BBK 12: “ನಿರ್ಧಾರ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ”..ರಕ್ಷಿತಾಗೆ ಮನೆಮಂದಿ ಕ್ಲಾಸ್!

Untitled design 2025 12 06T083351.968

ಬಿಗ್ ಬಾಸ್ ಕನ್ನಡ 12ರ ಈ ವಾರದ ಎಪಿಸೋಡ್‌ಗಳಲ್ಲಿ ರಕ್ಷಿತಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ನಾಮಿನೇಶನ್‌ನಿಂದ ಹಿಡಿದು ಬಿಗ್ ಬಾಸ್ ನೀಡಿದ ಟಾಸ್ಕ್‌ವರೆಗೂ, ಮಾಡಿದ ಪ್ರತಿಯೊಂದು ನಡೆ ಮನೆಯ ಸದಸ್ಯರು ಹಾಗೂ ವೀಕ್ಷಕರ ಗಮನ ಸೆಳೆದಿದೆ. ವಿ

ನಾಮಿನೇಶನ್‌ನಲ್ಲಿ ಹೈಡ್ರಾಮಾ – ಕಾವ್ಯ ವಿರುದ್ಧ ರಕ್ಷಿತಾ

ಈ ವಾರ ಕಾವ್ಯ ಶೈವ ಅವರನ್ನು ನಾಮಿನೇಟ್ ಮಾಡುವ ಸಂದರ್ಭದಲ್ಲಿ ರಕ್ಷಿತಾ ತೋರಿಸಿದ ವರ್ತನೆ ಮನೆಮಂದಿಯೂ, ವೀಕ್ಷಕರೂ ‘ಅತಿರೇಕ’ ಎಂದು ಕರೆಯುವಷ್ಟು ನಾಟಕೀಯವಾಗಿತ್ತು. ಸ್ಟ್ರಾಟೆಜಿಯೇ ತಿಳಿಯದೆ, ಕಾವ್ಯ ಅವರನ್ನು ನೇರವಾಗಿ ಡೇಂಜರ್ ಝೋನ್‌ಗೆ ತಳ್ಳಿದ ರಕ್ಷಿತಾ ನಡೆ ಮನೆಯಲ್ಲೆ ದೊಡ್ಡ ಚರ್ಚೆಗೆ ಕಾರಣವಾಯಿತು. ಮನೆಯಲ್ಲಿ ಕೆಲವು ಮಂದಿ, “ಇದು ತೋರಿಸುವುದಕ್ಕೆ ಮಾಡಿದ ನಾಟಕವೇ? ಅಥವಾ ರಕ್ಷಿತಾಳಿಗೆ ಸ್ಟ್ರಾಟೆಜಿ ಅರ್ಥವಾಗೋದಿಲ್ಲವೇ?” ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು.

ರಕ್ಷಿತಾಗೆ ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲ’

ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್‌ನಲ್ಲಿ, “ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅಯೋಗ್ಯ ಯಾರು?” ಎಂದು ಕೇಳಲಾಗಿತ್ತು. ಬಹುತೇಕ ಎಲ್ಲ ಸದಸ್ಯರೂ ರಕ್ಷಿತಾ ಶೆಟ್ಟಿ ಹೆಸರನ್ನು ಹೇಳಿದ್ದಾರೆ.

ಸ್ಪಂದನಾ: “ನನ್ನನ್ನು ನಾಮಿನೇಟ್ ಮಾಡಿದಾಗ ಕೊಟ್ಟ ಕಾರಣಕ್ಕೆ ಅರ್ಥವೇ ಇರಲಿಲ್ಲ.

ಅಭಿಷೇಕ್: “ರಕ್ಷಿತಾ ಪ್ಯಾನಿಕ್ ಆಗುತ್ತಾರೆ. ತಲೆಗೊಂದು ಬಂದರೇ ಕಾರಣ ಹೇಳಿಬಿಡುತ್ತಾರೆ.”

ಇದೆಲ್ಲವಕ್ಕೂ ಪ್ರತಿಕ್ರಿಯಿಸಿದ ರಕ್ಷಿತಾ, “ನನಗೆ ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೋ, ಆ ಕ್ಷಣಕ್ಕೆ ಯೋಚಿಸಿ ಹೇಳುತ್ತೇನೆ. ಅದನ್ನ ಇಟ್ಟುಕೊಂಡು ಕ್ಯಾರಿ ಮಾಡ್ತಾ ಹೋಗಲ್ಲ,” ಎಂದು ಹೇಳಿದರು.

ಕಾವ್ಯ ಕೂಡ ಈ ವೇಳೆ, “ಇದು ಚಿಕ್ಕ ಹುಡುಗಿಯಂತೆ ನಿರ್ಧಾರ ತೆಗೆದುಕೊಳ್ಳೋಕೆ ಆಗ್ತಿಲ್ಲ ಅಂತ ಹೇಳೋದೇ? ಅಥವಾ ಸ್ಮಾರ್ಟ್ ಅಂತ ಹೇಳೋದೇ?” ಎಂದು ಪ್ರಶ್ನೆ ಹಾಕಿದರು.

ಗಿಲ್ಲಿ ನಾಮಿನೇಶನ್ ವಿವಾದ

ನಿನ್ನೆಯ ಎಪಿಸೋಡ್‌ನಲ್ಲಿಯೂ ಚೈತ್ರಾ, ರಾಶಿಕಾ ಮತ್ತು ಸೂರಜ್ ರಕ್ಷಿತಾ ನಾಮಿನೇಷನ್ ಬಗ್ಗೆ ಮಾತನಾಡಿದರು.
ರಕ್ಷಿತಾ ಅವರು  “ನಾನು ನಾಮಿನೇಟ್ ಮಾಡಿದ್ದರಿಂದ, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಟಾರ್ಗೆಟ್ ಮಾಡ್ತೀನಿ ಅಂತಲ್ಲ. ಗಿಲ್ಲಿ ಅವರನ್ನು ನಾಮಿನೇಟ್ ಮಾಡಿದರೂ ಟಾಸ್ಕ್‌ನಲ್ಲಿ ಅವರಿಗೆ ಸಪೋರ್ಟ್ ಮಾಡ್ತೇನೆ.” ಎಂದು ಹೇಳಿದರು.

ರಕ್ಷಿತಾ ಹೇಳಿದ ಈ ಮಾತುಗಳಿಗೆ ಮನೆಯವರು ಸ್ಪಷ್ಟತೆ ಕಾಣಲಿಲ್ಲ. ಕೆಲವರಿಗೆ ಇದು “ಕಾನ್ಫ್ಯೂಸ್ಡ್ ಗೇಮ್‌ಪ್ಲೇ”, ಉಳಿದವರಿಗೆ “ಮತ್ತೊಂದು ಡ್ರಾಮಾ” ಎಂಬಂತೆ ತೋರುತ್ತಿತ್ತು.

ನಿಯಮ ಉಲ್ಲಂಘನೆ, ವ್ಯಂಗ್ಯ, ಜಗಳ

ಈ ವಾರ ರಕ್ಷಿತಾ ತೋರಿಸಿದ ವರ್ತನೆ ಮನೆಯವರನ್ನು ಹೆಚ್ಚು ಕಿರಿಕಿರಿ ಪಡುವಂತೆ ಮಾಡಿತ್ತು. ಟಾಸ್ಕ್ ಸಂದರ್ಭದಲ್ಲಿ ಧ್ರುವಂತ್ ಮಾತಿಗೆ ಝಳಕ್ ಕೊಟ್ಟರು. ನಿಯಮ ಉಲ್ಲಂಘನೆ ಮಾಡಿದರು.ಮನೆಮಂದಿ ಏನೇ ಹೇಳಿದರೂ ಕೇಳದೆ ವ್ಯಂಗ್ಯ ಮಾಡುತ್ತಿದ್ದರು. ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರಿಗೆ ಕೋಲಿನಿಂದ ಹೊಡೆಯುತ್ತಾ ಟಾಸ್ಕ್‌ನಲ್ಲಿ ತಲೆಹಾಕಿದರು. ನಿಲ್ಲಿಸು ಎಂದರೂ ಕೂಡ ಕೇಳದೆ ಮುಂದುವರಿಸಿದರು.ಈ ಎಲ್ಲ ಘಟನೆಗಳ ನಂತರ ಮನೆಯವರಿಗೆ ರಕ್ಷಿತಾ ವರ್ತನೆ ಕಿರಿಕಿರಿ ಉಂಟುಮಾಡಿತ್ತು.

ಬಿಗ್ ಬಾಸ್ ಮನೆಗೆ ಮತ್ತಷ್ಟು ಟಾಸ್ಕ್‌ಗಳು ಬಂದಂತೆ, ರಕ್ಷಿತಾ ತಮ್ಮ ಗೇಮ್‌ಪ್ಲೇ ಮತ್ತು ನಿರ್ಧಾರ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರಾ? ಅಥವಾ ಸದಸ್ಯರ ಅಭಿಪ್ರಾಯ ಸತ್ಯವಾಗುತ್ತದಾ? ಎನ್ನುವುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಬೇಕಾದ ವಿಷಯ.

Exit mobile version