಕ್ಕೆ ಒಳಪಡಿಸಿದವು. ಈಗ ಮಿಡ್-ವೀಕ್ ಎಲಿಮಿನೇಷನ್ ಎಂಬ ಹೊಸ ಆಯಾಮವಾಗಿದೆ. ಇದರಿಂದಾಗಿ, ಫಿನಾಲೆಗೆ ಮುನ್ನ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಸದ್ಯ 17 ಜನ ಇದ್ದರೆ, ಇಂದು 15 ಆಗುತ್ತಾರೆ. ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಹೊರಹೋಗಬಹುದು.
ಯಾರು ಫೈನಲಿಸ್ಟ್‌ಗಳು?
ಗ್ರ್ಯಾಂಡ್ ಫಿನಾಲೆ ಅಕ್ಟೋಬರ್ 18 ಮತ್ತು 19 ರಂದು ನಡೆಯಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಮತ್ತು ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ತಮ್ಮ ಆಟದ ಗುಣಮಟ್ಟದಿಂದ ಮುಂದುಳಿದಿದ್ದಾರೆ. ರಕ್ಷಿತಾ ಶೆಟ್ಟಿ ಅವರ ನಾಯಕತ್ವ, ಸ್ಪಂದನಾ ಅವರ ಡ್ಯಾನ್ಸ್ ಸ್ಕಿಲ್ಸ್, ಜಾನ್ವಿ ಅವರ ಫನ್ ಸೈಡ್ ಮತ್ತು ಇತರರ ಡ್ರಾಮಾ ಇನ್ನೂ ಫೈನಲ್ ಸ್ಪಾಟ್‌ಗೆ ಸಾಧ್ಯತೆ ಹೊಂದಿದೆ. ಆದರೆ ಮಿಡ್-ವೀಕ್ ಔಟ್‌ನಿಂದಾಗಿ, ಇನ್ನೂ ಕೆಲವರು ಫೈನಲಿಸ್ಟ್ ಆಗುವ ಚಾನ್ಸ್ ಕಳೆದುಕೊಳ್ಳಬಹುದು..