ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಮಿನಿ ಫಿನಾಲೆ ವಿನ್ನರ್‌ ಆದ ಕಾಕ್ರೋಚ್‌ ಸುಧಿ

Untitled design 2025 10 19t172701.646

ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಪೂರ್ಣ ವೇಗದಲ್ಲಿ ಸಾಗುತ್ತಿದೆ. ಪ್ರತಿ ವಾರವೂ ಅನಿರೀಕ್ಷಿತ ಟ್ವಿಸ್ಟ್‌ಗಳು, ಭಾವುಕ ಕ್ಷಣಗಳು ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅಭಿಷೇಕ್, ಅಶ್ವಿನಿ ಎಸ್, ಸ್ಪಂದನಾ ಸೋಮಣ್ಣ ಮತ್ತು ಮಂಜು ಭಾಷಿಣಿ ಡೇಂಜರ್ ಝೋನ್‌ನಲ್ಲಿ ಸಿಲುಕಿದ್ದರು. ವೀಕ್ಷಕರ ಮತದಾನದ ಆಧಾರದಲ್ಲಿ ಅಶ್ವಿನಿ ಎಸ್ ಮತ್ತು ಮಂಜು ಭಾಷಿಣಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಈ ಎಲಿಮಿನೇಷನ್ ಶೋನಲ್ಲಿ ಹೆಚ್ಚಿನ ಡ್ರಾಮಾ ಸೃಷ್ಟಿಸಿದೆ. ಏಕೆಂದರೆ ಇಬ್ಬರೂ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿ ವಲಯವನ್ನು ಹೊಂದಿದ್ದರು.

ಆದರೆ ಈ ಸೀಸನ್‌ನ ಹೈಲೈಟ್ ಎಂದರೆ ಮಿನಿ ಫಿನಾಲೆ! ಈ ಮಿನಿ ಫಿನಾಲೆಯಲ್ಲಿ ಅಶ್ವಿನಿ ಗೌಡ, ಮಾಳು ನಿಪನಾಳ, ಕಾಕ್ರೋಚ್ ಸುಧಿ ಹಾಗೂ ರಾಶಿಕಾ ಶೆಟ್ಟಿ ಫೈನಲಿಸ್ಟ್‌ಗಳಾಗಿ ಕಾಣಿಸಿಕೊಂಡಿದ್ದರು. ಮಿನಿ ಫಿನಾಲೆಗೆ ಮುನ್ನ ಬಿಗ್ ಬಾಸ್ ತಂಡ ಈ ನಾಲ್ವರಿಗೂ ಒಂದು ಸೀಕ್ರೆಟ್ ಟಾಸ್ಕ್ ನೀಡಿತ್ತು. ಈ ಟಾಸ್ಕ್ ಅತ್ಯಂತ ಸವಾಲಿನದ್ದಾಗಿತ್ತು. ಮನೆಯೊಳಗಿನ ಸಹ ಸ್ಪರ್ಧಿಗಳಿಗೆ ತಿಳಿಯದಂತೆ ನಿರ್ದಿಷ್ಟ ಕಾರ್ಯಗಳನ್ನು ಪೂರ್ಣಗೊಳಿಸಬೇಕಿತ್ತು. ಕಾಕ್ರೋಚ್ ಸುಧಿ ಈ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಮಿನಿ ಫಿನಾಲೆ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಮಿನಿ ಫಿನಾಲೆ ವಿನ್ನರ್ ಆಗಿ ಸುಧಿಗೆ ಕಿಚ್ಚ ಸುದೀಪ್ ಅವರು ಒಂದು ಸೂಪರ್ ಪವರ್ ಘೋಷಿಸಿದ್ದಾರೆ. ಈ ಸೂಪರ್ ಪವರ್ ಪ್ರಕಾರ, ಸುಧಿ ಒಂದು ಬಾರಿಗೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ವತಃ ಇಮ್ಯೂನಿಟಿ ಪಡೆಯಬಹುದು ಅಥವಾ ಬೇರೊಬ್ಬ ಸ್ಪರ್ಧಿಯನ್ನು ರಕ್ಷಿಸಬಹುದು. ಇದು ಸುಧಿಯ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಅಂತಹ ಪವರ್‌ಗಳು ಹಲವು ಬಾರಿ ಗೇಮ್ ಚೇಂಜರ್ ಆಗಿವೆ. ಸುಧಿ ಈ ಪವರ್ ಅನ್ನು ಯಾವಾಗ, ಹೇಗೆ ಬಳಸುತ್ತಾರೆ ಎಂಬುದು ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಇದು ಅವರನ್ನು ಫೈನಲ್ ವರೆಗೂ ತಲುಪಿಸುವ ಸಾಧನವಾಗಬಹುದು ಅಥವಾ ತಂತ್ರಗಾರಿಕೆಯಲ್ಲಿ ಹೊಸ ಟ್ವಿಸ್ಟ್ ನೀಡಬಹುದು.

ಇನ್ನು ಶೋದಲ್ಲಿ ಮತ್ತೊಂದು ಆಸಕ್ತಿಕರ ಘಟನೆಯೆಂದರೆ ‘ಗಿಲ್ಲಿ’ ನಟನ ಪಾತ್ರ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದರು. ಅವರ ಮಾತುಗಳು ರಕ್ಷಿತಾಗೆ ಹರ್ಟ್ ಮಾಡುವಂತಿದ್ದವು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾದವು. ಆದರೆ ರಕ್ಷಿತಾ ಶೆಟ್ಟಿ ಧೈರ್ಯದಿಂದ ಎದುರಿಸಿದರು. “ನಾನು ಮಾಡಿದ್ದು ಸರಿ, ಯಾರಿಗೂ ತಲೆ ಬಾಗಲ್ಲ” ಎಂದು ಅವರು ಹೇಳಿ ಟಕ್ಕರ್ ಕೊಟ್ಟರು. ಈ ಸಂದರ್ಭದಲ್ಲಿ ಮನೆಯಲ್ಲಿ ಬೇರೆಯವರು ಸಪೋರ್ಟ್ ಮಾಡದಿದ್ದರೂ, ಗಿಲ್ಲಿ ನಟ ಬಿಟ್ರೆ ರಕ್ಷಿತಾ ಬೆಂಬಲಕ್ಕೆ ನಿಂತರು. ಇದಕ್ಕಾಗಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟನಿಗೆ ಚಪ್ಪಾಳೆ ತಟ್ಟಿದರು.

Exit mobile version