ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ತೀವ್ರ ಕದಾಟದ ಹಂತಕ್ಕೆ ಬಂದು ನಿಂತಿದೆ. ಮನೆಯೊಳಗೆ ಮತ್ತೊಮ್ಮೆ ‘ಜೋಡಿ ಟಾಸ್ಕ್’ ಆರಂಭವಾಗಿದ್ದು, ಈ ಬಾರಿ ಗೆದ್ದ ಜೋಡಿ ನೇರವಾಗಿ ಮುಂದಿನ ಕ್ಯಾಪ್ಟನ್ ಆಗಲಿದೆ. ಆದ್ದರಿಂದಲೇ ಎಲ್ಲರೂ ಗೆಲ್ಲಲೇಬೇಕೆಂಬ ಪಣ ತೊಟ್ಟು ಆಡುತ್ತಿದ್ದಾರೆ. ಆದರೆ ಈ ಟಾಸ್ಕ್‌ನಲ್ಲಿ ಅತ್ಯಂತ ಗಮನ ಸೆಳೆಯುತ್ತಿರುವ ಎರಡು ಜೋಡಿಗಳು – ಗಿಲ್ಲಿ ನಟ-ಕಾವ್ಯಾ ಶೈವ ಮತ್ತು ರಾಶಿಕಾ ಶೆಟ್ಟಿ-ಸೂರಜ್ ಸಿಂಗ್. ಇವರ ನಡುವೆ ನಡೆಯುತ್ತಿರುವ ತೀವ್ರ ಪೈಪೋಟಿ ಪ್ರೇಕ್ಷಕರನ್ನು ಬಾಯಿ ಬಿಟ್ಟು ನೋಡುವಂತೆ ಮಾಡುತ್ತಿದೆ.
ನಿನ್ನೆಯ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಾವೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಜೋಡಿಗಳು ಗಿಲ್ಲಿ ನಟ-ಕಾವ್ಯಾ ಶೈವ, ರಾಶಿಕಾ ಶೆಟ್ಟಿ – ಸೂರಜ್ ಸಿಂಗ್, ಸ್ಪಂದನಾ – ಅಭಿಷೇಕ್, ಅಶ್ವಿನಿ ಗೌಡ – ರಘು, ಮಾಳು ನಿಪನಾಳ – ರಕ್ಷಿತಾ ಶೆಟ್ಟಿ, ಚೈತ್ರಾ ಕುಂದಾಪುರ – ರಜತ್ ಕಿಶನ್. ಆದರೆ ದುರದೃಷ್ಟವಶಾತ್ ಧ್ರುವಂತ್ ಅವರನ್ನು ಯಾರೂ ಆಯ್ಕೆ ಮಾಡಲಿಲ್ಲ. ಅವರು ಒಂಟಿ ಆಟಗಾರರಾಗಿ ಉಳಿದಿದ್ದಾರೆ.
ಟಾಸ್ಕ್‌ನ ನಿಯಮ
ಚೆಂಡುಗಳನ್ನು ಸಂಗ್ರಹಿಸಿ, ಎದುರಾಳಿಗಳಿಂದ ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಚೆಂಡು ಹೊಂದಿರುವ ಜೋಡಿ ಗೆಲ್ಲುತ್ತದೆ ಮತ್ತು ಮುಂದಿನ ಕ್ಯಾಪ್ಟನ್ ಆಗುತ್ತದೆ. ಈ ಟಾಸ್ಕ್ ಗೆದ್ದರೆ ಗೆಲುವು ಮಾತ್ರವಲ್ಲ, ಪವರ್ ಕೂಡ ಸಿಗುತ್ತದೆ. ಹೀಗಾಗಿ ಗಿಲ್ಲಿ-ಕಾವ್ಯಾ ಮತ್ತು ರಾಶಿಕಾ-ಸೂರಜ್ ಜೋಡಿಗಳು ಒಬ್ಬರಿಗೊಬ್ಬರು ಕಿರುಚಿಕೊಂಡು ಆಡುತ್ತಿದ್ದಾರೆ.
ಗಿಲ್ಲಿ ನಟ ಈ ಟಾಸ್ಕ್ ಅನ್ನು ತೀರಾ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಪ್ರೋಮೋದಲ್ಲಿ ಅವರ ಡೈಲಾಗ್ “I Want To Play This Pattern” ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತ ರಾಶಿಕಾ ಶೆಟ್ಟಿ ಗಿಲ್ಲಿ-ಕಾವ್ಯಾ ಜೋಡಿಯನ್ನು ಸೋಲಿಸಿ ಟಾಸ್ಕ್‌ನಿಂದ ಹೊರ ಹಾಕಬೇಕೆಂದು ನಿರ್ಧಾರ ಮಾಡಿದ್ದಾರೆ. ಸೂರಜ್ ಜೊತೆ ಚರ್ಚಿಸುತ್ತಾ “ಇವರಿಬ್ಬರನ್ನೂ ಎಲಿಮಿನೇಟ್ ಮಾಡಲೇಬೇಕು” ಎಂದು ಮಾತನಾಡಿದ್ದಾರೆ.
ಇದಕ್ಕೆ ಕಾರಣವೆನೇಂದರೆ ಟಾಸ್ಕ್‌ಗೂ ಮುಂಚೆಯೇ ಗಿಲ್ಲಿ-ರಾಶಿಕಾ ನಡುವೆ ನಡೆದ ತೀವ್ರ ಮಾತಿನ ಚಕಮಕಿ. ರಾಶಿಕಾ ಕ್ಯಾಮೆರಾ ಮುಂದೆಯೇ ಕಾವ್ಯಾ ಅವರು ಯಾವಾಗಲೂ ಗಿಲ್ಲಿಗೆ ಮಾತ್ರ ಸಪೋರ್ಟ್ ಮಾಡುತ್ತಾರೆಂದು ಟಾಂಗ್ ಕೊಟ್ಟಿದ್ದರು. ಇದಕ್ಕೆ ಕಾವ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ತಾಕತ್ತಿದ್ದರೆ ಬೇರೆಯವರ ಜೊತೆ ಫ್ರೆಂಡ್‌ಶಿಪ್ ಮಾಡಿ ತೋರಿಸಿ” ಎಂದು ಅಬ್ಬರಿಸಿದ್ದರು. ಆ ವಾದವೇ ಈಗ ಜೋಡಿ ಆಯ್ಕೆಯಲ್ಲೂ ಪರಿಣಾಮ ಬೀರಿದೆ.
ಇನ್ನು ಈ ವಾರದ ನಾಮಿನೇಶನ್‌ನಲ್ಲಿ ಡೇಂಜರ್ ಝೋನ್‌ಗೆ ಬಂದವರು, ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ನಾಮಿನೇಶನ್‌ನಲ್ಲಿದ್ದಾರೆ. ಆದರೆ ಅಶ್ವಿನಿ ಗೌಡ ಮತ್ತು ರಘು ಈ ಬಾರಿ ಸೈಲೆಂಟ್ ಆಟದಿಂದ ನಾಮಿನೇಶನ್‌ನಿಂದ ತಪ್ಪಿಸಿಕೊಂಡಿದ್ದಾರೆ.
ಈಗ ಪ್ರಶ್ನೆ ಒಂದೇ – ಚೆಂಡುಗಳ ಯುದ್ಧದಲ್ಲಿ ಯಾವ ಜೋಡಿ ಗೆಲ್ಲಲಿದೆ? ಗಿಲ್ಲಿ-ಕಾವ್ಯಾ ತಮ್ಮ ಹಳೆಯ ಬಾಂಡಿಂಗ್‌ನಿಂದಲೇ ಗೆಲುವು ಸಾಧಿಸುತ್ತಾರಾ? ಅಥವಾ ರಾಶಿಕಾ-ಸೂರಜ್ ತಮ್ಮ ರಣತಂತ್ರದಿಂದ ಜಯ ಸಾಧಿಸುತ್ತಾರಾ? ಪ್ರೇಕ್ಷಕರ ಕುತೂಹಲ ಗರಿಷ್ಠ ಮಟ್ಟಕ್ಕೆ ಏರಿದೆ.
