BBK 12: ಬಿಗ್ ಬಾಸ್‌ನಲ್ಲಿ ಈ ವಾರ 9 ಜನ ನಾಮಿನೇಟ್; ಯಾರು ಸೇಫ್, ಯಾರು ಔಟ್?

Untitled design 2025 12 03T085351.005

ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ರೋಚಕತೆಯಿಂದ ಕೂಡಿದೆ. ಫೈನಲ್‌ಗೆ ಕೇವಲ ಕೆಲವೇ ವಾರಗಳು ಬಾಕಿ ಇರುವಾಗ ಸ್ಪರ್ಧಿಗಳ ನಡುವೆ ಪೈಪೋಟಿ, ಒಳಗುಟ್ಟು, ಆಟ ಎಲ್ಲವೂ ಜೋರಾಗಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಟ್ಟು 9 ಸ್ಪರ್ಧಿಗಳು ಡೇಂಜರ್ ಜೋನ್‌ಗೆ ಸೇರಿಕೊಂಡಿದ್ದಾರೆ. ಆ ಪಟ್ಟಿಯಲ್ಲಿ ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಇನ್ನೊಬ್ಬರು ಇದ್ದಾರೆ.

ಈ ಬಾರಿಯ ನಾಮಿನೇಷನ್ ಟ್ವಿಸ್ಟ್ ಬಹಳ ವಿಭಿನ್ನವಾಗಿತ್ತು. ಸ್ಪರ್ಧಿಗಳು ಚಾಕು ತೆಗೆದುಕೊಂಡು ಇತರರ ಬೆನ್ನಿನಲ್ಲಿರುವ ಬಾಕ್ಸ್‌ಗೆ ಚುಚ್ಚಬೇಕಿತ್ತು. ಯಾರ ಬಾಕ್ಸ್‌ನಲ್ಲಿ ಹೆಚ್ಚು ಚಾಕು ಸಿಕ್ಕೀತೋ ಅವರೇ ನಾಮಿನೇಟ್! ಕಡಿಮೆ ಚಾಕು ಬಿದ್ದವರು ಸೇಫ್.

ಧ್ರುವಂತ್ ಮೇಲೆ ದಾಳಿ: ಆಟದಲ್ಲಿ ಆಸಕ್ತಿ ಇಲ್ಲವೆಂದು ಆರೋಪ

ಈ ವಾರ ಗರಿಷ್ಠ ಚಾಕುಗಳನ್ನು ಪಡೆದು ಡೇಂಜರ್ ಲಿಸ್ಟ್‌ನಲ್ಲಿ ಟಾಪ್ ಸ್ಥಾನ ಪಡೆದಿದ್ದಾರೆ ಧ್ರುವಂತ್. ಸ್ಪಂದನಾ ಸೇರಿದಂತೆ ಬಹುತೇಕ ಸ್ಪರ್ಧಿಗಳು “ಧ್ರುವಂತ್ ಆಟದಲ್ಲಿ ಆಸಕ್ತಿ ತೋರಿಸುತ್ತಿಲ್ಲ, ತಾನೇ ಹೊರಗೆ ಹೋಗಲು ಸಿದ್ಧನಿದ್ದಾನೆ” ಎಂಬ ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ. ಧ್ರುವಂತ್ ಸ್ವತಃ ನಾಮಿನೇಷನ್ ನಂತರ ಅಶ್ವಿನಿ ಜೊತೆ ಮಾತನಾಡುತ್ತಾ “ನಾನು ಪ್ರತಿ ಬಾರಿ ಬ್ಯಾಗ್ ನೀಟಾಗಿ ಪ್ಯಾಕ್ ಮಾಡ್ತೀನಿ, ಆದರೂ ಸೇಫ್ ಆಗ್ತಿದ್ದೀನಿ, ಇದು ನನಗೂ ಅರ್ಥವಾಗ್ತಿಲ್ಲ” ಎಂದು ನಗುತ್ತಾ ಹೇಳಿದ್ದಾರೆ. ಈಗ “ಧ್ರುವಂತ್ ಈ ವಾರ ಹೊರಗೆ ಹೋಗಲಿ” ಎಂಬ ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ಗಳನ್ನೇ ಹರಿಸುತ್ತಿದ್ದಾರೆ.

ಗಿಲ್ಲಿ-ಕಾವ್ಯ ಫ್ರೆಂಡ್‌ಶಿಪ್ ಮತ್ತೆ ವಿವಾದಕ್ಕೆ

ಗಿಲ್ಲಿ ಮತ್ತು ಕಾವ್ಯಾ ಶೈವ ಈ ವಾರವೂ ನಾಮಿನೇಟ್ ಆಗಿದ್ದಾರೆ. ಇವರ ಫ್ರೆಂಡ್‌ಶಿಪ್ ಬಗ್ಗೆ ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ ಸೇರಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ಷಿತಾ ನೇರವಾಗಿ ಕಾವ್ಯಳ ವಿರುದ್ಧ ಆರೋಪ ಮಾಡಿ “ಕಾವ್ಯನೇ ಗಿಲ್ಲಿಗೆ ಬ್ರೇಕ್ ಹಾಕುತ್ತಿದ್ದಾಳೆ. ಇವಳ ಸ್ಟ್ರಾಟೆಜಿಯಿಂದಲೇ ಸೇವ್ ಆಗ್ತಿದ್ದಾಳೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಆ ಸ್ಟ್ರಾಟೆಜಿ ಏನೆಂದು ಸ್ಪಷ್ಟವಾಗಿ ಹೇಳಲಿಲ್ಲ. ರಾಶಿಕಾ ಕೂಡ ಗಿಲ್ಲಿ-ಕಾವ್ಯ ಜೋಡಿಯ ಬಗ್ಗೆ ತೀವ್ರವಾಗಿ ಮಾತನಾಡಿ, ಗಿಲ್ಲಿಯನ್ನು ನಾಮಿನೇಟ್ ಮಾಡಿದರು. ಆದರೆ ಗಿಲ್ಲಿ ಪ್ರತಿಕ್ರಿಯೆಯಾಗಿ “ನೀನು ಯಾವಾಗಲೂ ಸೂರಜ್ ಹೆಸರು ಎಳೆಯುತ್ತೀಯಾ” ಎಂದು ರಾಶಿಕಾಳನ್ನೇ ಟಾಂಗ್ ಕೊಟ್ಟು ಸೂರಜ್‌ಗೆ ಚಾಕು ಚುಚ್ಚಿಸಿದರು. ಇದರಿಂದ ಸೂರಜ್ ಸಿಂಗ್ ಕೂಡ ಡೇಂಜರ್ ಜೋನ್‌ಗೆ ಸೇರಿಕೊಂಡರು.

ಅಶ್ವಿನಿ ಗೌಡ ಮತ್ತು ರಘು ಈ ವಾರ ಸಂಪೂರ್ಣ ಸೈಲೆಂಟ್ ಆಗಿ ಆಡಿದ್ದಾರೆ. ಯಾವ ವಿವಾದಕ್ಕೂ ಇಳಿಯದೇ, ಯಾರ ಮೇಲೂ ದ್ವೇಷ ತೋರದೇ ಇದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರ ಬ್ಯಾಕ್‌ನಲ್ಲಿ ಚಾಕುಗಳೇ ಬಿದ್ದಿಲ್ಲ! ಸೇಫ್ ಆಗಿದ್ದಾರೆ.

ಒಟ್ಟಾರೆಯಾಗಿ ಈ ವಾರದ ನಾಮಿನೇಷನ್ ಮನೆಯ ಒಳಗಿನ ಗುಂಪುಗಳು, ದ್ವೇಷಗಳು, ತಂತ್ರಗಳನ್ನು ಪೂರ್ತಿ ಬಯಲು ಮಾಡಿದೆ. ಧ್ರುವಂತ್ ಎಲಿಮಿನೇಟ್ ಆಗುವ ಸಾಧ್ಯತೆ ಇದೆ. ಆದರೆ ಈ ಗೊಂದಲಕ್ಕೆ ತೆರೆ ಬೀಳಲು ವೀಕೆಂಡ್ ವರೆಗೂ ಕಾದು ನೋಡಬೇಕು.

Exit mobile version