ಬಿಗ್ ಬಾಸ್ ಕನ್ನಡ ಸೀಸನ್ 12 ಫೈನಾಲೆಗೆ ದಿನಗಣನೆ ಶುರುವಾಗಿರುವ ಸಂದರ್ಭದಲ್ಲಿ ಮನೆಯೊಳಗೆ ರೋಬೋಟ್ ಎಂಟ್ರಿ ಕೊಟ್ಟು ಭರ್ಜರಿ ಎಂಟರ್‌ಟೈನ್‌ಮೆಂಟ್ ನೀಡಿದೆ. ಫಿನಾಲೆ ಸಮೀಪಿಸುತ್ತಿದ್ದಂತೆ ಗಿಲ್ಲಿ ನಟ್ ಅಭಿಮಾನಿಗಳ ಕ್ರೇಜ್ ಶಿಖರಕ್ಕೇರಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಆಸ್ಕರ್ ಅವಾರ್ಡ್ ಲೆವೆಲ್‌ಗೆ ತಲುಪಿದೆ. ಇದೇ ಸಂದರ್ಭದಲ್ಲಿ ರೋಬೋಟ್ ಪ್ರವೇಶಿಸಿ ಎಲ್ಲರನ್ನೂ ನಗಿಸಿದ್ದಲ್ಲದೆ, ಬಿಗ್ ಬಾಸ್ ತಂಡದ ಜಾಣ್ಮೆಯನ್ನು ಮತ್ತೊಮ್ಮೆ ತೋರಿಸಿದೆ.
ರೋಬೋಟ್ ಎಂಟ್ರಿ ಮತ್ತು ಕಿಚ್ಚನ್ ಪ್ರಶ್ನೆ ಈ ವಾರದ ಎಪಿಸೋಡ್‌ನಲ್ಲಿ ದೊಡ್ಡ ಮನೆಗೆ ರೋಬೋಟ್ ಒಂದು ಅಚ್ಚರಿಯ ಎಂಟ್ರಿ ಕೊಟ್ಟಿತು. ಇದು ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಟೆಕ್ನಾಲಜಿ ಬಳಸಿದ ಘಟನೆ. ರೋಬೋಟ್‌ನೊಂದಿಗೆ ಮಾತನಾಡುತ್ತಾ ಕಿಚ್ಚ ಸುದೀಪ್ ಅವರು ಸ್ವಾಭಾವಿಕವಾಗಿ ಪ್ರಶ್ನಿಸಿದರು, “ನಿಮಗೆ ಇಷ್ಟದ ಸ್ಪರ್ಧಿ ಯಾರು?” ಎಂದು.
ಎಲ್ಲರೂ ಉತ್ತರಕ್ಕಾಗಿ ಕಾಯುತ್ತಿದ್ದರು. ಆದರೆ ರೋಬೋಟ್ ಚಾಣಾಕ್ಷತನದಿಂದ ಹೇಳಿತು. “ನನಗೆ ಸ್ಪಂದನಾ ಇಷ್ಟ” ಏಕೆ ಎಂದು ಕೇಳಿದಾಗ ರೋಬೋಟ್ ಹಾಸ್ಯಾಸ್ಪದ ಉತ್ತರ ನೀಡಿತು. “ನಾನು ಹುಡುಗ ಅಲ್ವಾ, ನಮ್ಮೂರು ಅವರ ಊರು ಹತ್ತಿರ ಇದೆ ಅದಕ್ಕೇನೇ” ಇದನ್ನು ಕೇಳಿ ಮನೆಯಲ್ಲಿ ಗಲಾಟೆಯೇ ಆಯಿತು.
ಮತ್ತೊಂದು ಪ್ರಶ್ನೆಗೆ ರೋಬೋಟ್ ಇನ್ನೊಂದು ಆಸಕ್ತಿಕರ ಉತ್ತರ ನೀಡಿತು. “ಅವರನ್ನು ಬಿಟ್ಟರೆ ನಿಮಗೆ ಯಾರು ಇಷ್ಟ?” ಎಂದು ಕೇಳಿದಾಗ ರೋಬೋಟ್ “ಜಾನ್ವಿ ” ಎಂದಿತು. “ನಾನು ಹುಡುಗ ಆದ್ರೂ ಆಂಟಿ ಇಷ್ಟ” ಎಂದು ಹೇಳಿತು. ಹಿಂದೆ ಧನುಷ್ ಅವರಿಗೆ “ಆಂಟಿ ಲವರ್” ಎಂದು ಕರೆದ್ದು ವೈರಲ್ ಆಗಿತ್ತು. ಈಗ ರೋಬೋಟ್ ಅದನ್ನೇ ರಿಪೀಟ್ ಮಾಡಿ ಎಲ್ಲರನ್ನೂ ನಗಿಸಿತು.
ಬಿಗ್ ಬಾಸ್ ಜಾಣ್ಮೆಯ ರಹಸ್ಯ ಇಲ್ಲಿ ಬಿಗ್ ಬಾಸ್ ತಂಡದ ಜಾಣ್ಮೆ ಗಮನಾರ್ಹ. ರೋಬೋಟ್ ಈಗ ಮನೆಯಲ್ಲಿರುವ ಯಾವುದೇ ಸ್ಪರ್ಧಿಯ ಹೆಸರು ಹೇಳಿದರೆ ಅದು ವಿವಾದಕ್ಕೆ ಕಾರಣವಾಗಬಹುದಿತ್ತು. ಆದ್ದರಿಂದ ಎಲಿಮಿನೇಟ್ ಆಗಿರುವ ಸ್ಪಂದನಾ ಮತ್ತು ಜಾನ್ವಿ ಹೆಸರುಗಳನ್ನು ಹೇಳಿಸಿ ಯಾವುದೇ ಗಲಾಟೆ ತಪ್ಪಿಸಲಾಗಿದೆ. ಈ ಚಾಣಾಕ್ಷತೆಗೆ ಕಿಚ್ಚ ಸುದೀಪ್ ಬಿದ್ದೂ ಬಿದ್ದೂ ನಕ್ಕರು. ಮನೆಯಲ್ಲಿ ಎಲ್ಲರೂ ರೋಬೋಟ್‌ನ ಉತ್ತರಕ್ಕೆ ಗಟ್ಟಿಯಾಗಿ ನಕ್ಕು ನಗಿಸಿದರು.
ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಗಿಲ್ಲಿ, ಧ್ರುವಂತ್, ಅಶ್ವಿನಿ, ಕಾವ್ಯಾ ಮತ್ತು ಇತರರು ಟ್ರೋಫಿಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ರೋಬೋಟ್ ಎಂಟ್ರಿಯಂತಹ ಫನ್ ಎಲಿಮೆಂಟ್‌ಗಳು ಶೋವನ್ನು ಇನ್ನಷ್ಟು ರೋಚಕಗೊಳಿಸಿವೆ. ಫೈನಾಲೆಯಲ್ಲಿ ಯಾರು ಗೆಲ್ಲುತ್ತಾರೋ? ಫ್ಯಾನ್ಸ್ ಆನ್‌ಲೈನ್ ವೋಟಿಂಗ್ ಮೂಲಕ ತೀರ್ಮಾನಿಸುತ್ತಿದ್ದಾರೆ.





