ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈಗ ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ಜೋಡಿ ಸಿಕ್ಕಾಪಟ್ಟೆ ಟ್ರೆಂಡಿಂಗ್. ದಿನವಿಡೀ “ಮಾಳು ಅಣ್ಣ.. ಮಾಳು ಅಣ್ಣ…” ಅಂತ ರಕ್ಷಿತಾ ಕರೆಯುತ್ತಾ ಇದ್ದಾರೆ. ಇವರಿಬ್ಬರ ಈ ಕ್ಯೂಟ್ ಬಾಂಡಿಂಗ್‌ಗೆ ಜನ ಫಿದಾ ಆಗಿದ್ದಾರೆ. ಇದೀಗ ಇವರ ನಡುವಿನ ಒಂದು ತಮಾಷೆಯ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
“ನನ್ನ ಸಾಂಗ್‌ನಲ್ಲಿ ನೀನೇ ಹೀರೋಯಿನ್ ಆಗು” ರಕ್ಷಿತಾ ಮಾಳು ಬಳಿ ಬಂದು, “ನಿಮ್ಮ ಸಾಂಗ್‌ನಲ್ಲಿ ನನ್ನನ್ನು ಹೀರೋಯಿನ್ ಮಾಡಿ ಅಣ್ಣ” ಅಂತ ಕೇಳಿಕೊಂಡಿದ್ದಾರೆ. ಮಾಳು: “ನೀನು ನನ್ನ ತಂಗಿ ಅಲ್ವಾ” ರಕ್ಷಿತಾ: “ಬಿಗ್ ಬಾಸ್ ಮನೆಯಲ್ಲಿ ನಾನು ನಿಮ್ಮ ತಂಗಿಯೇ… ಆದ್ರೆ ಸಾಂಗ್‌ನಲ್ಲಿ ಹೀರೋಯಿನ್ ಆಗ್ತೀನಿ” ಕೊನೆಗೆ ಮಾಳು ನಗುತ್ತಾ “ಓಕೆ ಓಕೆ” ಅಂತ ಹೇಳಿ ಒಪ್ಪಿಗೆ ಕೊಟ್ಟಿದ್ದಾರೆ.
“ರಘುಗೆ ಅಪ್ಪನ್ ಕ್ಯಾರೆಕ್ಟರ್ ಕೊಡಿ ಅಂತೆ” ಈ ಸಂಭಾಷಣೆ ನಡೆಯುತ್ತಿರುವಾಗಲೇ ಮ್ಯೂಟಂಟ್ ರಘು ಅಲ್ಲೇ ನಿಂತಿದ್ದರು. ರಕ್ಷಿತಾ ತಕ್ಷಣ ರಘು ಕಾಲೆಳೆದು, “ನಾನು ಹೀರೋಯಿನ್ ಆಗ್ತೀನಿ. ರಘು ಅವರಿಗೆ ಅಪ್ಪನ್ ಕ್ಯಾರೆಕ್ಟರ್ ಕೊಡಿ ಅಣ್ಣ” ಅಂತ ಹೇಳಿದ್ದಾರೆ. ಇದನ್ನು ಕೇಳಿ ರಘು ಗಟ್ಟಿಯಾಗಿ ನಗಿದ್ದು, ಮನೆಯಲ್ಲೇ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.
ಉತ್ತರ ಕರ್ನಾಟಕದ ಸೂಪರ್ ಹಿಟ್ “ನಾ ಡ್ರೈವರಾ..ನೀ ನನ್ನ ಲವ್ವರಾ” ಸಾಂಗ್‌ನಿಂದ ರಾತ್ರೋರಾತ್ರಿ ಸ್ಟಾರ್ ಆದ ಮಾಳು ನಿಪನಾಳ ಈಗ ಬಿಗ್ ಬಾಸ್ ಮನೆಯಲ್ಲೂ ತನ್ನದೇ ಆದ ಮಾಸ್ ಗೇಮ್ ಆಡುತ್ತಿದ್ದಾರೆ. ರಕ್ಷಿತಾ ಜೊತೆಗೆ ಇವರ ಕಾಂಬಿನೇಷನ್ ಈ ವಾರದ ಟಾಪ್ ಟ್ರೆಂಡಿಂಗ್ ಟಾಪಿಕ್ ಆಗಿದೆ.





