ಬಿಗ್ ಬಾಸ್ ಕನ್ನಡಕ್ಕೆ 37 ಕೋಟಿ ವೋಟ್ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿ ಸಂಗತಿ ರಿವೀಲ್

BeFunky collage 2026 01 17T180929.277

ಕನ್ನಡದ ಬಿಗ್ ಬಾಸ್ ಈ ಸೀಸನ್ 12 ಇತಿಹಾಸ ಸೃಷ್ಟಿಸಿದೆ. ಹೋಸ್ಟ್ ಕಿಚ್ಚ ಸುದೀಪ್ ಅವರು ಬಹಿರಂಗಪಡಿಸಿದಂತೆ, ನಿನ್ನೆ ಮಧ್ಯರಾತ್ರಿ 12 ಗಂಟೆಯವರೆಗೆ ವಿನ್ನರ್‌ಗೆ ಬಂದಿರುವ ಮತಗಳ ಸಂಖ್ಯೆ 37 ಕೋಟಿಗೂ ಅಧಿಕ, ಇದು ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಭರ್ಜರಿ ದಾಖಲೆಯಾಗಿದ್ದು, ಕಳೆದ ವರ್ಷದ ವಿನ್ನರ್‌ಗೆ ಬಂದಿದ್ದ 5 ಕೋಟಿ ಮತಗಳಿಗಿಂತ ತುಂಬಾ ಹೆಚ್ಚು.

ಕಿಚ್ಚ ಸುದೀಪ್ ಅವರು ತಮ್ಮ ಸ್ಪೆಷಲ್ ಎಪಿಸೋಡ್‌ನಲ್ಲಿ ಈ ಅಚ್ಚರಿಯ ಸಂಖ್ಯೆಯನ್ನು ರಿವೀಲ್ ಮಾಡಿದರು. ರಘು ಅವರು 12-13 ಕೋಟಿ ಎಂದು ಅಂದಾಜು ಮಾಡಿದ್ದರೆ, ಗಿಲ್ಲಿ 8-10 ಕೋಟಿ ಎಂದು ಹೇಳಿದ್ದರು. ಆದರೆ ಸುದೀಪ್ ಅವರು “37 ಕೋಟಿ ಪ್ಲಸ್” ಎಂದು ಹೇಳಿದಾಗ ಎಲ್ಲರೂ ದಂಗಾದರು.


ನೆಕ್ ಟು ನೆಕ್ ಫೈಟ್ ಅತಿ ಕಡಿಮೆ ಅಂತರ ಇನ್ನೊಂದು ಶಾಕಿಂಗ್ ರಿವೀಲ್. ಮೊದಲ ಸ್ಥಾನ ಮತ್ತು ಎರಡನೇ ಸ್ಥಾನದ ನಡುವೆ ಅತಿ ಕಡಿಮೆ ಮತಗಳ ಅಂತರ ಇದೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ. ಇದರಿಂದಾಗಿ ಫೈನಲ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಇನ್ನೂ ಸಸ್ಪೆನ್ಸ್‌ನಲ್ಲೇ ಇದೆ. ಫ್ಯಾನ್‌ಗಳ ಕ್ರೇಜ್ ನೋಡಿದರೆ, ಗಿಲ್ಲಿ ನಟ  ಮತ್ತು ಅಶ್ವಿನಿ ಗೌಡ ನಡುವೆ ಈ ಭರ್ಜರಿ ಫೈಟ್ ಇರಬಹುದು ಎಂಬ ಊಹಾಪೋಹಗಳಿವೆ. ಇಬ್ಬರೂ ಫೈನಲಿಸ್ಟ್‌ಗಳಾಗಿ ಭಲದಿಂದ ಸ್ಪರ್ಧಿಸುತ್ತಿದ್ದಾರೆ.

ಈ ಸೀಸನ್‌ನಲ್ಲಿ ಭಾರಿ ಡ್ರಾಮಾ, ಎಮೋಷನಲ್ ಮೂಮೆಂಟ್ಸ್ ಮತ್ತು ಫ್ಯಾನ್ ಎಂಗೇಜ್‌ಮೆಂಟ್ ಹೆಚ್ಚಾಗಿದ್ದರಿಂದ ವೋಟ್‌ಗಳ ಸಂಖ್ಯೆ ಇಷ್ಟೊಂದು ಏರಿಕೆಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಫೈನಲ್ ಎಪಿಸೋಡ್ ಶೀಘ್ರದಲ್ಲೇ ಬರಲಿದ್ದು, ಯಾರು ಟ್ರೋಫಿ ಮತ್ತು ಪ್ರೈಜ್ ಮನಿ ಗೆಲ್ಲುತ್ತಾರೋ ಕಾದು ನೋಡಬೇಕು.

Exit mobile version