ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರ ಮೇಲೆ ಅಶ್ವಿನಿ ಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ನಾಗವಲ್ಲಿ ರೀತಿ ಡ್ಯಾನ್ಸ್ ಮಾಡುತ್ತಾರೆ ಎಂಬ ಆರೋಪವನ್ನು ಅಶ್ವಿನಿ ಗೌಡ ಅವರು ಇತರ ಸ್ಪರ್ಧಿಗಳ ಮುಂದೆ ಹೇಳಿದ್ದಾರೆ.
ಈ ವಿವಾದದ ಬಗ್ಗೆ ವಿವರಿಸಿದ ಅಶ್ವಿನಿ ಗೌಡ ಅವರು, ಮಧ್ಯರಾತ್ರಿ ಒಂದು ಅಥವಾ ಒಂದೂವರೆ ಗಂಟೆಗೆ ರಾರಾ ಹಾಡಿಗೆ ರಕ್ಷಿತಾ ಶೆಟ್ಟಿ ಡ್ಯಾನ್ಸ್ ಮಾಡಿದ್ದಾಳೆ. ಗಂಭೀರವಾಗಿ ಹೇಳುತ್ತಿದ್ದೇನೆ. ನಾನು ತಮಾಷೆ ಮಾಡುತ್ತಿಲ್ಲ. ಆಕೆಗೆ ಗಮನವೇ ಇರಲಿಲ್ಲ. ಏನೇನೋ ಮಾತನಾಡುತ್ತಿದ್ದಳು. ಲವ್ ಅಂತ ಏನೇನೋ ಹೇಳುತ್ತಿದ್ದಳು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ ಅವರು ಮನಃಪೂರ್ವಕವಾಗಿ ನಿರಾಕರಿಸಿದ್ದಾರೆ. ಸ್ಪಂದನಾ, ಮಂಜು ಭಾಷಿಣಿ, ಅಶ್ವಿನಿ ಎಸ್.ಎನ್, ಕಾವ್ಯ ಶೈವ ಮುಂತಾದ ಸ್ಪರ್ಧಿಗಳ ಮುಂದೆ ಈ ವಿಷಯವನ್ನು ಹೇಳಿಕೊಂಡು ಕಣ್ಣೀರು ಸುರಿಸಿದ್ದಾರೆ.
ನನ್ನ ಒಳಗೆ ಏನೋ ಇದೆ, ರಾರಾ ಸಾಂಗ್ ಹೇಳಿ ಡ್ಯಾನ್ಸ್ ಮಾಡುತ್ತಿದ್ದೇನೆ ಅಂತ ಅಶ್ವಿನಿ ಗೌಡ ಹೇಳುತ್ತಿದ್ದಾರೆ. ನನಗೆ ರಾರಾ ಸಾಂಗ್ ಬರುವುದೇ ಇಲ್ಲ. ಇದನ್ನೆಲ್ಲ ನಾನು ಮಾಡಿಲ್ಲ. ಅಶ್ವಿನಿ ಗೌಡ ಹೀಗೆಲ್ಲ ಹೇಳಿದರೆ ನನಗೆ ಭೂತ ಬರುತ್ತಾ ಅಂತ ಜನರು ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ? ನನಗೆ ನೋವಾಗುತ್ತದೆ ಎಂದು ರಕ್ಷಿತಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.